ತೆಲಂಗಾಣ ಚುನಾವಣೆ; ರಾಹುಲ್ ಗಾಂಧಿಯನ್ನು 'ಪೇಪರ್​ ಹುಲಿ' ಎಂದು ಟೀಕಿಸಿದ ಸಿಎಂ ಕೆಸಿಆರ್​ ಪುತ್ರಿ

Rahul Kavitha
Published on

ಹೈದರಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​ ಪಕ್ಷದ ನಾಯಕಿ, ಮುಖ್ಯಮಂತ್ರಿ ಕೆಸಿಆರ್​ ಪುತ್ರಿ ಕವಿತಾ ರಾಹುಲ್​ ಗಾಂಧಿ ಅವರನ್ನು ಪೇಪರ್ ಟೈಗರ್ ಎಂದು ಟೀಕಿಸಿದ್ದಾರೆ.

ತೆಲಂಗಾಣದ ಜಗ್​ತಿಯಾಲ್​ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಸ್ಥಳೀಯ ರಾಜಕಾರಣವನ್ನು ಅರ್ಥ ಮಾಡಿಕೊಳ್ಳದೆ ರಾಹುಲ್​ ಗಾಂಧಿ ಯಾರೋ ಬರೆದುಕೊಟ್ಟ ಭಾಷಣವನ್ನು ಇಲ್ಲಿ ಓದುತ್ತಾರೆ. ಅವರು ಬಬ್ಬರ್​ ಶೇರ್​ ಅಲ್ಲ ಪೇಪರ್ ಟೈಗರ್ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಈವರೆಗೂ ತೆಲಂಗಾಣದ ಸಂಪ್ರದಾಯ, ಸಂಸ್ಕೃತಿ ಮತ್ತು ಸ್ಥಳೀಯ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಐಆರೋ ಬರೆದುಕೊಟ್ಟ ಭಾಷಣವನ್ನು ಇಲ್ಲಿ ಬಂದು ಓದಿ ತೆರಳುತ್ತಾರೆ. ಇನ್ನೊಮ್ಮೆ ನೀವು ಆರೋಪಗಳನ್ನು ಮಾಡುವ ಒಮ್ಮೆ ಪರಿಶೀಲಿಸಿ ಆ ನಂತರ ಆರೋಪಗಳನ್ನು ಮಾಡಿ ಸುಮ್ಮನೇ ಪೇಪರ್​ ಟೈಗರ್ ಎನ್ನಿಸಿಕೊಳ್ಳಬೇಡಿ.

ತೆಲಂಗಾಣವು ರಾಜಕಾರಣದ ಬಗ್ಗೆ ಅತ್ಯಂತ ಅರಿವು ಹೊಂದಿರುವ ರಾಜ್ಯ. ಇಲ್ಲಿನ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಮುಂದಿನ ಬಾರಿ ನೀವು ತೆಲಂಗಾಣಕ್ಕೆ ಭೇಟಿ ನೀಡಿದ ವೇಳೆ ಹೋಟೆಲ್​ಗೆ ಹೋಗಿ ದೋಸೆ ತಿನ್ನುವ ಬದಲು ತೆಲಂಗಾಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಮನೆಗೆ ತೆರಳಿ. ಅವರ ತಂದೆ-ತಾಯಿಯ ಬಳಿ ಕಷ್ಟ ಕೇಳಿ ಆಘ ನಿಮಗೆ ನಿಜವಾದ ಸಮಸ್ಯೆ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಕೆಸಿಆರ್​ ಪುತ್ರಿ ಕವಿತಾ ರಾಹುಲ್​ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net