More

  ಅಂದು ಸೋನಿಯಾ ಗಾಂಧಿ ಇಲ್ಲದಿದ್ದರೆ ತೆಲಂಗಾಣ ರಾಜ್ಯ ರಚನೆಯಾಗುತ್ತಿರಲಿಲ್ಲ: ರಾಹುಲ್ ಗಾಂಧಿ

  ಹೈದರಾಬಾದ್: ತೆಲಂಗಾಣ ರಾಜ್ಯ ರಚನೆಯಾಗಲು ಸೋನಿಯಾ ಗಾಂಧಿ ಅವರೇ ಕಾರಣ, ಅವರಿರಲಿಲ್ಲದಿದ್ದರೆ ಇಂದು ತೆಲಂಗಾಣ ರಚನೆಯಾಗುತ್ತಿರಲಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

  ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದ ಆರ್ಮೂರ್​ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಆಡಳಿತರೂಢ ಬಿಆರ್​ಎಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

  ತೆಲಂಗಾಣ ರಾಜ್ಯ ರಚನೆ ಮಾಡಲು ಸೋನಿಯಾ ಗಾಂಧಿ ಅವರು ನಿಮಗೆ ಸಹಾಯ ಮಾಡಿದ್ದಾರೆ. ಅಂದು ಸೋನಿಯಾ ಗಾಂಧಿ ಅವರು ಸಹಾಯ ಮಾಡಿರದಿದ್ದರೆ ಇಂದು ತೆಲಂಗಾಣ ಪ್ರತ್ಯೇಕ ರಾಜ್ಯವಾಗಲು ಸಾಧ್ಯವಾಗುತ್ತಿರಲಿಲ್ಲ. ಸೋನಿಯಾ ಗಾಂಧಿ ಅವರು ಜನರಿಗಾಗಿ ಈ ನಿರ್ಧಾರವನ್ನು ಮಾಡಿದ್ದಾರೆ ಹೊರತು ಬೇರೆ ಯಾರ ಹಿತಕ್ಕಾಗಿ ಅಲ್ಲ.

  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ತಮ್ಮ ಬಂಧನ ಪ್ರಶ್ನಿಸಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

  ಒಂದು ಕಾಲದಲ್ಲಿ ಬಿಜೆಪಿ ನಾಯಕರು ತೆಲಂಗಾಣದಲ್ಲಿ ಬಾಲಿವುಡ್​ ನಾಯಕರಂತೆ ತಿರುಗಾಡುತ್ತಿದ್ದರು. ಇಂದು ತೆಲಂಗಾಣದಲ್ಲಿ ಪಕ್ಷ ಸೋಲುತ್ತದೆ ಎಂಬ ವಿವಾರ ತಿಳಿದ ಮೇಲೆ ಅವರುಗಳು ಕಾಂಗ್ರೆಸ್​ಗೆ ಸೇರಲು ಸಾಲುಗಟ್ಟಿ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

  ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂಧಲ್ಲಿ ನಾವು ಈಗಾಗಲೇ ಘೋಷಿಸಿರುವ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ತೆಲಂಗಾಣದಲ್ಲಿ ಜಾತಿಗಣತಿ ನಡೆಸುತ್ತೇವೆ ಎಂದು ಹಲವು ಭರವಸೆಗಳನ್ನು ರಾಹುಲ್ ಗಾಂಧಿ ನೀಡಿದ್ದಾರೆ.

  ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿದೆ. ನವೆಂಬರ್ 03ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts