ಅಪ್ಪು ನೆನಪಿಗೆ ತನ್ನ ಕಚೇರಿಯಲ್ಲಿ ಪುತ್ಥಳಿ ಇರಿಸಿದ ರಾಣಾ; ಮಿಸ್ ಯೂ ಫ್ರೆಂಡ್ ಎಂದ ನಟ

Rana and Puneeth
Published on

ಬೆಂಗಳೂರು: ನಟ ಪುನೀತ್ ರಾಜ್​ ಕುಮಾರ್ ಅವರಿಗೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಸ್ನೇಹಿತರಿದ್ದರು. ಎಲ್ಲರ ಜತೆಗೂ ಆತ್ಮೀಯವಾದ ಬಾಂಧವ್ಯ ಹೊಂದಿದ್ದರು. ಯಾವುದೇ ವೇದಿಕೆಗೆ ಹೋದರೂ ಪುನೀತ್ ಅವರ ಜತೆಗಿನ ಒಡನಾಟಡ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಪುನೀತ್ ರಾಜ್​ ಕುಮಾರ್ ಅವರನ್ನ ನೆನಪಿಸಿಕೊಂಡಿದ್ದಾರೆ.

ಎಲ್ಲೇ ಹೋದರೂ ನಟ ಪುನೀತ್ ರಾಜ್​ ಕುಮಾರ್ ಅವರ ಫೋಟೋ, ಪುತ್ತಳಿ ಕಾಣಸಿಗುತ್ತದೆ. ವಿಶೇಷ ಏನೆಂದರೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ ತಮ್ಮ ಕಚೇರಿಯಲ್ಲಿ ಪುನೀತ್ ಅವರ ನೆನಪಿನಲ್ಲಿ ಪುತ್ಥಳಿಯೊಂದನ್ನ ಇರಿಸಿದ್ದಾರೆ. ಈ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಪುನೀತ್ ರಾಜ್​ ಕುಮಾರ್ ಅವರ ಪುತ್ಥಳಿಯನ್ನು ತಮ್ಮ ಆಫೀಸಿನಲ್ಲಿ ಇರಿಸಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಣಾ, 'ಸುಂದರವಾದ ಸ್ಮರಣಿಕೆಯೊಂದು ನನ್ನ ಕಚೇರಿ ತಲುಪಿದೆ. ಮಿಸ್​ ಯೂ ಮೈ ಫ್ರೆಂಡ್ ಪುನೀತ್ ರಾಜ್​ ಕುಮಾರ್' ಎಂದು ಬರೆದುಕೊಂಡಿದ್ದಾರೆ.

ರಾಣಾ ದಗ್ಗುಬಾಟಿ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನೋಡಿದ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಪುನೀತ್ ರಾಜ್​ ಕುಮಾರ್ ಅವರು ದಿವಂಗತರಾಗಿ ಒಂದು ವರ್ಷ ಸಮೀಪಿಸುತ್ತಿದೆ. ಇಂದಿಗೂ ಕೂಡ ಅಭಿಮಾನಿಗಳು ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net