

ಮುಂಬೈ: ಮಿಡ್ ಕ್ಯಾಪ್ ವಲಯದ ಬ್ಯಾಂಕೇತರ ಹಣಕಾಸು ಕಂಪನಿಯಾದ ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್ (Capri Global Capital Ltd.) ಷೇರುಗಳು ಕಳೆದ ಕೆಲವು ದಿನಗಳಿಂದ ವ್ಯಾಪಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವುಗಳ ಬೆಲೆ ಸಾಕಷ್ಟು ಏರಿಕೆಯಾಗಿದೆ.
ಮಂಗಳವಾರ ಈ ಷೇರುಗಳು ಇಂಟ್ರಾಡೇ 0.52% ರಷ್ಟು ಕುಸಿದು ಪ್ರತಿ ರೂ 925. ರೂಪಾಯಿ ತಲುಪಿದವು. ಆದರೆ, ಕಳೆದೊಂದು ತಿಂಗಳಲ್ಲಿ ಈ ಷೇರು ಬೆಲೆ ಶೇಕಡಾ 20ರಷ್ಟು ಹೆಚ್ಚಳ ಕಂಡಿದೆ.
ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್ ಮಾರ್ಚ್ 5, 2024 ರಂದು 1: 1 ಬೋನಸ್ ವಿತರಿಸಲಿದೆ. ಅಂದರೆ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡಲಿದೆ. ಅಲ್ಲದೆ, 2: 1 ಸ್ಟಾಕ್ ಸ್ಪ್ಲಿಟ್ ಕೂಡ ಮಾಡಲಿದೆ. ಅಂದರೆ, ಈಗಿರುವ ಪ್ರತಿ 1 ಷೇರನ್ನು ಎರಡು ಷೇರುಗಳಾಗಿ ವಿಭಜಿಸುತ್ತದೆ. ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಷೇರುಗಳು ಕಳೆದ 3-ತಿಂಗಳಲ್ಲಿ 24% ನಷ್ಟು ಏರಿಕೆ ಕಂಡಿವೆ. ಅಲ್ಲದೆ, ಕಳೆದ 1-ವರ್ಷದಲ್ಲಿ 30% ಏರಿಕೆಯಾಗಿವೆ. ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ 19,084.99 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್ ಬೋನಸ್ ಷೇರು, ಸ್ಟಾಕ್ ಸ್ಪ್ಲಿಟ್‌ಗಾಗಿ ರೆಕಾರ್ಡ್ ದಿನಾಂಕವನ್ನು ಘೋಷಿಸಿದೆ. ಮಂಗಳವಾರ, ಮಾರ್ಚ್ 5, 2024ರಂದು 1:1 ಬೋನಸ್ ಷೇರು ಮತ್ತು 2:1 ಸ್ಟಾಕ್ ವಿಭಜನೆ ಮಾಡಲಿದೆ.
ಈ ಷೇರಿನ 52-ವಾರದ ಹೆಚ್ಚಿನ ಬೆಲೆಯು ರೂ 1048.40 ಮತ್ತು ಕನಿಷ್ಠ ಬೆಲೆ ರೂ 565.85 ಆಗಿದೆ. ಈ ಷೇರುಗಳು ಕಳೆದ 3 ವರ್ಷಗಳಲ್ಲಿ 168% ನಷ್ಟು ಲಾಭವನ್ನು ನೀಡಿವೆ. ಕಳೆದ 5 ವರ್ಷಗಳಲ್ಲಿ, ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಸ್ಟಾಕ್ 611% ಹೆಚ್ಚಾಗಿದೆ.
ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಫೈನಾನ್ಷಿಯಲ್ಸ್: ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ನಿವ್ವಳ ಮಾರಾಟವನ್ನು ರೂ 605.04 ಕೋಟಿ ಎಂದು ಘೋಷಿಸಿತು, ಡಿಸೆಂಬರ್ 2022 ರ ಅನುಗುಣವಾದ ತ್ರೈಮಾಸಿಕದಲ್ಲಿ ರೂ 384.80 ಕೋಟಿಗೆ ಹೋಲಿಸಿದರೆ 57.23% ಹೆಚ್ಚಾಗಿದೆ. ಕಂಪನಿಯ ತ್ರೈಮಾಸಿಕ ನಿವ್ವಳ ಲಾಭವು ಶೇಕಡಾ 81.67ರಷ್ಟು ಏರಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಘೋಷಿಸಲಾದ ಲಾಭವು 37.42 ಕೋಟಿ ರೂ. ಇದ್ದರೆ, ಪ್ರಸ್ತುತ ತ್ರೈಮಾಸಿಕದಲ್ಲಿ ಇದು 67.98 ಕೋಟಿ ರೂ. ಆಗಿದೆ.