More

    ಅಕ್ಷಯ ತೃತೀಯ ಸಂದರ್ಭದಲ್ಲೇ ಚಿನ್ನದ ಬೆಲೆ ಅಗ್ಗ: 10 ಗ್ರಾಂಗೆ 1702 ರೂಪಾಯಿ ಕುಸಿತ

    ಮುಂಬೈ: ಅಕ್ಷಯ ತೃತೀಯಕ್ಕೂ ಮುನ್ನ ಚಿನ್ನದ ಬೆಲೆ ಕುಸಿದಿದೆ. ಆದರೆ, ಬೆಳ್ಳಿ ದರದಲ್ಲಿ ಏರಿಕೆ ಕಾಣುತ್ತಿದೆ. ಈ ಬಾರಿ ಅಕ್ಷಯ ತೃತೀಯ ಮೇ 10 ರಂದು ಬರುತ್ತದೆ. ಈ ದಿನ ಚಿನ್ನವನ್ನು ಖರೀದಿಸುವುದು ಶುಭ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಸಹಜವಾಗಿ ಕಂಡಬರುತ್ತದೆ. ಆದರೆ, ಮಂಗಳವಾರ (ಮೇ 7) ದೇಶದೆಲ್ಲೆಡೆ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ.

    ಸೋಮವಾರದ ಮುಕ್ತಾಯದ ಬೆಲೆ 71775 ಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 41 ರೂ. ಕಡಿಮೆ ಆಗಿದೆ. ಅಂದರೆ, ಚಿನ್ನದ ಬೆಲೆ ಈಗ 10 ಗ್ರಾಂಗೆ 71775 ರೂ. ಆಗಿದೆ. ಬೆಳ್ಳಿ 208 ರೂ ಏರಿಕೆಯಾಗಿ ಪ್ರತಿ ಕೆಜಿಗೆ 81500 ರೂ. ಮುಟ್ಟಿದೆ. ಏಪ್ರಿಲ್ 19, 2024 ರಂದು ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 73596 ರೂ. ಮುಟ್ಟಿತ್ತು. ಇದಕ್ಕೆ ಹೋಲಿಸಿದರೆ, ಈಗ ಚಿನ್ನದ ಬೆಲೆ 10 ಗ್ರಾಂಗೆ 1702 ರೂ. ಕಡಿಮೆಯಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1827 ರೂ.ಗಳಷ್ಟು ಕಡಿಮೆಯಾಗಿದೆ, ಏಪ್ರಿಲ್ 16 ರಂದು ಬೆಳ್ಳಿಯ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 83632 ರೂ. ಮುಟ್ಟಿತ್ತು.

    ಇಂಡಿಯನ್​ ಬುಲಿಯನ್​ ಆ್ಯಂಡ್ ಜುವೆಲ್ಲರಿ ಅಸೋಸಿಯೇಷನ್​ (IBJA) ಮಂಗಳವಾರ ಬಿಡುಗಡೆ ಮಾಡಿದ ಇತ್ತೀಚಿನ ದರದ ಪ್ರಕಾರ, ಮೇ 7 ರಂದು, 23 ಕ್ಯಾರೆಟ್ ಚಿನ್ನವು 10 ಗ್ರಾಂಗೆ 40 ರೂಪಾಯಿಗಳಷ್ಟು ಕಡಿಮೆಯಾಗಿ 71334 ರೂಪಾಯಿಗಳಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 38 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂಗೆ 65605 ರೂ. ಆಗಿದೆ. 18 ಕ್ಯಾರೆಟ್ ಚಿನ್ನದ ದರ ಕೂಡ 24 ರೂಪಾಯಿಗಳಷ್ಟು ಕಡಿಮೆಯಾಗಿ 53716 ರೂಪಾಯಿಗಳಿಗೆ ತಲುಪಿದೆ. 14 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 24 ರೂಪಾಯಿ ಇಳಿಕೆಯಾಗಿ, ಈಗ 41988 ರೂ. ಮುಟ್ಟಿದೆ.

    ಶೇಕಡಾ 3 ರಷ್ಟು ಜಿಎಸ್‌ಟಿಯನ್ನು ಚಿನ್ನ ಮತ್ತು ಬೆಳ್ಳಿಯ ಮೇಲೆ ವಿಧಿಸಲಾಗುತ್ತದೆ. ಅಂದರೆ, ಈಗಿನ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ಮೇಲೆ 2153 ರೂ ಜಿಎಸ್‌ಟಿ ವಿಧಿಸಲಾಗುತ್ತದೆ. ಜಿಎಸ್​ಟಿ ಸೇರಿದಂತೆ ಚಿನ್ನದ ದರ 10 ಗ್ರಾಂಗೆ 73928 ರೂ. ಆಗುತ್ತದೆ. ಆಭರಣ ತಯಾರಿಕೆ ಶುಲ್ಕ ಮತ್ತು ಲಾಭವನ್ನು ಸೇರಿಸಿದರೆ ಬೆಲೆ 81000 ರೂಪಾಯಿಗಳನ್ನು ಮೀರುತ್ತದೆ.

     

    ಸಿಂಹದ ಬೀಡಿನಲ್ಲಿ 100% ಮತದಾನ: ಒಬ್ಬ ಮತದಾರನಿಗೆ ಒಂದು ಮತಗಟ್ಟೆ, ಕಾಡಿನಲ್ಲಿ 10 ಸಿಬ್ಬಂದಿಯ ಹರಸಾಹಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts