More

    ಮುಂದಿನ ದಿನಗಳಲ್ಲಿ ಏರಲಿದೆ ಫಾರ್ಮಾ ಷೇರು ಬೆಲೆ : ಕಂಪನಿ ಲಾಭಾಂಶ ಹೆಚ್ಚುತ್ತಿದ್ದಂತೆಯೇ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಮುಂಬೈ: ಫಾರ್ಮಾ ವಲಯದ ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (Torrent Pharmaceuticals Ltd.) 2024 ರ ವ್ಯಾಪಾರ ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.

    ಫಲಿತಾಂಶಗಳ ನಂತರ, ಅನೇಕ ಬ್ರೋಕರೇಜ್ (ದಲ್ಲಾಳಿ) ಸಂಸ್ಥೆಗಳು ಈ ಸ್ಟಾಕ್ ಕುರಿತು ವರದಿಗಳನ್ನು ಬಿಡುಗಡೆ ಮಾಡಿವೆ. ಫಲಿತಾಂಶಗಳ ನಂತರ, ಈ ಬ್ರೋಕರೇಜ್ ಸಂಸ್ಥೆಗಳು ಷೇರುಗಳಲ್ಲಿ ಮತ್ತಷ್ಟು ಏರಿಕೆಯನ್ನು ಅಂದಾಜಿಸಿದ್ದಾರೆ.

    ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಯು ತನ್ನ ಭಾರತೀಯ, ಜರ್ಮನ್ ಮತ್ತು ಬ್ರೆಜಿಲಿಯನ್ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಈ ಕಂಪನಿಯ ಲಾಭವು ಮೂರನೇ ತ್ರೈಮಾಸಿಕದಲ್ಲಿ ಅಂದಅಜು 57% ರಷ್ಟು ಹೆಚ್ಚಾಗಿದೆ.

    ದೇಶೀಯ ಮಾರುಕಟ್ಟೆಯಿಂದ ಬಲವಾದ ಬೇಡಿಕೆ ಹಾಗೂ ಜರ್ಮನಿ, ಬ್ರೆಜಿಲ್ ವ್ಯವಹಾರದ ಉತ್ತಮ ಕಾರ್ಯಕ್ಷಮತೆಯಿಂದಾಗಿ, ಕಂಪನಿಯ ಲಾಭವು ಡಿಸೆಂಬರ್​ ತ್ರೈಮಾಸಿಕದಲ್ಲಿ 443 ಕೋಟಿ ರೂ.ಗೆ ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 283 ಕೋಟಿ ರೂ. ಲಾಭ ಗಳಿಸಿತ್ತು.

    ಡಿಸೆಂಬರ್​ ತ್ರೈಮಾಸಿಕದಲ್ಲಿ ಆದಾಯವೂ ವಾರ್ಷಿಕವಾಗಿ ಶೇ. 9.7ರಷ್ಟು ಏರಿಕೆಯಾಗಿ 2732 ಕೋಟಿ ರೂಪಾಯಿಗೆ ತಲುಪಿದೆ. ಭಾರತೀಯ ವ್ಯಾಪಾರದಲ್ಲಿ ಮಾರಾಟವು 12% ರಷ್ಟು ಹೆಚ್ಚಾಗಿದ್ದರೆ, ಬ್ರೆಜಿಲಿಯನ್ ವ್ಯಾಪಾರದಲ್ಲಿ ಮಾರಾಟವು 26% ರಷ್ಟು ಏರಿಕೆಯಾಗಿದೆ.

    EBITDA (earnings before interest, taxes, depreciation, and amortization) ಮಾರ್ಜಿನ್​ನಲ್ಲಿ 270 ಮೂಲಾಂಕಗಳ ಸುಧಾರಣೆಯನ್ನು ಕಂಡಿದ್ದು, 31.8%ಕ್ಕೆ ತಲುಪಿದೆ.

    ಬ್ರೋಕರೇಜ್ ಸಂಸ್ಥೆಗಳು ಹೇಳೋದೇನು?

    ಒಂದು ಜಾಗತಿಕ ಬ್ರೋಕರೇಜ್ ಸಂಸ್ಥೆಯು ಈ ಕಂಪನಿಯ ಷೇರುಗಳ ಗುರಿಯನ್ನು 2790 ರೂಪಾಯಿಗೆ ನಿಗದಿಪಡಿಸಿದೆ, ಇನ್ನೊಂದು ಬ್ರೋಕರೇಜ್ ಸಂಸ್ಥೆಯು 2860 ರೂಪಾಯಿಯ ಗುರಿಯನ್ನು ನೀಡಿದೆ. ಮೂರನೆಯ ಸಂಸ್ಥೆಯು ಈ ಷೇರಿಗೆ 3650 ರೂಪಾಯಿಯ ಗುರಿಯನ್ನು ನಿಗದಿಪಡಿಸಿದೆ. ಪ್ರಸ್ತುತು ಈ ಷೇರುಗಳ ಬೆಲೆ 2160 ರೂಪಾಯಿ ಇದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 2,685 ರೂಪಾಯಿ ಆಗಿದ್ದರೆ ಕನಿಷ್ಠ ಬೆಲೆಯು 1,445.55 ರೂಪಾಯಿ ಆಗಿದೆ.

    ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಭಾರತ ಮೂಲದ ಔಷಧೀಯ ಸಂಸ್ಥೆಯಾಗಿದೆ. ಕಂಪನಿಯು ಹೃದಯರಕ್ತನಾಳದ (CV) ಮತ್ತು ಕೇಂದ್ರ ನರಮಂಡಲದ (CNS), ಜೀರ್ಣಕಾರಿ (GI) ಜೀವಸತ್ವಗಳ ಖನಿಜಗಳ ಪೋಷಣೆ (VMN) ಮತ್ತು ಮಧುಮೇಹ ವಿರೋಧಿ (AD), ಸ್ತ್ರೀರೋಗ ಕ್ಷೇತ್ರ, ನೋವು ಮತ್ತು ಚರ್ಮರೋಗ ಸೇರಿದಂತೆ ವಿವಿಧ ಚಿಕಿತ್ಸಕ ವಿಭಾಗಗಳ ಮೇಲೆ ಕೇಂದ್ರೀಕರಿಸುತ್ತದೆ.

    ಕಂಪನಿಯು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಔಷಧಗಳ ಬ್ರಾಂಡ್ ಮತ್ತು ಜೆನೆರಿಕ್ ಫಾರ್ಮುಲೇಶನ್‌ಗಳ ಸಂಶೋಧನೆ ಅಭಿವೃದ್ಧಿ, ಉತ್ಪಾದನೆಯ ಮಾರ್ಕೆಟಿಂಗ್ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದೆ.

    ಟೆಡಿಬಾರ್, ಅಟೋಗ್ಲಾ, ಸ್ಪೂ ಮತ್ತು ಬಿ4 ನಾಪ್ಪಿ ಇವು ಕಂಪನಿಯು ಮಕ್ಕಳಿಗಾಗಿ ತಯಾರಿಸುವ ಉತ್ಪನ್ನಗಳಾಗಿವೆ. ಕಂಪನಿಯ ಮೊಡವೆ/ಫೇಸ್‌ಕೇರ್ ಬ್ರ್ಯಾಂಡ್‌ಗಳು ಕ್ಲಿನ್‌ಮಿಸ್ಕಿನ್, ಅಕ್ನೆಮೊಯಿಸ್ಟ್, ಟ್ರಾಕ್ನಿಲೋ ಮತ್ತು ಫ್ಯಾಶ್ ಆಗಿವೆ.

    ಕಂಪನಿಯ ಕೂದಲು ಮತ್ತು ನೆತ್ತಿಯ ಆರೈಕೆಯನ್ನು Proanagen, Perlice, Permite, ಮತ್ತು NOSKURF ಬ್ರ್ಯಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ.

    ಉತ್ಪಾದನಾ ಸೌಲಭ್ಯಗಳು ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿವೆ. ಸಗಟು ಔಷಧ ವಿತರಕರು, ದೊಡ್ಡ ದಾಸ್ತಾನುದಾರರು ಚಿಲ್ಲರೆ ವ್ಯಾಪಾರಿಗಳು ಮತ್ತು ಔಷಧಾಲಯಗಳ ಮೂಲಕ ಕಂಪನಿಯು ಉತ್ಪನ್ನಗಳನ್ನು ವಿತರಿಸುತ್ತದೆ.

    ಪೇಟಿಎಂ ಕಂಪನಿ ಭವಿಷ್ಯ ಇನ್ನೂ ಅತಂತ್ರವೇಕೆ?: ಮಂಗಳವಾರ ಮೊದಲು ಕುಸಿತದ ನಂತರ ಷೇರು ಬೆಲೆಯಲ್ಲಿ ಅಲ್ಪ ಚೇತರಿಕೆ

    ಎಚ್​​ಡಿಎಫ್​ಸಿ ಬ್ಯಾಂಕ್​ ಪಾಲು ಹೆಚ್ಚಳಕ್ಕೆ ಆರ್​ಬಿಐ ಅನುಮೋದನೆ: ಯೆಸ್​ ಬ್ಯಾಂಕ್​ ಷೇರು ಒಂದೇ ದಿನದಲ್ಲಿ 13% ಏರಿಕೆ, ಸ್ಟಾಕ್​ ಖರೀದಿಗೆ ಸಲಹೆ ನೀಡುವ ಮಾರುಕಟ್ಟೆ ತಜ್ಞರು ಹೇಳೋದೇನು?

    ಪೇಟಿಎಂ ಬದಲು ಬೇರೆ ಪೇಮೆಂಟ್​ ಆ್ಯಪ್​ ಬಳಸಿ: ವ್ಯಾಪಾರಸ್ಥರಿಗೆ ಸಿಎಐಟಿ ಎಚ್ಚರಿಕೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts