More

    1 ಲಕ್ಷವಾಯ್ತು 13 ಕೋಟಿ: ರೂ 2ರಿಂದ 2900ಕ್ಕೇರಿದ ಷೇರು ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಸೋಲಾರ್ ಪವರ್ ವ್ಯವಹಾರದಲ್ಲಿ ತೊಡಗಿರುವ ವಾರಿ ರಿನ್ಯೂವಬಲ್ ಟೆಕ್ನಾಲಜೀಸ್ ಲಿಮಿಟೆಡ್​ (Waaree Renewable Technologies Ltd.) ಕಂಪನಿಯ ಷೇರುಗಳು ಹೂಡಿಕೆದಾರರಿಗೆ ದೊಡ್ಡ ಪ್ರಮಾಣದ ಲಾಭವನ್ನು ನೀಡಿವೆ. ಈ ಕಂಪನಿಯ ಷೇರುಗಳ ಬೆಲೆ ಸೋಮವಾರ ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿದ್ದವು. ಮಂಗಳವಾರ ಕೂಡ ಈ ಷೇರುಗಳ ಬೆಲೆ ಶೇ. 4.14ರಷ್ಟು ಏರಿಕೆಯಾಗಿ 2990.40 ರೂ. ಮುಟ್ಟಿತು.

    ವಾರಿ ರಿನ್ಯೂವಬಲ್ ಟೆಕ್ನಾಲಜೀಸ್‌ನ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 2 ರಿಂದ 2990 ರೂ. ತಲುಪಿದೆ. ಈ ಅವಧಿಯಲ್ಲಿ ಈ ಷೇರುಗಳ ಬೆಲೆ ಶೇಕಡಾ 137000 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 3037.75 ಹಾಗೂ ಕನಿಷ್ಠ ಬೆಲೆ ರೂ 157.02 ಆಗಿದೆ.

    ಸೋಲಾರ್ ವ್ಯವಹಾರದಲ್ಲಿ ತೊಡಗಿರುವ ಈ ಕಂಪನಿಯ ಷೇರಿನ ಬೆಲೆ 31 ಜುಲೈ 2020 ರಂದು 2.08 ರೂ. ಇತ್ತು. ಈಗ 2990.40 ರೂ. ತಲುಪಿದೆ. ಕಳೆದ 4 ವರ್ಷಗಳಲ್ಲಿ ಹೂಡಿಕೆದಾರರಿಗೆ 1,37,948% ನಷ್ಟು ಲಾಭವನ್ನು ಈ ಷೇರು ನೀಡಿದೆ. ನಾಲ್ಕು ವರ್ಷಗಳ ಹಿಂದೆ ಈ ಷೇರಿನಲ್ಲಿ 1 ಲಕ್ಷ ರೂಪಾಯಿ ಮಾಡಿದ್ದರೆ ಈಗ ಷೇರುಗಳ ಮೊತ್ತವು 13.79 ಕೋಟಿ ರೂಪಾಯಿ ಆಗುತ್ತಿತ್ತು.

    2 ವರ್ಷಗಳಲ್ಲಿ ಈ ಷೇರು ಬೆಲೆ 4573% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳು ಮೇ 6, 2022 ರಂದು ರೂ 61.45 ರಷ್ಟಿತ್ತು,

    ವಾರೀ ರಿನ್ಯೂವಬಲ್ ಟೆಕ್ನಾಲಜೀಸ್ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 1367% ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಮೇ 8, 2023 ರಂದು ರೂ 195.66 ರಷ್ಟಿತ್ತು, 2024ರಲ್ಲಿ ಇಲ್ಲಿಯವರೆಗೆ, ಶೇಕಡಾ 554 ರಷ್ಟು ಏರಿಕೆಯಾಗಿದೆ. ಈ ವರ್ಷದ ಆರಂಭದಲ್ಲಿ, ಜನವರಿ 1, 2024 ರಂದು, ಷೇರುಗಳ ಬೆಲೆ ರೂ 438.83 ರಷ್ಟಿತ್ತು, ಕಳೆದ 6 ತಿಂಗಳಲ್ಲಿ, ಕಂಪನಿಯ ಷೇರುಗಳ ಬೆಲೆ 951% ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ 7 ನವೆಂಬರ್ 2023 ರಂದು ರೂ 273 ರಷ್ಟಿತ್ತು.

    ವಾರಿ ರಿನ್ಯೂವಬಲ್ ಟೆಕ್ನಾಲಜೀಸ್ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಿದೆ. ಕಂಪನಿಯು ಜುಲೈ 2014 ರಲ್ಲಿ 57:10 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಅಂದರೆ, ಪ್ರತಿ 10 ಷೇರುಗಳಿಗೆ 57 ಬೋನಸ್ ಷೇರುಗಳನ್ನು ನೀಡಿತ್ತು. ಕಂಪನಿಯು ರೂ. 10 ಮುಖ ಬೆಲೆಯ ಷೇರುಗಳನ್ನು ರೂ. 2 ಮುಖ ಬೆಲೆಯ ಷೇರುಗಳಾಗಿ ವಿಂಗಡಿಸಿದೆ.

    ಅಕ್ಷಯ ತೃತೀಯ ಸಂದರ್ಭದಲ್ಲೇ ಚಿನ್ನದ ಬೆಲೆ ಅಗ್ಗ: 10 ಗ್ರಾಂಗೆ 1702 ರೂಪಾಯಿ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts