ಓದು ಅಂದಿದ್ದೇ ತಪ್ಪಾಯ್ತು: ದುಡಿಕಿನ ನಿರ್ಧಾರಕ್ಕೆ ಬಲಿಯಾದ ವಿದ್ಯಾರ್ಥಿ!

hang
Published on

ಹಾವೇರಿ: ಪರೀಕ್ಷೆ ಇದೆ ಓದಿಕೋ ಎಂದು ಹೇಳಿದ ಪೋಷಕರ ಮಾತಿಗೆ ಬೇಸತ್ತ ಪಿಯುಸಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ಹಾವೇರಿ ತಾಲೂಕಿನ ಹೊಸಮೆಲ್ಮೂರಿ ಗ್ರಾಮದಲ್ಲಿ ನಡೆದಿದೆ.

ಫಕ್ಕೀರೇಶ ಅರಳಿ ಮೃತ ಪಿಯುಸಿ ವಿದ್ಯಾರ್ಥಿ. ಓದುವುದನ್ನು ಬಿಟ್ಟು ಏನು ಮಾಡುತ್ತಿದ್ದೀಯ ಎಂದು ಪೋಷಕರು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಈತ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ನಿನ್ನೆ ಪಿಯುಸಿ ಪರೀಕ್ಷೆ ಬರೆದು ಬಂದ ಬಳಿಕ ಸುಮ್ಮನೆ ಕುಳಿತಿದ್ದ ವೇಳೆ ಈತನ ತಂದೆ-ತಾಯಿ ಓದಿಕೋ ಎಂದು ಹೇಳಿದ್ದಾರೆ. ಇಷ್ಟಕ್ಕೆ ತಮ್ಮ ಜಮೀನಿಗೆ ಹೋಗಿ ನೇಣು ಬಿಗಿದುಕೊಂಡಿದ್ದಾನೆ. ಸ್ಥಳಕ್ಕೆ ಗುತ್ತಲ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net