ಭಾರತೀಯ ಲೆಫ್ಟಿಸ್ಟ್​ಗಳಿಗೆ ಭಾರತಕ್ಕಿಂತ ಇತರೆ ದೇಶಗಳ ಮೇಲೇ ಹೆಚ್ಚು ಒಲವು: ವಾಮಪಂಥೀಯರ ಬೂಟಾಟಿಕೆ ಬಿಚ್ಚಿಟ್ಟ ರಾಮಚಂದ್ರ ಗುಹಾ

KLF 2020 Ramachandra Guha 18 JAN 20
Published on

ಕೋಝಿಕ್ಕೋಡ್​: ಕಾಂಗ್ರೆಸ್, ನೆಹುರು-ಗಾಂಧಿ ಫ್ಯಾಮಿಲಿ, ನರೇಂದ್ರ ಮೋದಿ ಅವರ ಕಥೆಗಳಿಗಿಂತ ಭಿನ್ನವಾದುದು ವಾಮಪಂಥೀಯರದ್ದು! ಅದನ್ನೂ ಇತಿಹಾಸಕಾರ ರಾಮಚಂದ್ರ ಗುಹಾ ಕೇರಳ ಲಿಟ್ ಫೆಸ್ಟಿವಲ್​ನಲ್ಲಿ ಬಿಚ್ಚಿಟ್ಟಿದ್ದಾರೆ!

ಭಾರತದಲ್ಲಿ ಎಡಪಂಥೀಯರು ಅಥವಾ ವಾಮಪಂಥೀಯರದ್ದು ಒಂದು ರೀತಿಯ ಬೂಟಾಟಿಕೆ. ವಾಸ್ತವದಲ್ಲಿ ಅವರು ಭಾರತವನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಬೇರೆ ದೇಶಗಳನ್ನು ಪ್ರೀತಿಸುತ್ತಾರೆ. ಅದು ಅವರ ರಾಷ್ಟ್ರಭಕ್ತಿ ಎಂದು ಗುಹಾ ವಿವರಿಸಿದ್ದಾರೆ.

ಜಾಗತಿಕವಾಗಿ ಅಗ್ರೆಸ್ಸಿವ್ ನ್ಯಾಷನಲಿಸಂ ಹೆಚ್ಚಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಫಂಡಮೆಂಟಲಿಸಂ ಕೂಡ ಹೆಚ್ಚಾಗುತ್ತಿದೆ. ಇದಲ್ಲದೆ ಬೇರೆ ಕೆಲವು ಕಾರಣಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಿಂದುತ್ವದ ಅಲೆ ಏಳುವುದಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಲಿಟ್​ ಫೆಸ್ಟ್​ನ ಥೀಮ್ ಇದ್ದಿದ್ದು ಎನ್​ವಿರಾನ್​ಮೆಂಟ್ ಆ್ಯಂಡ್ ಕ್ಲೈಮ್ಯಾಟ್ ಚೇಂಜ್​. ಈ ವೇದಿಕೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ರಾಜಕೀಯ ಮಾತನಾಡಿದ ವೇಳೆ, ಅಲ್ಲಿ ಹಿಸ್ಟೋರಿಯನ್ ವಿಲಿಯಂ ಡಾಲ್​​ರಿಂಪಲ್​, ನೋವೆಲಿಸ್ಟ್​ಗಳಾದ ಬೆನ್ಯಾಮಿನ್​, ನಮಿತಾ ಗೋಖಲೆ, ಚೇತನ್ ಭಗತ್​, ಪತ್ರಕರ್ತರಾದ ಕರಣ್ ಥಾಪರ್​, ರಾಜ್​ದೀಪ್ ಸರ್​ದೇಸಾಯಿ ಮತ್ತು ಇತರರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net