More

  ಭೂಮಿ ಕಾಪಾಡುವುದು ಎಲ್ಲರ ಕರ್ತವ್ಯ: ಬಿಷಷ್ ಡಾ.ಬರ್ನಾಡ್ ಮೊರಾಸ್ ಸಲಹೆ

  ಮೈಸೂರು: ನಮ್ಮ ಭೂಮಿ ನಾವು ವಾಸಿಸುವ ಸ್ಥಳ ಎಲ್ಲರ ಮನೆ ನಮ್ಮ ಭೂಮಿಯಾಗಿದ್ದು ಅದನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಬಿಷಷ್ ಡಾ.ಬರ್ನಾಡ್ ಮೊರಾಸ್ ಸಲಹೆ ನೀಡಿದರು.
  ಮೈಸೂರು ಧರ್ಮಕ್ಷೇತ್ರ, ದಿ ಆರ್ಗನೈಜೇಷನ್ ಫಾರ್ ದ ಡೆವಲಪ್‌ಮೆಂಟ್‌ಆಫ್ ಪೀಪಲ್ (ಓಡಿಪಿ) ಮತ್ತು ಭೂಸಿರಿ ಡೆವಲಪ್‌ಮೆಂಟ್ ಫೌಂಡೇಷನ್ ಸಹಯೋಗದೊಂದಿಗೆ ಬನ್ನಿಮಂಟಪದ ಓಡಿಪಿ ಸಂಸ್ಥೆ ಆವರಣದಲ್ಲಿ ಮಂಗಳವಾರ ‘ನಮ್ಮ ಭೂಮಿ- ನಮ್ಮ ಭವಿಷ್ಯ’ ಘೋಷ ವಾಕ್ಯದೊಂದಿಗೆ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
  ನಾವು ತಿಳಿದುಕೊಂಡಿರುವಂತೆ ನಮ್ಮ ನಿವೇಶನ, ಜಮೀನುಗಳು ಮಾತ್ರ ಭೂಮಿಯಲ್ಲ. ಇಡೀ ವಿಶ್ವವೇ ನಮ್ಮ ಭೂಮಿಯಾಗಿದೆ. ಅದಕ್ಕಾಗಿ ವಿಶ್ವ ಗುರು ಪೋಪ್ ಹೇಳುತ್ತಾರೆ. ನಮ್ಮ ಭೂಮಿ ನಾವು ವಾಸಿಸುವ ಸ್ಥಳ, ಎಲ್ಲರ ಮನೆ ನಮ್ಮ ಭೂಮಿಯಾಗಿದ್ದು ಅದನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
  ನಗರ ಪಾಲಿಕೆ, ಸರ್ಕಾರದ ಅಧಿಕಾರಿಗಳು ನಾಡನ್ನು ಸುಂದರವಾಗಿಸಲು ಸಾಕಷ್ಟು ಯೋಜನೆಗಳನ್ನು ತಂದು ನಗರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ನಾವುಗಳು ರಸ್ತೆ, ಉದ್ಯಾನಕ್ಕೆ ಕಸ ಸುರಿಯುತ್ತಿದ್ದು, ಇದನ್ನು ಪ್ರಾಣಿಗಳು ತಿನ್ನುತ್ತವೆ. ಇದರಿಂದ ಪರಿಸರ ಮಾಲಿನ್ಯವಾಗಿ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಭೂಮಿ ರಕ್ಷಣೆಯಲ್ಲಿ ತೊಡಬೇಕು ಎಂದರು.
  ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಯೋಗೇಶ್ ಮಾತನಾಡಿ, ವಿಶ್ವದ ಭೂ ಪ್ರದೇಶದಲ್ಲಿ ಭಾರತದ ಭೂ ಪ್ರದೇಶ ಶೇ. 4ರಷ್ಟಿದ್ದು, ಜನಸಂಖ್ಯೆ ಶೇ.17 ರಷ್ಟಿದೆ. ನೀರಿನ ಪ್ರಮಾಣ ಕೇವಲ ಶೇ.2.4ರಷ್ಟಿದೆ. ಇವೆಲ್ಲವನ್ನೂ ದುರ್ಬಳಕೆ ಮಾಡುತ್ತಿದ್ದೇವೆ. ಆದ್ದರಿಂದ ವಿಶ್ವ ಸಂಸ್ಥೆಯೂ ನಮ್ಮ ಭೂಮಿ ನಮ್ಮ ಭವಿಷ್ಯ ಎಂದು ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ. ವಿಶ್ವಪರಿಸರ ದಿನಾಚರಣೆಯಲ್ಲಿ ಭಾಗವಹಿವುದು ಅಷ್ಟೇ ನಮ್ಮ ಕರ್ತವ್ಯವಲ್ಲ. ಪರಿಸರ ಕಾಪಾಡುವುದು ಮುಖ್ಯ ಎಂದು ಹೇಳಿದರು.
  ಓಡಿಪಿ ಉಪಾಧ್ಯಕ್ಷ ಅಲ್ಫ್ರೆಡ್ ಜಾನ್ ಮೆಂಡೋನ್ಸಾ, ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಡಾ.ಸಿ.ರಾಮಚಂದ್ರ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಜಯರಾಮು, ಸಂತ ಫಿಲೋಮಿನಾ ಪ್ರಧಾನ ದೇವಾಲಯ ಫಾದರ್ ಸ್ಟ್ಯಾನಿ ಡಿ ಅಲ್ಮೇಡಾ, ಒಡಿಪಿ ಮತ್ತು ಬಿ ಡಿಎಫ್ ಸಂಸ್ಥೆ ನಿರ್ದೇಶಕ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಹಿರಿಯ ವೈಜ್ಞಾನಿಕ ಅಧಿಕಾರಿ ಎಂ.ಸಿ.ನಿತ್ಯಾನಂದ, ಗ್ರಾಮ ವಿಕಾಸ ಸ್ವ ಸಹಾಯ ಸಂಘದ ಮಹಾ ಒಕ್ಕೂಟದ ಅಧ್ಯಕ್ಷ ಆರೋಗ್ಯಾ, ನಿರ್ದೇಶಕರು, ಸಿಬ್ಬಂದಿ ಇದ್ದರು.
  ವಿವಿಧ ಮಹಿಳಾ ಸ್ವಸಹಾಯ ಸಂಘದಿಂದ ವಿವಿಧ ಕೃಷಿ ಉತ್ಪನ, ಉಪಕರಣಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

  See also  ವ್ಹೀಲಿಂಗ್ ಮಾಡುತ್ತಿದ್ದವನ ಸೆರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts