ಅನುಮಾನಾಸ್ಪದ ರೀತಿಯಲ್ಲಿ ಮಹಿಳಾ ಬಾಡಿ ಬಿಲ್ಡರ್ ಮೃತ್ಯು; ಪ್ರಕರಣ ದಾಖಲು

Raechelle Chase

ನವದೆಹಲಿ: ನ್ಯೂಜಿಲೆಂಡ್​ನ ಜನಪ್ರಿಯ ಬಾಡಿಬಿಲ್ಡರ್ ಮತ್ತು ಫಿಟ್‌ನೆಸ್ ತಜ್ಞೆ ರೇಚಲ್​ ಚೇಸ್​ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ 41 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ರೇಚಲ್​ ಸಾವಿನ ಕುರಿತು ಅವರ ಮಗಳು ಪ್ರಕಟಣೆ ಮೂಲಕ ಖಚಿತಪಡಿಸಿದ್ದಾರೆ.

ರೇಚಲ್​ ಚೇಸ್​ಗೆ ಐವರು ಮಕ್ಕಳಿದ್ದರು ಎಂದು ತಿಳಿದು ಬಂದಿದೆ. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ 1.4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಇದ್ದರು ಎಂದು ವರದಿಯಾಗಿದೆ.

ಋಏಚಲ್​ ಅವರ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ನ್ಯೂಜಿಲೆಂಡ್​ ಪೊಲೀಸರು ತಿಳಿಸಿದ್ದಾರೆ.

Raechelle Chase With Family

ಇದನ್ನೂ ಓದಿ: ತೆಲಂಗಾಣ ಚುನಾವಣೆ; ರಾಹುಲ್ ಗಾಂಧಿಯನ್ನು ‘ಪೇಪರ್​ ಹುಲಿ’ ಎಂದು ಟೀಕಿಸಿದ ಸಿಎಂ ಕೆಸಿಆರ್​ ಪುತ್ರಿ

ಈ ಕುರಿತು ರೇಚಲ್​ ಚೇಸ್​ ಅವರ ಹಿರಿಯ ಮಗಳು ಅನ್ನಾ, ತಾಯಿ ಯಾವಾಗಲೂ ಜೀವನದ ಬಗ್ಗೆ ನಮಗೆ ಉತ್ತಮ ಸಲಹೆಯನ್ನು ನೀಡುತ್ತಿದ್ದರು. ಅವರು ಕಷ್ಟದ ದಿನಗಳಲ್ಲಿಯೂ ತಮ್ಮ ಜೀವನದ ಬಗ್ಗೆ ಹೆಚ್ಚು ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದಾರೆ. ಅವರ ಸ್ಪೂರ್ತಿ ಮಾತುಗಳು ಎಂತಹವರನ್ನು ಜೀವನದಲ್ಲಿ ಸರಿಯಾಗಿ ಮುನ್ನಡೆಯುವಂತೆ ಮಾಡುತ್ತದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2001ರಲ್ಲಿ ಕ್ರಿಸ್​ ಚೇಸ್​ ಎಂಬುವವರನ್ನು ರೇಚಲ್​ ವಿವಾಹವಾಇದ್ದರು. 2015ರಲ್ಲಿ ಕಾರಣಾಂತರಗಳಿಂದ ಈ ಇಬ್ಬರು ದಂಪತಿಗಳು ದೂರಾಗಿದ್ದರು. ಕ್ರಿಸ್​ ಚೇಸ್​ ಮಾದಕವಸ್ತು ಕಳ್ಳಸಾಗಾಣೆಯ ಆರೋಪದ ಮೇಲೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

2016ರಲ್ಲಿ ರೇಚೆಲ್, ವೈವಾಹಿಕ ಜೀವನದ ಸಮಸ್ಯೆಯನ್ನು ಎದುರಿಸುವ ಬಗ್ಗೆ ಲೇಖನ ಬರೆದಿದ್ದರು. ವಿಶೇಷವಾಗಿ ಮಕ್ಕಳ ಸಲುವಾಗಿ ನಿಂದನೀಯ ಸಂಬಂಧಗಳನ್ನು ಬಿಡುವಂತೆ ಜನರಿಗೆ ಸಲಹೆ ನೀಡಿದ್ದರು. ಫೇಸ್‌ಬುಕ್‌ನಲ್ಲಿನ ಅವರ ಅಂತಿಮ ಪೋಸ್ಟ್‌ನಲ್ಲಿ, ಅವರು ಆಕ್ಸಿಜನ್ ಮ್ಯಾಗಜೀನ್‌ಗಾಗಿ ಚಿತ್ರೀಕರಣದಿಂದ ತಮ್ಮ ಫೋಟೋಗಳಲ್ಲಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಅವರ ವೃತ್ತಿಜೀವನದ ಅವಧಿಯಲ್ಲಿ ಅವರು ಕಾಣಿಸಿಕೊಂಡ 14 ಕವರ್‌ಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.

Share This Article

ನಿಂಬೆ ಸಿಪ್ಪೆಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ!  ಅವುಗಳನ್ನು ಹೀಗೂ ಮರುಬಳಕೆ ಮಾಡಬಹುದು.. lemon peels

lemon peels: ಬೇಸಿಗೆಯಲ್ಲಿ ನಿಂಬೆ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ನಿಂಬೆ ರಸದ ಜೊತೆಗೆ, ನಿಂಬೆ…

ಪಾರ್ಲರ್‌ ಹೋಗದೆ ಮನೆಯಲ್ಲಿಯೇ ಮುಖ ಪಳ ಪಳ ಹೊಳೆಯುವಂತೆ ಮಾಡಬೇಕಾ? ಹಾಗಾದ್ರೆ ಹೀಗೆ ಮಾಡಿ..Glow Skin

Glow Skin: ಮುಖ ನೋಡಲು ಪಳಪಳ ಹೊಳೆಯಬೇಕು ಎನ್ನುವ ಆಸೆ ಮಹಿಳೆಯರಿಗೆ ಇರುತ್ತದೆ. ಯಾವುದೇ ಪಾರ್ಟಿ…

ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ ಗೊತ್ತಾ? Fish

Fish: ಮೀನು ತಿನ್ನಲು ಬಲು ರುಚಿ ಹಾಗೆ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಹಳೆಯ…