More

  ‘ನಾಯಕ್​’ ನಾಯಕನಾಗಿ ಸೆಲೆಕ್ಟ್​ ಆಗಿದ್ದ ಶಾರುಖ್; ಸಿನಿಮಾ ಕೈತಪ್ಪಿದ್ದಕ್ಕೆ ಅವರೇ ಕೊಟ್ಟ ಉತ್ತರ…

  ಮುಂಬೈ: ಅನಿಲ್ ಕಪೂರ್ ಅಭಿನಯದ ನಾಯಕ್​ ಸಿನಿಮಾ ಬಿಡುಗಡೆಯಾಗಿ ಸುಮಾರು 23 ವರ್ಷಗಳಾಗಿದೆ. ರಾಜಕೀಯ ಕಥಾಹಂದರ ಇರುವ ನಾಯಕ್​ ಸಿನಿಮಾ ಥಿಯೇಟರ್​ಗಳಲ್ಲಿ ಅಂದುಕೊಂಡಂತೆ ಸಕ್ಸಸ್​​ ಕಾಣಲಿಲ್ಲವಾದರೂ ಜನರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಲನಚಿತ್ರವು ಟಿವಿಯಲ್ಲಿ ಎಲ್ಲರಿಗೂ ಇಷ್ಟವಾಯಿತು, ವಿಷಯವೆಂದರೆ ಈ ಚಿತ್ರಕ್ಕೆ ನಾಯಕನಾಗಿ ಮೊದಲು ಆಯ್ಕೆ ಆಗಿದ್ದು ಅನಿಲ್​ ಕಪೂರ್​​ ಅಲ್ಲ.. ಶಾರುಖ್​ ಖಾನ್​ ಆಯ್ಕೆ ಆಗಿದ್ದರು.

  ಇದನ್ನು ಓದಿ: ಒಲಿಂಪಿಕ್ಸ್​ ವೀಡಿಯೊದಲ್ಲಿ ‘ಇಂಕೇಂ ಇಂಕೇಂ ಇಂಕೇಂ ಕಾವಲೇ…’ ಹಾಡು; ವಿಜಯ ದೇವರಕೊಂಡ ಏನೇಳಿದ್ರು ಗೊತ್ತಾ?

  ಶಂಕರ್ ನಿರ್ದೇಶನದ ನಾಯಕ್‌ ಸಿನಿಮಾಗೆ ಸಹಿ ಹಾಕಿದ್ದಾಗಿ ಸ್ವತಃ ಶಾರುಖ್ ಖಾನ್ ಅವರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶಾರುಖ್ ಚಿತ್ರಕ್ಕೆ ಸಹಿ ಹಾಕಲು ಶಂಕರ್ ಅವರಿಂದ 1 ರೂಪಾಯಿ ಸಂಭಾವನೆ ಕೂಡ ತೆಗೆದುಕೊಂಡಿದ್ದರಂತೆ. ಜತೆಗೆ ಒಂದೇ ಬಾರಿಗೆ ಹಲವು ಡೇಟ್‌ಗಳನ್ನು ನೀಡಲು ಸಿದ್ಧನಿದ್ದೆ ಎಂದು ಹೇಳಿದ್ದಾರೆ.

  ಈ ಸಿನಿಮಾ ನಾಯರ್​ ಶಂಕರ್ ಅವರ ತಮಿಳು ಚಿತ್ರ ಮಧುಲ್ವನ್​​ನ ಹಿಂದಿ ರಿಮೇಕ್ ಆಗಿತ್ತು. ಮೂಲ ತಮಿಳು ಚಿತ್ರ ನನಗೆ ತುಂಬಾ ಇಷ್ಟವಾಯ್ತು. ಆದರೆ ಈ ಚಿತ್ರದಲ್ಲಿ ನಟಿಸುವುದು ನನಗೆ ಸರಿ ಎನ್ನಿಸಲಿಲ್ಲ. ನಂತರ ನಾನು ನಿರಾಕರಿಸಿದೆ, ಅದಕ್ಕೆ ಕಾರಣವನ್ನು ಹೇಳಿದೆ ಎಂದಿದ್ದಾರೆ. ತಮಿಳಿನಲ್ಲಿ ಇಡೀ ದಿನ ಮುಖ್ಯಮಂತ್ರಿಯಾಗಿರುವುದು ಅದ್ಭುತವಾಗಿ ಕೆಲಸ ಮಾಡಿದೆ. ಆದರೆ ಉತ್ತರ ಭಾರತದಲ್ಲಿ ಈ ಪರಿಕಲ್ಪನೆ ಇಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು.

  ಅದಕ್ಕಾಗಿಯೇ ಈ ಸಿನಿಮಾದಲ್ಲಿ ಕೆಲಸ ಮಾಡಲು ನಿರಾಕರಿಸಿದೆ ಎಂದು ಹೇಳಿದ್ದಾರೆ. ಅದಷ್ಟೆ ಅಲ್ಲದೆ ಅವರ ಸಹಿ ಮೊತ್ತವು ಇನ್ನೂ ನನ್ನ ಬಳಿ ಇದೆ. ದಿನಾಂಕಗಳ ಬಗ್ಗೆ ನನ್ನ ಭರವಸೆ ಇನ್ನೂ ಇದೆ. ಖಂಡಿತವಾಗಿಯೂ ಅವರ ಜತೆ ಕೆಲಸ ಮಾಡಲು ಬಯಸುವೆ ಎಂದಿದ್ದಾರೆ. (ಏಜೆನ್ಸೀಸ್​)

  ಜೂನ್​​ 21ಕ್ಕೆ ಥಿಯೇಟರ್​​ಗಳಲ್ಲಿ ರೀರಿಲೀಸ್​ ಆಗಲಿದೆ ಹೃತಿಕ್ ರೋಷನ್ ಅಭಿನಯದ ಈ ಸಿನಿಮಾ

  See also  ತಮಿಳಿಗೆ ಸತೀಶ್ ನೀನಾಸಂ; ನಾಡೋಡಿಗಳ್ ಶಶಿಕುಮಾರ್ ಜತೆ ನಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts