2 ವರ್ಷ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಿದ ಚೀನಾ

China Student
Published on

ಬೀಜಿಂಗ್​: ವಿದ್ಯಾಭ್ಯಾಸ ಮುಂದುವರಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿದೆ ಎಂದು ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಎರಡು ವರ್ಷಗಳ ಕೊವಿಡ್​​ ಪರಿಸ್ಥಿತಿಯಿಂದ ಹೊರಬಂದಿರುವ ಚೀನಾ ಇದೀಗ ವಿದೇಶಿ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.

ಈ ಕುರಿತು ವಿದೇಶಾಂಗ ಸಚಿವ ಎಸ್​​.ಜೈಶಂಕರ್​ ಹಾಗೂ ಚೀನಾದ ವಾಂಗ್​​ ಯಿ ಸಭೆ ಮಾರ್ಚ್​ 22ರಂದು ಸಭೆ ನಡೆಸಿದ್ದರು.

ಕೊವಿಡ್​​ನಿಂದಾಗಿ ತಾಯ್ನಾಡಿಗೆ ಮರಳಿದ್ದ ವಿದ್ಯಾರ್ಥಿಗಳು ಈಗ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದಾಗಿದ್ದು, ಈ ನಿರ್ಧಾರ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ.

ವಿದ್ಯಾರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಇದಕ್ಕಾಗಿ ಮೇ 8 ರೊಳಗೆ ಗೂಗಲ್​​ನಲ್ಲಿ ಅರ್ಜಿ ತುಂಬಬೇಕೆಂದು ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net