More

    ಹುಬ್ಬಳ್ಳಿಯಲ್ಲಿ ಐಪಿಎಲ್ ಫ್ಯಾನ್ ಪಾರ್ಕ್

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಂತೋಷನಗರದ ಶಿರೂರ್ ಲೇಔಟ್​ನಲ್ಲಿರುವ ಬಿಡಿಕೆ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಲಾಗಿದ್ದು, ಮೇ 18 ಮತ್ತು 19ರಂದು ನಡೆಯುವ ಪಂದ್ಯಗಳ ನೇರ ಪ್ರಸಾರವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿನಿಧಿ ಸತ್ಯಪಾಲ ನಿಕಾಡಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 19ರಂದು ಸನ್​ರೈಸರ್ಸ್ ಹೈದರಾಬಾದ್-ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್-ಕೊಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಫ್ಯಾನ್ ಪಾರ್ಕ್​ನಲ್ಲಿ 32 ಅಡಿ ಅಗಲ ಹಾಗೂ 18 ಅಡಿ ಎತ್ತರದ ಪರದೆಯಲ್ಲಿ ಈ ಮೂರು ಪಂದ್ಯಗಳನ್ನು ವೀಕ್ಷಿಸಬಹುದು. ಸಾರ್ವಜನಿಕರಿಗೆ ಕ್ರೀಡಾಂಗಣದಲ್ಲಿ ಕುಳಿತು ನೋಡುವಂಥ ಭಾವನೆ ಬರಲಿ ಎಂಬುದು ಫ್ಯಾನ್ ಪಾರ್ಕ್​ನ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

    ಏಕಕಾಲಕ್ಕೆ 9ರಿಂದ 10 ಸಾವಿರ ಜನರು ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ. ಲಕ್ಕಿ ಡೀಪ್ ಮೂಲಕ ವೀಕ್ಷಕರಿಗೆ ಟೀಮ್ ಜರ್ಸಿ ಗೆಲ್ಲುವ ಅವಕಾಶ ಇರಲಿದೆ. ಚಿತ್ರಕಲೆ, ಗೇಮ್ ಶೋ, ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. ಐಪಿಎಲ್ ಪಂದ್ಯಗಳು ನಡೆಯದ 50 ನಗರಗಳಲ್ಲಿ ಈ ಬಾರಿ ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts