More

    ಕೇರಳ ಲಿಟ್​ ಫೆಸ್ಟ್​ನಲ್ಲಿ ಬಯಲಾಗಿದೆ ಕಾಂಗ್ರೆಸ್​ನ ನೆಹರು-ಗಾಂಧಿ ಫ್ಯಾಮಿಲಿಯ ಕಥೆ-ವ್ಯಥೆ; ಪ್ರಧಾನಿ ನರೇಂದ್ರ ಮೋದಿಯವರ “ಗುಣಗಾನ”.. !

    ಕೋಝಿಕ್ಕೋಡ್​: ಅಪ್ಪ ಮಾಡಿದ ಪಾಪ ಕಾರ್ಯದ ಫಲ ಏಳು ತಲೆಮಾರಿಗೂ ಸುತ್ತಿಕೊಳ್ಳುತ್ತದೆಯಂತೆ- ಹಾಗಾಗಿದೆ ಕಾಂಗ್ರೆಸ್​ನ ನೆಹರು-ಗಾಂಧಿ ಕುಟುಂಬದ ಕಥೆ-ವ್ಯಥೆ!
    ಇಂಡಿಯನ್ ಸೋಷಿಯಾಲಜಿಸ್ಟ್​ ಆಂದ್ರೆ ಬೆಟೆಲ್​ ಅವರನ್ನು ಉಲ್ಲೇಖಿಸಿದ ಇತಿಹಾಸಕಾರ ರಾಮಚಂದ್ರ ಗುಹಾ, ನೆಹರು-ಗಾಂಧಿ ಕುಟುಂಬದ ಕಥೆಯನ್ನು ಕೇರಳ ಲಿಟ್​ ಫೆಸ್ಟ್​ನಲ್ಲಿ ವಿವರಿಸಿದ್ದು ಹೀಗೆ..

    ನೆಹರುವಿನ ಪ್ರಕರಣದಲ್ಲಿ, ಅವರು ಮಾಡಿದ ತಪ್ಪುಗಳು, ಪ್ರಮಾದಗಳು ತಲೆಮಾರುಗಳವರೆಗೆ ಕಾಡಲಿದೆ. ಅಪ್ಪ ಮಾಡಿತ ತಪ್ಪು, ಪ್ರಮಾದಗಳ ಫಲವನ್ನು ಏಳು ತಲೆಮಾರುಗಳವರು ಉಣ್ಣಬೇಕಾಗುತ್ತದೆ ಎಂಬ ನುಡಿಯಂತೆ ಇದುಕೂಡ. ರಾಷ್ಟ್ರ ಮಷ್ಟದಲ್ಲಿ ನಡೆಯುವ ಚರ್ಚೆಗಳತ್ತ ಒಮ್ಮೆ ಗಮನಹರಿಸಿ. ಪ್ರತಿಬಾರಿಯೂ ನೆಹರು ಹೆಸರು ಉಲ್ಲೇಖಿಸಲ್ಪಡುತ್ತದೆ. ಮೋದಿ ಯಾಕೆ ಯಾವಾಗಲೂ ‘ನೆಹರೂ ಕಾಶ್ಮೀರದ ವಿಚಾರದಲ್ಲಿ ಹಾಗೆ ಮಾಡಿದ್ರು, ಚೀನಾದ ವಿಚಾರದಲ್ಲಿ ನೆಹರೂ ಹೀಗೆ ಮಾಡಿದ್ರು, ತ್ರಿವಳಿ ತಲಾಖ್ ವಿಚಾರದಲ್ಲಿ ಈ ನಿಲುವು ಹೊಂದಿದ್ರು… ‘ ಹೀಗೆ ಹೇಳುತ್ತಲೇ ಹೋಗುತ್ತಾರೆ. ಯಾಕೆ ಗೊತ್ತಾ ಅವರಿಗೆ ಪ್ರತಿಸ್ಪರ್ಧಿಯಾಗಿರುವುದು ರಾಹುಲ್ ಗಾಂಧಿ!

    ಭಾರತ ಹೆಚ್ಚೆಚ್ಚು ಪ್ರಜಾಪ್ರಭುತ್ವದತ್ತ ಹೊರಳುತ್ತಿದೆ, ಊಳಿಗಮಾನ್ಯ ಪದ್ಧತಿ ಕಡಿಮೆ ಆಗುತ್ತಿದ್ದು, ಕಾಂಗ್ರೆಸ್​ನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ : ರಾಮಚಂದ್ರ ಗುಹಾ 

    ಈಗ ಒಂದೊಮ್ಮೆ ರಾಹುಲ್ ಗಾಂಧಿ ಪ್ರತಿಸ್ಪರ್ಧಿಯಾಗಿ ಅಥವಾ ಎದುರಾಳಿಯಾಗಿ ರಾಜಕೀಯ ಕಣದಲ್ಲಿ ಇಲ್ಲದೇ ಹೋದರೆ, ಮೋದಿ ಯಾರನ್ನು ದೂಷಿಸುತ್ತಾರೆ? ಅವರು ಅವರದ್ದೇ ಆದ ನೀತಿಗಳ ವಿಚಾರವಾಗಿ ಮಾತನಾಡಬೇಕು. ಯಾಕೆ ವಿಫಲರಾದೆವು ಎಂಬುದನ್ನು ಜನರಿಗೆ ವಿವರಿಸಬೇಕು ಎಂದು ಗುಹಾ ವಿವರಿಸಿದರು. (ಏಜೆನ್ಸೀಸ್) 

    ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಚುನಾಯಿಸಿ ಬಹುದೊಡ್ಡ ಪ್ರಮಾದವನ್ನೆಸಗಿದೆ ಕೇರಳ, 2024ರಲ್ಲಿ ಮತ್ತೆ ಅಂಥ ತಪ್ಪೆಸಗಬೇಡಿ: ಹೀಗೆಂದವರು ಯಾರೋ ಬಿಜೆಪಿ ಒಲವುಳ್ಳ ಇತಿಹಾಸಕಾರನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts