More

    ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

    ನವದೆಹಲಿ: ಭಾರತದ ಕಂಪನಿಗಳು ತಯಾರಿಸಿ ವಿಶ್ವಕ್ಕೆಲ್ಲ ಹಂಚುತ್ತಿದ್ದ ಮಲೇರಿಯಾ ನಿವಾರಕ ಮಾತ್ರೆ ಹೈಡ್ರೋಕ್ಸಿಕ್ಲೋರೋಕ್ವಿನ್​ ಮಾತ್ರೆ ಸದ್ಯಕ್ಕೆಕೋ ಬೇಡಿಕೆ ಕಳೆದುಕೊಂಡಂತಿದೆ.

    ಇಡೀ ವಿಶ್ವಕ್ಕೆ ಇದನ್ನು ರವಾನೆ ಮಾಡಲಾಗುತ್ತಿದ್ದರೂ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಇದರ ಬಗ್ಗೆ ಅಂಥ ಒಲವನ್ನು ತೋರಿರಲಿಲ್ಲ. ತೀವ್ರ ಅನಾರೋಗ್ಯದ ಸಂದರ್ಭದಲ್ಲಷ್ಟೇ ಇದನ್ನು ಬಳಸಲಾಗುತ್ತಿತ್ತು.

    ಕರೊನಾಗೆ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಜಗತ್ತಿನ 40ಕ್ಕೂ ಅಧಿಕ ಕಂಪನಿಗಳು ತೊಡಗಿಕೊಂಡಿವೆ. ಇದು ಯಶಸ್ವಿಯಾದಲ್ಲಿ ಇನ್ನಾರು ತಿಂಗಳಲ್ಲಿ ಅಥವಾ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಇವು ಲಗ್ಗೆಯಿಡಲಿವೆ. ಇದರ ನಡುವೆಯೇ ಮೂಲೆ ಸೇರಿದ್ದ ಔಷಧವೊಂದು ಕರೊನಾಗೆ ರಾಮಬಾಣ ಎಂದೇ ಹೇಳಲಾಗುತ್ತಿದೆ. ಇನ್ನು ವಿಶೇಷವೆಂದರೆ, ಇದನ್ನು ಬಳಸಿ ಎಂದು ಭಾರತೀಯ ತಜ್ಞರು ಕೂಡ ಶಿಫಾರಸು ಮಾಡುತ್ತಿದ್ದಾರೆ.

    ಸಾರ್ಸ್​ ನಂತರ ಜಗತ್ತನ್ನು ಕಾಡಿದ ಎಬೋಲಾ ಕಾಯಿಲೆಗೆಂದೇ ಇದನ್ನು ಸಿದ್ಧಪಡಿಸಲಾಗಿತ್ತು. ಜತೆಗೆ, ಹೆಪಟೈಟಿಸ್​-ಬಿ ಕಾಯಿಲೆಗೂ ಇದನ್ನು ಬಳಸಬಹುದು ಎಂದು ಹೇಳಲಾಗಿತ್ತು. ಆದರೆ, ಇವರೆಡು ಕಾಯಿಲೆಗಳನ್ನು ಗುಣಪಡಿಸಲು ಔಷಧ ವಿಫಲವಾಗಿತ್ತು.
    ಆದರೆ, ಈಗ ಇದೇ ಔಷಧವನ್ನು ಕರೊನಾ ಚಿಕಿತ್ಸೆಗೆ ಬಳಸಿ ಎಂದು ಸ್ವತಃ ಅಮೆರಿಕ ಸರ್ಕಾರವೇ ಶಿಫಾರಸು ಮಾಡಿದೆ. ಆ ಔಷಧವೇ ರೆಮ್​ಡೆಸಿವಿರ್​. ಇದನ್ನು ತಯಾರಿಸಿದ್ದು ಅಮೆರಿಕ ಮೂಲದ ಗಿಲಿಯಾಡ್ ಸೈನ್ಸಸ್​ ಕಂಪನಿ. ಇದರ ಸಿಇಒ ಡೇನಿಯಲ್​ ಒ’ಡೇ ಅಮೆರಿಕ ಅಧ್ಯಕ್ಷ ಟ್ರಂಪ್​ ಜತೆ ಮಾತುಕತೆ ನಡೆಸಿದ್ದಾರೆ.

    ಕಳೆದ ವರ್ಷ ಚೀನಾದ ವುಹಾನ್​ನಲ್ಲಿ ಕರೊನಾ ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿತ್ತು. ಇದೀಗ ಅಮೆರಿಕದ 1,063 ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲು ಸರ್ಕಾರವೇ ಪ್ರಾಯೋಜಕತ್ವ ವಹಿಸಿತ್ತು. ವೈರಾಣುಗಳು ಹರಡುವುದನ್ನು ನಿಯಂತ್ರಿಸುವುದಲ್ಲದೇ, ಕರೊನಾ ಸೋಂಕಿತರು ಬೇಗ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಅಂಥೋನಿ ಫೌಸಿ ಹೇಳಿದ್ದಾರೆ.

    ರೋಗಿಗಳು ಚೇತರಿಸಿಕೊಳ್ಳುವ ಅವಧಿಯನ್ನು ಕಡಿಮೆ ಮಾಡುವಲ್ಲಿ ಇದು ಅತ್ಯಂತ ಖಚಿತ, ಪ್ರಮುಖ ಹಾಗೂ ಧನಾತ್ಮಕ ಪರಿಣಾಮಗಳನ್ನು ಬೀರಿದೆ ಎಂದು ಅವರು ಹೇಳಿದ್ದಾರೆ. ಈ ಅವಧಿ 15ರಿಂದ 11 ದಿನಕ್ಕೆ ಕಡಿಮೆಯಾಗಿರುವುದು ಪ್ರಯೋಗದಲ್ಲಿ ಗೊತ್ತಾಗಿದೆ.

    ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದಲ ವೈದ್ಯಕೀಯ ಪ್ರಾಧ್ಯಾಪಕಿ ಡಾ. ಅರುಣಾ ಸುಬ್ರಹ್ಮಣ್ಯನ್​ ನಡೆಸಿದ ಪ್ರಯೋಗದಲ್ಲೂ ಇದು ಖಚಿತವಾಗಿದೆ. ಈ ಔಷಧ ಬಳಸಿದ ಶೇ.50 ರೋಗಿಗಳು 10 ದಿನದಲ್ಲಿ ಚೇತರಿಸಿಕೊಂಡಿದ್ದರೆ. ಇನ್ನುಳಿದ ರೋಗಿಗಳು 14 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಹೀಗಾಗಿ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಕರೊನಾ ರೋಗಿಗಳ ಮೇಳೆ ತುರ್ತು ಸಂದರ್ಭದಲ್ಲಿ ಇದನ್ನು ಬಳಸಬಹುದು ಎಂದು ಅನುಮತಿ ನೀಡಿದೆ.

    ಹೀಗಾಗಿ ಗಿಲಿಯಾಡ್​ ಕಂಪನಿಯು ಏಳು ರಾಷ್ಟ್ರಗಳ 5,600 ರೋಗಿಗಳ ಮೇಲೆ ಈ ಔಷಧವನ್ನು ಪ್ರಯೋಗಿಸಲು ಮುಂದಾಗಿದೆ. ಆದರೆ, ಭಾರತ ಈ ರಾಷ್ಟ್ರಗಳ ಪಟ್ಟಿಯಲ್ಲಿಲ್ಲ.

    ಐಸಿಎಂಆರ್​ನ ಮಹಾ ನಿರ್ದೇಶಕ ಡಾ. ನಿರ್ಮಲ್​ ಕೆ. ಗಂಗೂಲಿ ಭಾರತದಲ್ಲೂ ಈ ಔಷಧವನ್ನು ಬಳಸಬಹುದು ಎಂದು ಶಿಫಾರಸು ಮಾಡಿದ್ದಾರೆ. ಹೀಗಾಗಿ ಭಾರತದಲ್ಲೂ ಇದನ್ನು ಬಳಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ದುಬೈನಲ್ಲಿ ಸಾವಿರಾರು ಕೋಟಿಯ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯನದ್ದು ಸಹಜ ಸಾವಲ್ಲ..! ವಾರಗಳೇ ಕಳೆದರೂ ಮೃತದೇಹ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲವೇಕೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts