More

    ಭರ್ಜರಿ ಪ್ರೀಮಿಯಂನೊಂದಿಗೆ ಮಾರುಕಟ್ಟೆಗೆ ಪ್ರವೇಶ: ಮೊದಲ ದಿನವೇ 175% ಲಾಭ; ಹೂಡಿಕೆದಾರರಿಗೆ ಒಂದೇ ದಿನದಲ್ಲಿ ಹಣದ ಸುರಿಮಳೆ

    ನವದೆಹಲಿ: ಬಿಎಲ್​ಎಸ್ ಇ – ಸರ್ವೀಸಸ್​ ಲಿಮಿಟೆಡ್​ (BLS E-Services Ltd) ಕಂಪನಿಯ ಷೇರುಗಳು ಮಂಗಳವಾರ ಅಸಾಧಾರಣವಾದ ರೀತಿಯಲ್ಲಿ ಮಾರುಕಟ್ಟೆಗೆ ಪದಾರ್ಪಣೆ ಮಾಡಿದವು. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ಮೊದಲ ದಿನವೇ ಈ ಕಂಪನಿಯ ಷೇರುಗಳ ಬೆಲೆ ಅಂದಾಜು 175 ಪ್ರತಿಶತದಷ್ಟು ಬೃಹತ್ ಪ್ರೀಮಿಯಂ ತಲುಪಿ ದಾಖಲೆ ಬರೆಯಲಾಯಿತು.

    ಐಪಿಒದಲ್ಲಿ ಈ ಷೇರನ್ನು ಹೂಡಿಕೆದಾರರಿಗೆ ಪ್ರತಿ ಷೇರಿಗೆ 135 ರೂಪಾಯಿಯ ಬೆಲೆಗೆ ಕೆಲ ದಿನಗಳ ಹಿಂದೆ ನೀಡಲಾಗಿತ್ತು. ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಲಾಯಿತು. ಭರ್ಜರಿ ಪ್ರೀಮಿಯಂನೊಂದಿಗೆ ಈ ಸ್ಟಾಕ್​ ಲಿಸ್ಟಿಂಗ್ ಆಯಿತು. ಬಿಎಸ್‌ಇ 309 ರೂಪಾಯಿಯ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿತು. ಇದು ಐಪಿಒ ಬೆಲೆಗಿಂತ ಶೇಕಡಾ 128.88 ರಷ್ಟು ಹೆಚ್ಚಳವಾಗಿತ್ತು. ತದನಂತರ ಇಂಟ್ರಾ ಡೇ ವಹಿವಾಟಿನಲ್ಲಿ ಷೇರಿ ಬೆಲೆ ಹೆಚ್ಚಾಗುತ್ತ ಹೋಗಿ, 370.75 ರೂಪಾಯಿ ತಲುಪಿತು. ಈ ಮೂಲಕ ಮೊದಲ ದಿನವೇ ಹೂಡಿಕೆದಾರರಿಗೆ ಶೇಕಡಾ 174.62ರಷ್ಟು ಲಾಭ ದೊರೆಯಿತು. ಒಂದೇ ದಿನದಲ್ಲಿ ಮಲ್ಟಿಬ್ಯಾಗರ್​ (ಷೇರು ಬೆಲೆ ಹಲವು ಪಟ್ಟು ಆಗುವುದು) ಸ್ಟಾಕ್​ ಆಗಿ ಹೊರಹೊಮ್ಮಿತು.

    ಎನ್​ಎಸ್​ಇಯಲ್ಲಿ ಈ ಕಂಪನಿಯ ಷೇರುಗಳು 366 ರೂಪಾಯಿ ತಲುಪಿ ಶೇ. 171.11ರಷ್ಟು ತೀವ್ರ ಏರಿಕೆಯನ್ನು ದಾಖಲಿಸಿದವು.

    ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ 3,368.50 ಕೋಟಿ ರೂಪಾಯಿ ಏರಿಕೆಯಾಯಿತು. ವಹಿವಾಟಿನ ಪರಿಮಾಣದ ಪ್ರಕಾರ, ಕಂಪನಿಯ 58.32 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ ಮತ್ತು 4.99 ಕೋಟಿ ಷೇರುಗಳು ಎನ್‌ಎಸ್‌ಇಯಲ್ಲಿ ಮಂಗಳವಾರದಂದು ವಹಿವಾಟು ನಡೆಸಿವೆ.

    BLS ಇ-ಸರ್ವೀಸಸ್​ ಆರಂಭಿಕ ಸಾರ್ವಜನಿಕ ಕೊಡುಗೆ (IPO- ಇನಿಷಿಯಲ್​ ಪಬ್ಲಿಕ್​ ಆಫರ್​) ಬಿಡ್ಡಿಂಗ್‌ನ ಕೊನೆಯ ದಿನವಾದ ಗುರುವಾರ, ಫೆ. 1ರಂದು 162.48 ಪಟ್ಟು ಚಂದಾದಾರಿಕೆಯನ್ನು ಪಡೆದುಕೊಂಡಿತ್ತು.
    2,30,30,000 ಈಕ್ವಿಟಿ ಷೇರುಗಳ ತಾಜಾ ವಿತರಣೆಯ ಐಪಿಒ ಷೇರಿನ ಬೆಲೆ ಪಟ್ಟಿಯನ್ನು 129-135 ರೂಪಾಯಿಗೆ ನಿಗದಿಪಡಿಸಲಾಗಿತ್ತು.

    ಈ ಕಂಪನಿಯು ಪ್ರಮುಖ ತಂತ್ರಜ್ಞಾನ-ಸಕ್ರಿಯಗೊಳಿಸಿದ ಡಿಜಿಟಲ್ ಸೇವಾ ಪೂರೈಕೆದಾರರಾಗಿದ್ದು, ಭಾರತದಲ್ಲಿನ ಪ್ರಮುಖ ಬ್ಯಾಂಕ್‌ಗಳಿಗೆ ಸೇವೆಗಳನ್ನು ಒದಗಿಸುತ್ತಿದೆ, ಇ-ಸೇವೆಗಳು; ಮತ್ತು ದೇಶದಲ್ಲಿ ತಳಮಟ್ಟದಲ್ಲಿ ಇ-ಆಡಳಿತ ಸೇವೆಗಳನ್ನು ಒದಗಿಸುತ್ತದೆ.

    BLS ಇ-ಸರ್ವೀಸಸ್​ ಲಿಮಿಟೆಡ್​ ಕಂಪನಿಯು BLS ಇಂಟರ್‌ನ್ಯಾಶನಲ್ ಸರ್ವೀಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದು ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ನೀಡುತ್ತದೆ.
    ಕಂಪನಿಯು ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್‌ಗಳನ್ನು ಕ್ರೋಢೀಕರಿಸಲು ತನ್ನ ತಂತ್ರಜ್ಞಾನ ಮೂಲಸೌಕರ್ಯವನ್ನು ಬಲಪಡಿಸಲು ತಾಜಾ ಷೇರು ಹಂಚಿಕೆಯಿಂದ ಬಂದ ಆದಾಯವನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.

    ವಿದೇಶಿ ಹೂಡಿಕೆ ಹೆಚ್ಚಳ, ಐಟಿ ಷೇರು ಖರೀದಿ ಜೋರು: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು

    813ರಿಂದ 79 ರೂಪಾಯಿಗೆ ಕುಸಿತ ಕಂಡಿದ್ದ ಷೇರಿಗೆ ಮತ್ತೆ ಬೇಡಿಕೆ: ಇಂಜಿನಿಯರಿಂಗ್ ಕಂಪನಿ ಸ್ಟಾಕ್​ ಈಗ 79 ರೂಪಾಯಿಗೆ ಏರಿಕೆ

    ಮುಂದಿನ ದಿನಗಳಲ್ಲಿ ಏರಲಿದೆ ಫಾರ್ಮಾ ಷೇರು ಬೆಲೆ : ಕಂಪನಿ ಲಾಭಾಂಶ ಹೆಚ್ಚುತ್ತಿದ್ದಂತೆಯೇ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts