More

    ಒಲಿಂಪಿಕ್ಸ್​ ವೀಡಿಯೊದಲ್ಲಿ ‘ಇಂಕೇಂ ಇಂಕೇಂ ಇಂಕೇಂ ಕಾವಲೇ…’ ಹಾಡು; ವಿಜಯ ದೇವರಕೊಂಡ ಏನೇಳಿದ್ರು ಗೊತ್ತಾ?

    ಹೈದರಾಬಾದ್​​: ವಿಜಯ್ ದೇವರಕೊಂಡ ಮತ್ತು ಸ್ಟಾರ್ ಡೈರೆಕ್ಟರ್ ಪರಶುರಾಮ್ ಕಾಂಬಿನೇಷನ್​​ನಲ್ಲಿ ಮೂಡಿಬಂದಿರುವ ‘ಗೀತ ಗೋವಿಂದಂ’ ಸಿನಿಮಾ ಎಷ್ಟರ ಮಟ್ಟಿಗೆ ಸಕ್ಸಸ್ ಕಂಡಿದೆ ಅಂತ ಹೇಳಬೇಕಾಗಿಲ್ಲ. ಫ್ಯಾಮಿಲಿ ಎಂಟರ್‌ಟೈನರ್​ ಆದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.

    ಇದನ್ನು ಓದಿ: ಜೂನ್​​ 21ಕ್ಕೆ ಥಿಯೇಟರ್​​ಗಳಲ್ಲಿ ರೀರಿಲೀಸ್​ ಆಗಲಿದೆ ಹೃತಿಕ್ ರೋಷನ್ ಅಭಿನಯದ ಈ ಸಿನಿಮಾ

    ಈ ಚಿತ್ರದಲ್ಲಿನ ಗೋಪಿಸುಂದರ್ ಸಂಗೀತ ಸಂಯೋಜನೆಯ ಹಾಡುಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಈ ಸಿನಿಮಾದ ‘ಇಂಕೇಂ ಇಂಕೇಂ ಇಂಕೇಂ ಕಾವಲೇ..’ ಹಾಡಿಗೆ ಮತ್ತೊಂದು ಗೌರವ ಸಿಕ್ಕಿದೆ. ಒಲಿಂಪಿಕ್ಸ್ ಸಮಿತಿಯು ತನ್ನ ಅಧಿಕೃತ ಪುಟದಲ್ಲಿ ಈ ಹಾಡನ್ನು ಆಧರಿಸಿ ವೀಡಿಯೊ ಮಾಡಿ ಗಮನ ಸೆಳೆಯುತ್ತಿದೆ.

    ವಿಶ್ವದ ಮೊದಲ ಕ್ರೀಡಾಕೂಟವಾದ ಒಲಿಂಪಿಕ್ಸ್ ಜುಲೈ 26ರಂದು ಪ್ಯಾರಿಸ್‌ನಲ್ಲಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ ಸಮಿತಿ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಆರಂಭಿಸಿದ್ದಾರೆ. ಒಲಿಂಪಿಕ್ಸ್‌ನ ಅಧಿಕೃತ ಸಾಮಾಜಿಕ ಖಾತೆಗಳಲ್ಲಿ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇತ್ತೀಚೆಗೆ ಒಲಿಂಪಿಕ್ ಸಮಿತಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಐಫೆಲ್ ಟವರ್ ಜತೆಗೆ ಪ್ಯಾರಿಸ್‌ನ ಸೌಂದರ್ಯವನ್ನು ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿತು. ಅದರಲ್ಲಿ ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಒಲಿಂಪಿಕ್ ಐದು ಉಂಗುರಗಳ ಚಿಹ್ನೆಯನ್ನು ತೋರಿಸುವ ವೀಡಿಯೊವನ್ನು ಮಾಡಲಾಗಿದೆ.

    ಆ ವೀಡಿಯೊದ ಹಿನ್ನಲೆಯಲ್ಲಿ ‘ಇಂಕೇಂ ಇಂಕೇಂ ಇಂಕೇಂ ಕಾವಲೇ..’ ಹಾಡಿನ ಮ್ಯೂಸಿಕ್​​ ಅನ್ನು ಸೇರಿಸಲಾಗಿದೆ ಈ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ‘ಕೆಲವು ಹಾಡುಗಳು ಎಂದೆಂದಿಗೂ ವಿಶೇಷವಾಗಿ ಉಳಿಯುತ್ತವೆ’ ಎಂಬ ಶೀರ್ಷಿಕೆಯೊಂದಿಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    See also  ಅಧ್ಯಯನ, ಅನುಭವದಿಂದ ಸಾಹಿತ್ಯ ರಚನೆ; ಸಾಹಿತಿ ಡಾ.ಗವಿಸಿದ್ದಪ್ಪ ಹಂದ್ರಾಳ

    ಐಫೆಲ್ ಟವರ್‌ನ ಹೊಸ ನೋಟವನ್ನು ಯಾರು ಇಷ್ಟಪಡುತ್ತಾರೆ ಎಂದು ಒಲಿಂಪಿಕ್ಸ್ ಸಂಘಟಕರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಗ್ಲೋಬಲ್ ಗೇಮ್ಸ್​​ನಲ್ಲಿ ಗೀತಾಗೋವಿಂದಂ ಚಿತ್ರದ ಹಾಡನ್ನು ಹಿನ್ನಲೆಯಲ್ಲಿ ಬಳಸಿರುವುದು ನಿಜಕ್ಕೂ ವಿಶೇಷ. ಒಲಿಂಪಿಕ್ಸ್‌ನ ಅಧಿಕೃತ ಪುಟದಲ್ಲಿ ಗೀತ ಗೋವಿಂದಂ ಹಾಡಿಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಗೀತಾ ಗೋವಿಂದಂ ಹಾಡನ್ನು ಒಲಿಂಪಿಕ್ಸ್‌ನಲ್ಲಿ ಬಳಸಲಾಗಿದೆಯೇ? ವಾವ್.. ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​​)

    ಹೋಟೆಲ್​ ಸ್ಟೈಲ್​ ಹರ ಭಾರಾ ಕಬಾಬ್ ಮನೆಯಲ್ಲೇ ಮಾಡಿ; ಹೇಗೆ ಅಂತಿರಾ..ಇಲ್ಲಿದೆ ವಿಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts