More

    ನಕಲಿ ವೋಟರ್ ಐಡಿ ತಯಾರಿಕೆ ಪ್ರಕರಣ; ಕರ್ನಾಟಕದಲ್ಲಿ ಕಾಂಗ್ರೆಸ್​ ಗೆದ್ದ ಫಾರ್ಮುಲಾ ಈಗ ಬಯಲಾಗಿದೆ: ಬಿಜೆಪಿ

    ಬೆಂಗಳೂರು: ಮತದಾರರಿಂದ ದೇಶಾದ್ಯಂತ ತಿರಸ್ಕೃತವಾಗಿರುವ ಕಾಂಗ್ರೆಸ್‌ ಪಕ್ಷದ ಗೆಲುವಿನ ಹಿಂದೆ ಸದಾ ಇರುವುದು ಅನೈತಿಕತೆ ಮತ್ತು ಅಕ್ರಮ ಚಟುವಟಿಕೆಗಳು ಮಾತ್ರ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

    ವೋಟರ್ ಐಡಿ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು​ ತಯಾರು ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸಚಿವ ಭೈರತಿ ಸುರೇಶ್​ ಆಪ್ತ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಕುರಿತು ಕಾಂಗ್ರೆಸ್​ ವಿರುದ್ಧ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿದೆ.

    ಕರ್ನಾಟಕದಲ್ಲಿ ಕಾಂಗ್ರೆಸ್​ ಗೆದ್ದ ಫಾರ್ಮುಲಾ ಈಗ ಬಯಲಾಗಿದೆ. ಮತದಾರರಿಗೆ ಮೋಸ ಮಾಡಲು ನುಡಿದಂತೆ ಜಾರಿಯಾಗದ ಗ್ಯಾರಂಟಿಗಳು ಅರ್ಧದಷ್ಟು ಸಹಾಯ ಮಾಡಿದರೆ ಉಳಿದವೆಲ್ಲಾ ನಕಲಿ ಮತಗಳು. ಸಿದ್ದರಾಮಯ್ಯನವರ ಆಪ್ತ ಬೈರತಿ ಸುರೇಶ್‌ ಸಂಗಡಿಗರು ನಕಲಿ ವೋಟರ್‌ ಐಡಿ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವುದು ಈ ಹಗರಣದಲ್ಲಿ ಸಿದ್ದರಾಮಯ್ಯರವರೇ ಶಾಮೀಲಾಗಿರುವುದಕ್ಕೆ ಸ್ಪಷ್ಟ ಸಾಕ್ಷಿ.

    ಮತದಾರರಿಂದ ದೇಶಾದ್ಯಂತ ತಿರಸ್ಕೃತವಾಗಿರುವ ಕಾಂಗ್ರೆಸ್‌ ಪಕ್ಷದ ಗೆಲುವಿನ ಹಿಂದೆ ಸದಾ ಇರುವುದು ಅನೈತಿಕತೆ ಮತ್ತು ಅಕ್ರಮ ಚಟುವಟಿಕೆಗಳು ಮಾತ್ರ ಎಂದು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿದೆ.

    BJP tweet

    ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್

    ಪ್ರಕರಣದ ಹಿನ್ನೆಲೆ?

    ವೋಟರ್ ಐಡಿ, ಚಾಲನಾ ಪರವಾನಗಿ, ಆಧಾರ್​ ಕಾರ್ಡ್ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು​ ತಯಾರು ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸಚಿವ ಭೈರತಿ ಸುರೇಶ್​ ಆಪ್ತ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮೌನೇಶ್​ ಕುಮಾರ್, ರಾಘವೇಂದ್ರ, ಭಗತ್​ ಎಂದು ಗುರತಿಸಲಾಗಿದೆ. ಬಂಧಿತರು ಹಣ ಕೊಟ್ಟರೆ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಡಿಎಲ್‍ನ್ನು ಮಾಡಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ.

    ಬಂಧಿತ ಆರೋಪಿಗಳು ಹೆಬ್ಬಾಳದ ಕನಕನಗರದಲ್ಲಿ ಎಂಎಸ್‍ಎಲ್ ಟೆಕ್ನೊ ಸೊಲ್ಯೂಷನ್ ಎಂಬ ಕಚೇರಿಯನ್ನು ಸಹ ನಡೆಸುತ್ತಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕಂಪ್ಯೂಟರ್ ಸೇರಿ ಹಲವು ವಸ್ತು ಜಪ್ತಿ ಮಾಡಲಾಗಿದೆ.

    ಆರೋಪಿಗಳು ಯಾವುದೇ ಕ್ಷೇತ್ರದ ವೋಟರ್ ಐಡಿ, ಚಾಲನಾ ಪರವಾನಗಿ, ಆಧಾರ್​ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು​ ಕೇಳಿದರೂ ಮಾಡಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts