More

    ವಿದೇಶಿ ಹೂಡಿಕೆ ಹೆಚ್ಚಳ, ಐಟಿ ಷೇರು ಖರೀದಿ ಜೋರು: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು

    ಮುಂಬೈ: ಐಟಿ ದೈತ್ಯ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳ ಖರೀದಿ, ವಿದೇಶಿ ನಿಧಿಯ ಒಳಹರಿವು ಮತ್ತು ಸಕಾರಾತ್ಮಕ ಜಾಗತಿಕ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಷೇರು ಸೂಚ್ಯಂಕಗಳು ಚೇತರಿಸಿಕೊಂಡವು.

    ದೃಢವಾದ ಆರಂಭದ ನಂತರ, 30-ಷೇರು ಬಿಎಸ್‌ಇ ಸೂಚ್ಯಂಕವು 454.67 ಅಂಕಗಳು ಅಥವಾ 0.63 ಶೇಕಡಾ ಏರಿಕೆಯಾಗಿ 72,186.09 ಕ್ಕೆ ಸ್ಥಿರವಾಯಿತು. 30 ಷೇರುಗಳ ಪೈಕಿ 19 ಷೇರುಗಳು ಲಾಭ ಕಂಡರೆ, 11 ಷೇರುಗಳು ಕುಸಿತ ಅನುಭವಿಸಿದವು. ದಿನದ ವಹಿವಾಟಿನ ನಡುವೆ ಬಿಎಸ್​ಇ ಸೂಚ್ಯಂಕವು 529.98 ಅಂಕಗಳಷ್ಟು ಏರಿ 72,261.40 ಕ್ಕೆ ತಲುಪಿತ್ತು.
    ನಿಫ್ಟಿ ಸೂಚ್ಯಂಕವು 157.70 ಅಂಕಗಳು ಅಥವಾ ಶೇಕಡಾ 0.72 ರಷ್ಟು ಏರಿಕೆಯಾಗಿ 21,929.40 ಕ್ಕೆ ಮುಟ್ಟಿತು. BPCL, HDFC ಲೈಫ್ ಮತ್ತು HCL ಟೆಕ್‌ ಷೇರುಗಳು ಲಾಭ ಗಳಿಸಿದವು.

    ಚೀನೀ ಮಾರುಕಟ್ಟೆಗಳಲ್ಲಿನ ಚೇತರಿಕೆ ಕೂಡ ಸೂಚ್ಯಂಕ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಸೋಮವಾರದ ವ್ಯಾಪಕ ನಷ್ಟದ ನಂತರ ಚೀನಾದ ಮಾರುಕಟ್ಟೆಗಳು ಶೇಕಡಾ 4ರಷ್ಟು ಏರಿಕೆ ಕಂಡಿವೆ. ಏಕೆಂದರೆ ಸರ್ಕಾರಿ ಹೂಡಿಕೆ ನಿಧಿಯು ಷೇರು ಖರೀದಿಗಳನ್ನು ಹೆಚ್ಚಿಸುವುದಾಗಿ ಹೇಳಿದೆ. ಮಾರುಕಟ್ಟೆಗಳ ಕುರಿತು ಚರ್ಚಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ವರದಿಗಳು ಸೂಚಿಸಿವೆ.

    ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರ್‌ಬಿಐ ಹಣಕಾಸು ನೀತಿ ಸಮಿತಿಯು ಮಂಗಳವಾರ ತನ್ನ ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಿದ್ದು,. ಸಮಿತಿಯು ಗುರುವಾರ ನೀತಿ ನಿರ್ಧಾರವನ್ನು ಪ್ರಕಟಿಸಲಿದೆ.

    ಮಂಗಳವಾರದಂದು ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಮಾರುತಿ, ವಿಪ್ರೋ, ಲಾರ್ಸನ್ ಮತ್ತು ಟೂಬ್ರೋ, ಇನ್ಫೋಸಿಸ್, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಭಾರ್ತಿ ಏರ್‌ಟೆಲ್ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡಾ 54 ರಷ್ಟು ಜಿಗಿತವನ್ನು ದಾಖಲಿಸಿ 2,442.2 ಕೋಟಿ ರೂಪಾಯಿ ಲಾಭ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳು ಶೇಕಡಾ 2 ರಷ್ಟು ಏರಿವೆ.

    ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸದವು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಗೇಜ್ ಶೇಕಡಾ 1.23 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 1.06 ರಷ್ಟು ಏರಿತು. ತೈಲ ಮತ್ತು ಅನಿಲ ಶೇ.3.02, ಐಟಿ ಶೇ.2.94, ಟೆಕ್ ಶೇ.2.74, ದೂರಸಂಪರ್ಕ ಶೇ.2.17, ಶಕ್ತಿ (ಶೇ.2.07), ಆಟೋ (ಶೇ.1.65) ಮತ್ತು ಕ್ಯಾಪಿಟಲ್ ಗೂಡ್ಸ್ (1.61) ವಲಯದ ಷೇರುಗಳು ಏರಿಕೆಯಾಗಿವೆ. ಉಪಯುಕ್ತತೆಗಳು, ವಿದ್ಯುತ್ ಮತ್ತು ಬ್ಯಾಂಕೆಕ್ಸ್ ಷೇರುಗಳು ಹಿನ್ನಡೆ ಕಂಡಿವೆ. ಒಟ್ಟು 2,353 ಷೇರುಗಳು ಲಾಭ ಗಳಿಸಿದರೆ, 1,508 ಷೇರುಗಳು ಕುಸಿತ ಕಂಡಿವೆ. ಅಲ್ಲದೆ, 83 ಷೇರುಗಳು ಬದಲಾಗದೆ ಉಳಿದಿವೆ.

    ಏಷ್ಯಾದ ಮಾರುಕಟ್ಟೆಗಳ ಪೈಕಿ ಶಾಂಘೈ ಮತ್ತು ಹಾಂಗ್ ಕಾಂಗ್ ಉತ್ತಮ ಲಾಭ ಕಂಡರೆ, ಸಿಯೋಲ್ ಮತ್ತು ಟೋಕಿಯೊ ನಷ್ಟ ಅನುಭವಿಸಿದವು. ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಲಾಭದಲ್ಲಿ ಮುನ್ನಡೆದವು. ಸೋಮವಾರ ಅಮೆರಿಕದ ಮಾರುಕಟ್ಟೆಗಳು ಕುಸಿತ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 518.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಸೋಮವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 354.21 ಅಂಕಗಳಷ್ಟು ಕುಸಿದು 71,731.42 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 82.10 ಅಂಕಗಳ ಕುಸಿತ ಕಂಡು 21,771.70 ಕ್ಕೆ ತಲುಪಿತ್ತು.

    813ರಿಂದ 79 ರೂಪಾಯಿಗೆ ಕುಸಿತ ಕಂಡಿದ್ದ ಷೇರಿಗೆ ಮತ್ತೆ ಬೇಡಿಕೆ: ಇಂಜಿನಿಯರಿಂಗ್ ಕಂಪನಿ ಸ್ಟಾಕ್​ ಈಗ 79 ರೂಪಾಯಿಗೆ ಏರಿಕೆ

    ಮುಂದಿನ ದಿನಗಳಲ್ಲಿ ಏರಲಿದೆ ಫಾರ್ಮಾ ಷೇರು ಬೆಲೆ : ಕಂಪನಿ ಲಾಭಾಂಶ ಹೆಚ್ಚುತ್ತಿದ್ದಂತೆಯೇ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಪೇಟಿಎಂ ಬದಲು ಬೇರೆ ಪೇಮೆಂಟ್​ ಆ್ಯಪ್​ ಬಳಸಿ: ವ್ಯಾಪಾರಸ್ಥರಿಗೆ ಸಿಎಐಟಿ ಎಚ್ಚರಿಕೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts