More

    ನೇಪಾಳದಲ್ಲಿ ಸಂಭವಿಸಿದ ಭೂಕಂಪಕ್ಕೆ ಕುಸಿಯಿತಾ ಮೌಂಟ್ ಎವರೆಸ್ಟ್​?

    ಬೀಜಿಂಗ್​: ಜಗತ್ತಿನಲ್ಲಿ ಅತಿ ಎತ್ತರದ ಪರ್ವತ ಮೌಂಟ್​ ಎವರೆಸ್ಟ್​ಅನ್ನು ಈವರೆಗೆ ಮೂರು ಬಾರಿ ಅಳೆಯಲಾಗಿದೆ. ಇದು ಅತಿ ಎತ್ತರದ ಪರ್ವತ ಎಂದು ಅರಿವಾಗಿದ್ದು 1955ರಲ್ಲಿ. ಭಾರತೀಯ ಪರ್ವತಾರೋಹಿಗಳು ಇದರ ನಿಖರ ಎತ್ತರವನ್ನು ಕಂಡು ಹಿಡಿದು, 8,848 ಮೀಟರ್​ ಅಥವಾ 20,029 ಅಡಿಗಳು ಎಂದು ತೋರಿಸಿದ್ದರು. ಅಂದಿನಿಂದಲೂ ಇದೇ ಎತ್ತರವನ್ನು ಸರ್ವಮಾನ್ಯವಾಗಿ ಉಪಯೋಗಿಸುತ್ತ ಬರಲಾಗಿದೆ.

    ಇದಾದ ಬಳಿಕ 1975 ಹಾಗೂ 2005ರಲ್ಲಿ ಚೀನಿಯರು ಕೂಡ ಇದರ ಲೆಕ್ಕವನ್ನು ಅಳೆದಿದ್ದರು. ಕ್ರಮವಾಗಿ 8,848.13 ಮೀಟರ್​ ಹಾಗೂ 8,844 ಮಿಟರ್​ ಎಂದು ತಿಳಿಸಿದ್ದರು. ಒಟ್ಟಾರೆ ಈವರೆಗೆ ಮೂರು ಬಾರಿ ಇದರ ಎತ್ತರವನ್ನು ಅಳೆಯಲಾಗಿದೆ. ಮೂರು ಬಾರಿಯೂ ಇದರ ಎತ್ತರದಲ್ಲಿ ಅಂಥ ವ್ಯತ್ಯಾಸವೇನೂ ಕಂಡುಬಂದಿಲ್ಲ. ಆದರೆ, ಇದೀಗ ಮತ್ತೊಮ್ಮೆ ಇದರ ಎತ್ತರವನ್ನು ಲೆಕ್ಕ ಹಾಕಲು ಚೀನಾ ಹಾಗೂ ನೇಪಾಳಗಳ ಜಂಟಿ ತಂಡವೊಂದು ಮುಂದಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.

    ಇದನ್ನೂ ಓದಿ; ಲಾಕ್​ಡೌನ್​ ಸಮಯದಲ್ಲಿ ಸರ್ಕಾರದ ನಿರ್ದೇಶನ ಪಾಲಿಸದ ತಿರುಪತಿ ದೇಗುಲ ಮಂಡಳಿ, ಕಾರ್ಮಿಕ ಸಂಘಟನೆಗಳ ಆಕ್ರೋಶ

    ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ ಭಾರಿ ಭೂಕಂಪಕ್ಕೆ ಇಡೀ ರಾಷ್ಟ್ರವೇ ನಲುಗಿ ಹೋಗಿತ್ತು. ರಾಜಧಾನಿ ಕಾಠ್ಮಂಡು ಸಂಪೂರ್ಣವಾಗಿ ಜರ್ಜರಿತವಾಗಿತ್ತು. ರಿಕ್ಟರ್​ ಮಾಪಕದಲ್ಲಿ 8.1 ತೀವ್ರತೆ ದಾಖಲಿಸಿದ್ದ ಭೂಕಂಪಕ್ಕೆ ಹಿಮಾಲಯದ ತಪ್ಪಲಿನಲ್ಲೂ ಭೂಮಿ ಅದುರಿತ್ತು. ಹೀಗಾಗಿ ಸಹಜವಾಗಿಯೇ ಮೌಂಟ್​ ಎವರೆಸ್ಟ್​ ಮೇಲೂ ಈ ಭೂಕಂಪದ ಪರಿಣಾಮಗಳಾಗಿರಬಹುದು ಎಂಬುದು ಭೂಗೋಳಶಾಸ್ತ್ರಜ್ಞರ ಲೆಕ್ಕಾಚಾರ. ಇದನ್ನು ಕಂಡುಕೊಳ್ಳುವ ಸಲುವಾಗಿಯೇ ಚೀನಿ ಹಾಗೂ ನೇಪಾಳ ಭೂಗೋಳಶಾಸ್ತ್ರಜ್ಞರು, ಪರ್ವತಾರೋಹಿಗಳು ಹಾಗೂ ಅಧಿಕಾರಿಗಳ ಸೇರಿ ಒಟ್ಟು 53 ಜನರ ತಂಡ ಸಜ್ಜಾಗಿದೆ.

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪರ್ವತಾರೋಹಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಪರ್ವತದ ಎತ್ತರ ಅಳೆಯಲು ಈ ಅವಧಿಯೇ ಸೂಕ್ತ ಎಂದು ಭಾವಿಸಿದ ತಂಡ ಕಳೆದ ಮಾರ್ಚ್​ನಿಂದಲೇ ಅಧ್ಯಯನ ನಡೆಸಿದೆ. ಮೇ ತಿಂಗಳಲ್ಲಿ ಅಳತೆ ಕಾರ್ಯ ಪ್ರಾರಂಭವಾಗಲಿದೆ.
    ಈ ಕಾರ್ಯಕ್ಕೆ ನೆರವಾಗಲು ಚೀನಾದ ಹುವಾಯ್​ ಹಾಗೂ ಚೀನಾ ಮೊಬೈಲ್​ ಕಂಪನಿಗಳು 5,300, 5,800 ಹಾಗೂ 6,300 ಮೀಟರ್​ ಎತ್ತರದಲ್ಲಿ 5ಜಿ ಸಂಪರ್ಕ ಒದಗಿಸುವ ಅಂಟೆನಾಗಳನ್ನು ಸ್ಥಾಪಿಸಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಸುಲಭವಾಗಿ ಸಂಪರ್ಕ ಸಾಧಿಸಬಹುದು.

    ಇದನ್ನೂ ಓದಿ; ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ

    ಅಳತೆಯಲ್ಲಿ ಹೆಚ್ಚು ನಿಖರತೆ ಕಂಡುಕೊಳ್ಳಲು ಸಮೀಕ್ಷೆಯನ್ನು ವೈಮಾನಿಕ ಗುರುತ್ವಾಕರ್ಷಣ ವಿಧಾನವನ್ನು ಅನುಸರಿಸಲಿದೆ. ಮೂರು ಆಯಾಮಗಳಲ್ಲಿ ಇಲ್ಲಿನ ಚಿತ್ರಣ ಹಾಗೂ ಸಂಪನ್ಮೂಲಗಳನ್ನು ಅನ್ವೇಷಿಸಲಿದೆ ಎಂದು ತಂಡದ ಅಧಿಕಾರಿಗಳು ಹೇಳಿದ್ದಾರೆ.
    ಮೌಂಟ್​ ಎವರೆಸ್ಟ್​ ಎತ್ತರದಲ್ಲಿ ಬದಲಾವಣೆ ಆಗಿದೆಯೇ ಎಂಬ ಬಗ್ಗೆ ಆದಷ್ಟು ಬೇಗ ಉತ್ತರ ದೊರೆಯಲಿದೆ.

    ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts