

Israel-Iran War : ದಿನೇದಿನೆ ಇರಾನ್-ಇಸ್ರೇಲ್ ನಡುವೆ ಸಂಘರ್ಷ ಭಾರೀ ಪ್ರಮಾಣದಲ್ಲಿ ಉಲ್ಬಣಗೊಂಡಿದ್ದು, ಇತ್ತ ಇರಾನ್ ಇಸ್ರೇಲ್ ಮೇಲೆ ಡಜನ್ ಗಟ್ಟಲೇ ಕ್ಷಿಪಣಿಗಳು ಹಾರಿಸುತ್ತಿದೆ. ಮತ್ತೊಂದೆಡೆ ಇಸ್ರೇಲ್, ಇರಾನ್ ದಾಳಿ ನಡೆಸಿದ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಎರಡು ಕಡೆ ಭಾರೀ ಪ್ರಮಾದಲ್ಲಿ ಹಾನಿಯಾಗಿದ್ದು 150 ಕ್ಕೂ ಅಧಿಕ ನಾಗರಿಕರು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಯುದ್ಧದ ಭೀತಿಯಲ್ಲಿ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸುತ್ತೆವೆ ಎಂದು ಹೇಳಿಕೊಂಡಿದ್ದಾರೆ.
ಇರಾನ್- ಇಸ್ರೇಲ್ ಎರಡು ದೇಶಗಳಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೇನೆ.ಇಬ್ಬರು ಕಟ್ಟಾ ಶತ್ರುಗಳು ರಾಜಿ ಮಾಡಿಕೊಳ್ಳುತ್ತಾರೆ ಎಂಬ ನನಗನಿಸುತ್ತಿದೆ. ತಮ್ಮ ಮೊದಲ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತು ಸೆರ್ಬಿಯಾ ಮತ್ತು ಕೊಸೊವೊ ನಡುವೆ ನಡೆಯುತ್ತಿರುವ ವಿವಾದವನ್ನು ಕೊನೆಗೊಳಿಸಲು ಇತ್ತೀಚೆಗೆ ಯಶಸ್ವಿಯಾಗಿ ಮಧ್ಯಪ್ರವೇಶಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
"ಅದೇ ರೀತಿ, ಇಸ್ರೇಲ್ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಶಾಂತಿ ನೆಲೆಸಲಿದೆ! ಈಗ ಅನೇಕ ಕರೆಗಳು ಮತ್ತು ಸಭೆಗಳು ನಡೆಯುತ್ತಿವೆ" ನಾನು ಬಹಳಷ್ಟು ಕೆಲಸ ಮಾಡುತ್ತೇನೆ, ಯಾವುದು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ನಾವು ಮಧ್ಯಪ್ರಾಚ್ಯವನ್ನು ಶ್ರೇಷ್ಠಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಪರಮಾಣು ಒಪ್ಪಂದದ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆಗಳು ರದ್ದಾಗಿರುವ ಸಮಯದಲ್ಲಿ ಟ್ರಂಪ್ ಅವರ ಮನವಿ ಬಂದಿದೆ.(ಏಜೆನ್ಸೀಸ್)