ಭಾರತ ಹೆಚ್ಚೆಚ್ಚು ಪ್ರಜಾಪ್ರಭುತ್ವದತ್ತ ಹೊರಳುತ್ತಿದೆ, ಊಳಿಗಮಾನ್ಯ ಪದ್ಧತಿ ಕಡಿಮೆ ಆಗುತ್ತಿದ್ದು, ಕಾಂಗ್ರೆಸ್​ನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ : ರಾಮಚಂದ್ರ ಗುಹಾ

ramachandra guha 18 JAN 20
Published on

ಕೋಝಿಕ್ಕೋಡ್: ಕಾಂಗ್ರೆಸ್​ ಪಕ್ಷದ ಸದ್ಯದ ಸ್ಥಿತಿಯನ್ನು ಗಮನಿಸುತ್ತಿದ್ದರೆ ಮೊಘಲ ಸಾಮ್ರಾಜ್ಯದ ಕೊನೆಗಾಲ ನೆನಪಾಗುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇರಳ ಲಿಟ್ರೇಚರ್ ಫೆಸ್ಟಿವಲ್​(ಕೆಎಲ್​ಎಫ್​)ನಲ್ಲಿ ಶುಕ್ರವಾರ ಮಾತನಾಡಿದ ಅವರು. ಭಾರತ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಜಾಪ್ರಭುತ್ವದ ಕಡೆಗೆ ವಾಲುತ್ತಿದೆ. ಊಳಿಗ ಮಾನ್ಯ ಪದ್ಧತಿ ಕಡಿಮೆಯಾಗುತ್ತಿದೆ. ಕಾಂಗ್ರೆಸ್ಸಿನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

ನೀವು (ಸೋನಿಯಾ ಗಾಂಧಿ) ದೆಹಲಿಯಲ್ಲಿ ಇರುತ್ತೀರಿ. ನಿಮ್ಮ ಸಾಮ್ರಾಜ್ಯ ಕುಸಿಯುತ್ತಿದೆ. ಆದಾಗ್ಯೂ, ನಿಮ್ಮ ಚಮಚಾಗಳು ಮಾತ್ರ ನಿಮ್ಮ ಸತ್ಯವನ್ನು ಮರೆಮಾಚಿ, ನೀವೇ ಈಗಲೂ ಬಾದ್​ ಷಾ ಎಂದು ಹೇಳಿ ಅದನ್ನೇ ನಂಬುವಂತೆ ಮಾಡುತ್ತಿದ್ದಾರೆಂದು ಸೋನಿಯಾ ಗಾಂಧಿ ಅವರನ್ನು ಎಚ್ಚರಿಸಿದರು. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net