

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಲ್ರೌಂಡ್ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾ ತಂಡವು 62 ರನ್ಗಳ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರಂಭಿಕರಾದ ಡೇವಿಡ್ ವಾರ್ನರ್ (163 ರನ್, 124 ಎಸೆತ, 14 ಬೌಂಡರಿ, 9 ಸಿಕ್ಸರ್), ಮಿಚೆಲ್ ಮಾರ್ಷ್ (121 ರನ್, 108 ಎಸೆತ, 10 ಬೌಂಡರಿ, 9 ಸಿಕ್ಸರ್) ಶತಕಗಳ ಫಲವಾಗಿ ಆಸ್ಟ್ರೇಲಿಯಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿತ್ತು.
ಪಾಕಿಸ್ತಾನದ ಪರ ಶಹೀನ್ ಅಫ್ರಿದಿ (10-1-54-5), ಹ್ಯಾರಿಸ್ ರೌಫ್ (8-0-83-3), ಉಸಾಮಾ ಮಿರ್ (9-0-82-1), ಹಸನ್ ಅಲಿ (8-0-57-0), ಇಫ್ತಿಕಾರ್ ಅಹಮದ್ (8-0-37-0), ಮೊಹಮ್ಮದ್ ನವಾಜ್ (7-0-43-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಸವಾಲಿನ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಅಬ್ದುಲ್ಲಾ ಶಫಿಕ್ (64 ರನ್, 61 ಎಸೆತ, 7 ಬೌಂಡರಿ, 2 ಸಿಕ್ಸರ್), ಇಮಾಮ್ ಉಲ್ ಹಕ್ (70 ರನ್, 71 ಎಸೆತ, 10 ಬೌಂಡರಿ) ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 45.3 ಓವರ್ಗಳಲ್ಲಿ 305 ರನ್ಗಳಿಗೆ ಆಲೌಟ್ ಆಗುವ ಮೂಲಕ 62 ರನ್ಗಳ ಸೋಲೊಪ್ಪಿಕೊಂಡಿತ್ತು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ (10-0-53-4), ಪ್ಯಾಟ್ ಕಮ್ಮಿನ್ಸ್ (7.3-0-62-2), ಮಾರ್ಕಸ್ ಸ್ಟೋಯಿನಿಸ್ (5-0-40-2), ಜೋಶ್ ಹೇಜಲ್ವುಡ್ (10-1-37-1), ಮಿಚೆಲ್ ಸ್ಟಾರ್ಕ್ (8-0-65-1), ಗ್ಲೆನ್ ಮ್ಯಾಕ್ಸ್ವೆಲ್ (5-0-40-0) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.