ನಟ ಇರ್ಫಾನ್​ ಖಾನ್​ ಅಗಲಿ ಇಂದಿಗೆ 2 ವರ್ಷ: ಅಪ್ಪನ ನೆನೆದು ಪುತ್ರನಿಂದ ಭಾವನಾತ್ಮಕ ಸಂದೇಶ

Irfan Khan'
Published on

ಮುಂಬೈ: ಹಾಲಿವುಡ್​ನಲ್ಲೂ ಗುರುತಿಸಿಕೊಂಡಿದ್ದ ಬಾಲಿವುಡ್​ನ ಪ್ರತಿಭಾವಂತ ನಟ ಇರ್ಫಾನ್​ ಖಾನ್​ ಅಗಲಿ ಇಂದಿಗೆ ಬರೋಬ್ಬರಿ ಎರಡು ವರ್ಷ ಕಳೆದಿದೆ. ಈ ಬಗ್ಗೆ ಅವರ ಪುತ್ರ ಬಬಿಲ್​ ಖಾನ್​ ತಮ್ಮ ತಂದೆಯನ್ನು ಸ್ಮರಿಸಿದ್ದಾರೆ.

ತಮ್ಮ ತಂದೆಯ ಜತೆಗಿನ ದಿನಗಳನ್ನು ಸ್ಮರಿಸಿ ಇನ್ಸ್​ಸ್ಟಾಗ್ರಾಂನಲ್ಲಿ ಸುಧೀರ್ಘ ಪತ್ರ ಬರೆದಿದ್ದಾರೆ. ನನ್ನ ಪ್ರೀತಿಯ ಅಪ್ಪ, ನೀವಿಲ್ಲದೇ ಮುಂದುವರಿಯಲು ಸಾಧ್ಯವಾಗುತ್ತಿಲ್ಲ.ನಾರ್ವೆಯಲ್ಲಿ ದೀಪಗಳ ನೃತ್ಯೋತ್ಸವದಲ್ಲಿ ಪಾಲ್ಗೊಂಡ ದಿನಗಳು ಹಾಗೂ ನೀವು ನನ್ನ ಭವಿಷ್ಯ ಹೇಳಲು ನನ್ನ ಕೈ ಹಿಡಿದ ಅನುಭವ ಇನ್ನೂ ಕಾಡುತ್ತಿದೆ. ನೀವು ನಮ್ಮ ಮುಂದೆ ಮಾತ್ರ ಇಲ್ಲ ಆದರೆ ಈ ನೆನಪುಗಳ ಜತೆಯಲ್ಲಿ ಸದಾ ನಮ್ಮೊಂದಿಗೆ ಇದ್ದೀರಿ ಎಂದು ಭಾವಾನಾತ್ಮಕವಾಗಿ ಪತ್ರವನ್ನು ಬರೆದಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟ ಇರ್ಫಾನ್​ ಖಾನ್​ ಅವರು ಏಪ್ರಿಲ್​ 29, 2020ರಲ್ಲಿ ಮುಂಬೈನ ಕೊಕೊಲಾಬೆನ್​​ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net