More

    ಪೇಟಿಎಂ ಕಂಪನಿ ಭವಿಷ್ಯ ಇನ್ನೂ ಅತಂತ್ರವೇಕೆ?: ಮಂಗಳವಾರ ಮೊದಲು ಕುಸಿತದ ನಂತರ ಷೇರು ಬೆಲೆಯಲ್ಲಿ ಅಲ್ಪ ಚೇತರಿಕೆ

    ಮುಂಬೈ: ಈ ಷೇರು ಐಪಿಒ ಬೆಲೆಯಿಂದ 82% ಕುಸಿತ ಕಂಡಿದೆ, ಕುಸಿತದಲ್ಲಿ ಪ್ರತಿದಿನ ದಾಖಲೆಗಳು ಸೃಷ್ಟಿಯಾಗುತ್ತಿದೆ, ಹೂಡಿಕೆದಾರರಲ್ಲಿ ಭೀತಿ ತಲೆದೋರಿದೆ. ಈಗ ಈ ಷೇರಿನ ಬೆಲೆ 395 ರೂಪಾಯಿ ತಲುಪಿದೆ.

    ಇತ್ತೀಚಿನ ದಿನಗಳಲ್ಲಿ Paytm ನಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆಗೆದುಕೊಂಡ ಕ್ರಮದ ನಂತರ ಹೂಡಿಕೆದಾರರು ಸಂಕಷ್ಟದಲ್ಲಿದ್ದಾರೆ.

    Paytm ನ ಮೂಲ ಕಂಪನಿ One 97 ಕಮ್ಯುನಿಕೇಷನ್ಸ್‌ನ ಷೇರುಗಳು ನಿರಂತರವಾಗಿ ಭಾರಿ ಕುಸಿತವನ್ನು ಕಾಣುತ್ತಿವೆ. ಮಂಗಳವಾರ, ಆರಂಭಿಕ ವಹಿವಾಟಿನಲ್ಲಿ, Paytm ಷೇರುಗಳು 9.7% ಕುಸಿದು 52 ವಾರದ ಕನಿಷ್ಠ ಬೆಲೆಯಾದ 395.50 ರೂಪಾಯಿಗೆ ತಲುಪಿತ್ತು. ತದನಂತರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇ.7ರಷ್ಟು ಏರಿಕೆಯಾಗಿ ರೂ. 472.50ರ ದಿನದ ಗರಿಷ್ಠ ಮಟ್ಟ ತಲುಪಿತ್ತು. ದಿನದ ಕೊನೆಯಲ್ಲಿ 450 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸಿತು. ಸೋಮವಾರ, ಫೆ. 5ರಂದು ಈ ಸ್ಟಾಕ್ 10 ಪ್ರತಿಶತದಷ್ಟು ಲೋವರ್ ಸರ್ಕ್ಯೂಟ್ ತಲುಪಿ, ಶೇ. 10ರಷ್ಟು ಕುಸಿದಿತ್ತು.

    Paytm ಷೇರುಗಳು ಕಳೆದ ಶುಕ್ರವಾರ ಮತ್ತು ಗುರುವಾರ 20% ನಷ್ಟು ಲೋವರ್ ಸರ್ಕ್ಯೂಟ್ ತಲುಪಿದ್ದವು. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ಈ ಷೇರು 48% ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಸಾಕಷ್ಟು ಕುಸಿತ ಕಾಣುತ್ತಿರುವ ಕಾರಣಕ್ಕಾಗಿ ಸೆಬಿಯು ಸೋಮವಾರ ಈ ಷೇರಿನ ಸರ್ಕ್ಯೂಟ್ ಮಿತಿಯನ್ನು 20 ರಿಂದ 10 ಪ್ರತಿಶತಕ್ಕೆ ಇಳಿಸಿತು.

    ಪೇಟಿಎಂ ಷೇರುಗಳ ಕುಸಿತ ಏಕೆ?:

    ವಾಸ್ತವವಾಗಿ, ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಉಪಕರಣ, ವ್ಯಾಲೆಟ್ ಮತ್ತು ಫಾಸ್ಟ್ಯಾಗ್‌ನಲ್ಲಿ ಠೇವಣಿ ಅಥವಾ ಟಾಪ್‌ಅಪ್‌ಗಳನ್ನು ಸ್ವೀಕರಿಸದಂತೆ ಆರ್‌ಬಿಐ ಕಳೆದ ಬುಧವಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನಿರ್ದೇಶನ ನೀಡಿತ್ತು.

    ಇದಲ್ಲದೆ, ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ಹಣಕಾಸು ಅಪರಾಧ ವಿರೋಧಿ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

    “FEMA ಉಲ್ಲಂಘನೆಗಳ ಯಾವುದೇ ಊಹಾಪೋಹಗಳನ್ನು ನಾವು ಬಲವಾಗಿ ನಿರಾಕರಿಸುತ್ತೇವೆ” ಎಂದು Paytm ವಕ್ತಾರರು ಹೇಳಿದ್ದಾರೆ.

    Paytm ನ ವ್ಯಾಲೆಟ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ಮಾತುಕತೆ ನಡೆಸುತ್ತಿವೆ ಎಂಬ ವರದಿಗಳನ್ನು
    Paytm ಮತ್ತು Jio Financial Services ಈ ಎರಡೂ ಸಂಸ್ಥೆಗಳು ನಿರಾಕರಿಸಿವೆ.

    ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಸೋಮವಾರ ಆರ್‌ಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೂ, ಯಾವುದೇ ಪರಿಹಾರ ಕ್ರಮಗಳ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ. ಪ್ರಸ್ತುತ ಪರಿಸ್ಥಿತಿಯು ಯಥಾಸ್ಥಿತಿಯಲ್ಲಿದೆ.

    “ಇದು Paytm ಗೆ ದೊಡ್ಡ ಸವಾಲಾಗಿದೆ. ಮೂಲಭೂತವಾಗಿ ಈ ಸವಾಲನ್ನು ಜಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತೋರುತ್ತಿದೆ. ಇದು ಕಂಪನಿ, ವ್ಯವಹಾರ ಮತ್ತು ಷೇರುಗಳಿಗೆ ಸಂಪೂರ್ಣ ಅನಿಶ್ಚಿತತೆಯ ಅವಧಿಯನ್ನು ಸೃಷ್ಟಿಸುತ್ತದೆ” ಎಂದು ಎನ್ವಿಷನ್‌ನ ನಿಲೇಶ್ ಶಾ ಹೇಳಿದ್ದಾರೆ.

    ಎಚ್​​ಡಿಎಫ್​ಸಿ ಬ್ಯಾಂಕ್​ ಪಾಲು ಹೆಚ್ಚಳಕ್ಕೆ ಆರ್​ಬಿಐ ಅನುಮೋದನೆ: ಯೆಸ್​ ಬ್ಯಾಂಕ್​ ಷೇರು ಒಂದೇ ದಿನದಲ್ಲಿ 13% ಏರಿಕೆ, ಸ್ಟಾಕ್​ ಖರೀದಿಗೆ ಸಲಹೆ ನೀಡುವ ಮಾರುಕಟ್ಟೆ ತಜ್ಞರು ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts