More

    ತೆಲಂಗಾಣವನ್ನು ಹಾಳು ಮಾಡುವಲ್ಲಿ ನಿಮ್ಮ ಕುಟುಂಬ ಮಹತ್ವದ ಪಾತ್ರ ವಹಿಸಿದೆ; ರಾಹುಲ್ ಹೇಳಿಕೆಗೆ ಕೆಸಿಆರ್ ಪುತ್ರಿ ತಿರುಗೇಟು

    ಹೈದರಾಬಾದ್: ತೆಲಂಗಾಣ ರಾಜ್ಯ ಹಾಳು ಮಾಡುವಲ್ಲಿ ನಿಮ್ಮ ಕುಟುಂಬದ ಕೊಡುಗೆಯನ್ನು ಈ ರಾಜ್ಯದ ಜನರು ಎಂದಿಗೂ ಮರೆಯುವುದಿಲ್ಲ ಎಂದು ಬಿಆರ್​ಎಸ್​ ಪಕ್ಷದ ನಾಕಿ, ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಅಂದು ಸೋನಿಯಾ ಗಾಂಧಿ ಇಲ್ಲದಿದ್ದರೆ ತೆಲಂಗಾಣ ರಾಜ್ಯ ರಚನೆಯಾಗುತ್ತಿರಲಿಲ್ಲ ಎಂಬ ರಾಹುಲ್​ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಮುಖ್ಯಮಂತ್ರಿ ಕೆಸಿಆರ್​ ಪುತ್ರಿ ಕವಿತಾ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

    ರಾಹುಲ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತೆಲಂಗಾಣವನ್ನು ಹಾಳು ಮಾಡುವಲ್ಲಿ ನಿಮ್ಮ ಕುಟಂಬದ ಪಾತ್ರ ಮಹತ್ವದಾಗಿದೆ. ರಾಹುಲ್ ಗಾಂಧಿ ತೆಲಂಗಾಣದೊಂದಿಗೆ ಸಂಬಂಧವನ್ನು ಹೊಂದಿರುವುದಾಗಿ ಹೇಳಿರುವ ಅವರ ಮಾತನ್ನು ನಾನು ಒಪ್ಪುತ್ತೇನೆ. ಅವರು ತೆಲಂಗಾಣ ರಾಜ್ಯ ರಚನೆಯ ಕುರಿತಾಗಿ ಆಡಿರುವ ಪ್ರತಿಯೊಮದು ಮಾತು ಸಹ ಸತ್ಯ ಎಂದಿದ್ದಾರೆ.

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ಸೆಂಥಿಲ್ ಬಾಲಾಜಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯ

    ಸ್ವತಂತ್ರ ನಂತರದಲ್ಲಿ ಪ್ರತ್ಯೇಕ ರಾಜ್ಯವಾಗಬೇಕಿದ್ದ ತೆಲಂಗಾಣವನ್ನು ಆಂಧ್ರಪ್ರದೇಶದಲ್ಲಿ ವಿಲೀನಗೊಳಿಸಿ ಮೊದಲಿಗೆ ಜವಹರಲಾಲ್​ ನೆಹರೂ ನಮ್ಮ ಕನಸುಗಳನ್ನು ಕೊಂದರು. ನಂತರ 1969ರಲ್ಲಿ ನಾವು ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಟ್ಟಾಗ ತೆಲಂಗಾಣದ 369 ಯುವಕರನ್ನು ಗುಂಡಿಕ್ಕಿ ಹತ್ಯೆ ಮಾಡಿಸಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ. ಒಬಿಸಿ ಸಮುದಾಯಕ್ಕೆ ಸೇರಿದ್ದ ನಮ್ಮ ಮುಖ್ಯಮಂತ್ರಿಗಳನ್ನು ಅವಮಾನಿಸಿದ್ದು, ನಿಮ್ಮ ತಂದೆಯವರಾದ ರಾಜೀವ್​ ಗಾಂಧಿಯವರು ಎಂದು ರಾಹುಲ್​ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿದೆ. ನವೆಂಬರ್ 03ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts