More

    ಗೋಬಿ ಮಂಚೂರಿ ನಿಷೇಧ: ಕಾರಣ ತಿಳಿದರೆ ನೀವು ಶಾಕ್​ ಆಗ್ತೀರಾ… ಡಿಟರ್ಜಂಟ್​ ಬಳಸ್ತಾರೆ ಎಂದರೆ ತಿನ್ನುವುದನ್ನೇ ಬಿಡ್ತೀರಾ?

    ಪಣಜಿ: ಗೋಬಿ ಮಂಚೂರಿಯು ಭಾರತದಲ್ಲಿ ಜನಪ್ರಿಯ ಭಕ್ಷ್ಯವಾಗಿದೆ. ಮಕ್ಕಳಿಂದ ಮುದುಕರವರೆಗೂ ಇದನ್ನು ಇಷ್ಟಪಡುತ್ತಾರೆ. ಸ್ಟ್ರೀಟ್​ ಫುಡ್​ ಪೈಕಿ ಇಂದು ದೇಶದೆಲ್ಲೆಡೆ ಅತ್ಯಂತ ಜನಪ್ರಿಯ ಆಹಾರ ಎನ್ನಬಹುದಾಗಿದೆ. ಆದರೀಗ, ಗೋವಾದಲ್ಲಿ ಗೋಬಿ ಮಂಚೂರಿ/ ಕ್ಯಾಬೇಜ್​ ಮಂಚೂರಿಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ.

    ನೀವು ಚೈನೀಸ್ ಸ್ಟ್ರೀಟ್ ಫುಡ್ ಪ್ರಿಯರಾಗಿದ್ದರೆ, ಈ ನಿಷೇಧಕ್ಕೆ ಕಾರಣವನ್ನು ತಿಳಿದು ಖಂಡಿತ್​ ಶಾಕ್ ಆಗ್ತೀರಾ… ನೀವು ದೇಶದ ಯಾವ ಭಾಗದಲ್ಲಿ ವಾಸ ಮಾಡುತ್ತಿದ್ದರೂ ಪರವಾಗಿಲ್ಲ. ಆಹಾರ ಸುರಕ್ಷತಾ (ಫುಡ್​ ಸೇಫಟಿ) ಅಧಿಕಾರಿ ನೀಡಿರುವ ಮಾಹಿತಿ ಭಯಾನಕವಾಗಿದೆ. ಬೀದಿ ವ್ಯಾಪಾರಿಗಳು ತಮ್ಮ ಭಕ್ಷ್ಯಗಳಲ್ಲಿ ಬಳಸುವ ಪದಾರ್ಥಗಳು ನಿಮ್ಮನ್ನು ತೀವ್ರವಾಗಿ ಅಸ್ವಸ್ಥಗೊಳಿಸುತ್ತವೆ. ಇದರಲ್ಲಿ ರಾಸಾಯನಿಕ ಬಣ್ಣಗಳಷ್ಟೇ ಅಲ್ಲದೆ, ಡಿಟರ್ಜೆಂಟ್​ಗಳನ್ನೂ ಬೆರೆಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.

    ರಸ್ತೆ ಬದಿ ವ್ಯಾಪಾರಿಗಳಿಂದ ನೀವು ಚಿಲ್ಲಿ ಪನೀರ್, ಮಂಚೂರಿಯನ್, ಚಿಲ್ಲಿ ಗೋಬಿ ಅಥವಾ ಚಿಲ್ಲಿ ಮಶ್ರೂಮ್ ರೀತಿಯ ಭಕ್ಷ್ಯಗಳನ್ನು ಸೇವಿಸುತ್ತದರೆ ನೀವು ಸಾಕಷ್ಟು ಜಾಗರೂಕರಾಗಿರಬೇಕು. ಗೋವಾದಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಲಾಗಿದೆ. ಈ ಫುಡ್​ ಸ್ಟ್ರೀಟ್​ನಲ್ಲಿ ಬಳಸಲಾಗುವ ಸಾಸ್ ನೋಡಲು ಚೆನ್ನಾಗಿರುತ್ತದೆ. ಆದರೆ ನಿಜವಾಗಿಯೂ ಅವರು ಬಳಸುವ ಸಾಸ್ ತುಂಬಾ ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂದು ಗೋವಾದ ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ನ್‌ಫ್ಲೋರ್‌ನಲ್ಲಿ ಲೇಪಿಸಿ ಹುರಿದ ನಂತರ ಹೂಕೋಸು ಗರಿಗರಿಯಾಗಿ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ಡಿಟರ್ಜೆಂಟ್ ಪೌಡರ್ ಸೇರಿಸಲಾಗುತ್ತದೆ. ಗೋವಾ ಮಾತ್ರವಲ್ಲ, ಎಲ್ಲೆಡೆ ಈ ರೀತಿಯ ಕಲಬೆರಕೆ ಕಂಡುಬರುತ್ತದೆ. ಆದ್ದರಿಂದ ಮುಂದಿನ ಬಾರಿ ನೀವು ಹೊರಗೆ ತಿನ್ನುವಾಗ ಈ ವಿಷಯವನ್ನು ನೀವು ಖಂಡಿತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು.

    ಸಾಸ್ ಸಂರಕ್ಷಕಗಳನ್ನು ಹೊಂದಿರುತ್ತದೆ. ನೀವು ಆರೋಗ್ಯ ಪ್ರಜ್ಞೆ ಹೊಂದಿದ್ದರೆ ಯಾವುದೇ ರೀತಿಯ ಸಾಸ್ ನಿಮಗೆ ಹಾನಿ ಮಾಡುತ್ತದೆ. ವಿಶೇಷವಾಗಿ ನೀವು ಬೀದಿ ಆಹಾರವನ್ನು ತಿನ್ನುತ್ತಿದ್ದರೆ, ಒಮ್ಮೆ
    ಸಾಸ್​ ಗುಣಮಟ್ಟವನ್ನು ಪರೀಕ್ಷಿಸಲು ಮರೆಯದಿರಿ. ಇದಲ್ಲದೆ, ಬೀದಿಬದಿ ವ್ಯಾಪಾರಿಗಳು ನೈರ್ಮಲ್ಯವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ತರಕಾರಿಗಳನ್ನು ತೊಳೆಯುವುದಿಲ್ಲ. ಇವುಗಳಲ್ಲಿ ಕಂಡುಬರುವ ಕೀಟಗಳು ಮತ್ತು ಕೀಟನಾಶಕಗಳು ಸಹ ದೇಹವನ್ನು ತಲುಪುತ್ತವೆ. ಭಕ್ಷ್ಯಗಳನ್ನು ಕರಿದ ಎಣ್ಣೆ ಕೂಡ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಇದನ್ನು ಪದೇ ಪದೇ ಬಿಸಿ ಮಾಡಿ ಬಳಸಲಾಗುತ್ತದೆ. ಇದು ದೇಹಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತದೆ ಎಂದು ಗೋವಾ ಅಧಿಕಾರಿಗಳು ನೀಡಿರುವ ವರದಿ ಹೇಳಿದೆ.

    ವಿದೇಶಿ ಹೂಡಿಕೆ ಹೆಚ್ಚಳ, ಐಟಿ ಷೇರು ಖರೀದಿ ಜೋರು: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು

    813ರಿಂದ 79 ರೂಪಾಯಿಗೆ ಕುಸಿತ ಕಂಡಿದ್ದ ಷೇರಿಗೆ ಮತ್ತೆ ಬೇಡಿಕೆ: ಇಂಜಿನಿಯರಿಂಗ್ ಕಂಪನಿ ಸ್ಟಾಕ್​ ಈಗ 79 ರೂಪಾಯಿಗೆ ಏರಿಕೆ

    ಮುಂದಿನ ದಿನಗಳಲ್ಲಿ ಏರಲಿದೆ ಫಾರ್ಮಾ ಷೇರು ಬೆಲೆ : ಕಂಪನಿ ಲಾಭಾಂಶ ಹೆಚ್ಚುತ್ತಿದ್ದಂತೆಯೇ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts