

ಕತಾರ್: ಆಜಾದಿ ಕಾ ಅಮೃತಮಹೋತ್ಸವ ಹಾಗೂ ಗಾಂಧಿ ಜಯಂತಿಯ ಪ್ರಯುಕ್ತ ಇಂಡಿಯನ್ ಕಲ್ಚರಲ್ ಸೆಂಟರ್ನ ಅಶೋಕ ಸಭಾಂಗಣದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.
ಇಂಡಿಯನ್ ಕಲ್ಚರಲ್ ಸೆಂಟರ್ನಲ್ಲಿ ಅ.2 ರಂದು ಗಾಂಧಿ ಜಯಂತಿ ಆಚರಿಸಲಾಗಿದೆ. ಈ ವೇಳೆ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ವಿಜೇತರಿಗೆ ಬಹುಮಾನ ವಿತರಿಸಿದರು.
ಇಂಡಿಯನ್ ಕಲ್ಚರಲ್ ಸೆಂಟರ್ನ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮದಲ್ಲಿ ಐಸಿಸಿ ಪರವಾಗಿ ಮಾತನಾಡಿದರು. ಶ್ರೀಮತಿ ಕಮಲಾ ಠಾಕೂರ್ ಅವರು ಪ್ರಸ್ತಾಪಿಸಿದರು. ಸಾಹಿತಿ ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು.
ರಸಪ್ರಶ್ನೆ ವಿಜೇತರು
ಪ್ರಥಮ: ಹುಸೇನ್ ಅಬ್ದುಲ್ ಕಧೀರ್ ಮತ್ತು ಮೊಹಮ್ಮದ್ ಆತೀಫ್.
ದ್ವಿತೀಯ: ಶಿಂಜ್ ಲೀಲಾ ಮತ್ತು ಶ್ರೀಮತಿ ಸ್ವಪ್ನಾ ಉನ್ನಿ.