More

    ಯಾಕೆ ಭಾರತೀಯ ಮಹಿಳೆಯರು ಪುರುಷರಿಗಿಂತ ದಪ್ಪಗಿದ್ದಾರೆ? ವಿದೇಶಿಗರಿಗೆ ಹೋಲಿಸಿದ್ರೆ ಭಾರತೀಯ ಮಹಿಳೆಯರೇ ದಪ್ಪಗಿದ್ದಾರಾ..?!

    ದಪ್ಪಗಿರುವವರನ್ನೇ ಕೇಂದ್ರವಾಗಿಟ್ಟುಕೊಂಡು ಈಗಾಗಲೇ ಸಾಕಷ್ಟು ಸಿನಿಮಾಗಳನ್ನ ತೆಗೆಯಲಾಗಿದೆ. ದೇಶದಲ್ಲಿ ಇತ್ತೀಚೆಗೆ ದಪ್ಪಗಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದ್ರಲ್ಲೂ ಸುಮಾರು 15 ವರ್ಷಗಳಿಂದ ಒಬೆಸಿಟಿ ಎಲ್ಲರಲ್ಲೂ ಹೆಚ್ಚಾಗಿದೆ. ಭಾರತದಲ್ಲಿ ನಡೆಯುವ ಒಂದು ಸರ್ಕಾರಿ ಅನ್ವೇಷಣೆಯ ಪ್ರಕಾರ ದೇಶದಲ್ಲಿ ಹೆಚ್ಚು ಜನರು ಒಬೇಸಿಟಿಯಿಂದ ಬಳಲುತ್ತಿದ್ದಾರೆ. ಸಂಶೋಧನೆಗಳು ಹೇಳುವ ಪ್ರಕಾರ ಭಾರತದಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಒಬೆಸಿಟಿಯಿಂದ (ಹೆಚ್ಚು ತೂಕ) ಬಳಲುತ್ತಾರೆ.

    ಇತ್ತೀಚೆಗೆ ನಡೆಸಲಾದ ನ್ಯಾಷಲ್​​​ ಹೆಲ್ತ್ ಸರ್ವೆಯ(NFHS) ಪ್ರಕಾರ, ಪುರುಷರು ಶೇ. 4 ರಷ್ಟು ಮತ್ತು ಮಹಿಳೆಯರು ಶೇ.4.1 ರಷ್ಟು ಒಬೆಸಿಟಿಯನ್ನ ಹೊಂದಿದ್ದಾರೆ. ಭಾರತದಲ್ಲಿ ಪಂಜಾಬ್​ನಲ್ಲಿ ಹೆಚ್ಚು ಒಬೆಸಿಟಿ ಪ್ರಕರಣಗಳು ಕಂಡು ಬರುತ್ವೆ. ಮತ್ತೊಂದು ಸರ್ವೇಯ ಪ್ರಕಾರ, ಜಮ್ಮು ಕಾಶ್ಮೀರ, ಪಂಜಾಬ್​ ಉತ್ತರಾಖಂಡ್​​, ಹರಿಯಾಣ, ಸಿಕ್ಕಿಂ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಒಬೆಸಿಟಿ ಪ್ರಕರಣಗಳು ಹೆಚ್ಚು. ಹಾಗಿದ್ರೆ ಈ ಒಬೆಸಿಟಿ ಮತ್ತು ಮಹಿಳಳೆಯರಲ್ಲೇ ಯಾಕೆ ಹೆಚ್ಚಾಗಿ ಕಂಡು ಬರುತ್ತೆ ಅನ್ನೋದನ್ನ ತಿಳಿಯೋಣ:

    ವೈಜ್ಞಾನಿಕವಾಗಿ ಒಬೆಸಿಟಯನ್ನ ಓಬೀಸ್​​ ಎಂದು ಕರೆಯುತ್ತಾರೆ. BMI 30ಕ್ಕಿಂತ ಹೆಚ್ಚಾಗಿದ್ರೆ ಓಬೀಸ್​ ಎಂದು ಕರೆಯಲಾಗುತ್ತೆ. 25-30 ಓವರ್​​ವ ವೇಟ್​​, 18.5-25 ರಷ್ಟಿದ್ರೆ ಹೆಲ್ದಿ, 19ಕ್ಕಿಂತ ಕಡಿಮೆ ಇದ್ದಲ್ಲಿ ಅಂಡರ್​​ ವೇಟ್​​ ಎನ್ನಲಾಗುತ್ತೆ.

    ವಿದೇಶಿ ಮಹಿಳೆಯರಿಗಿಂತಲೂ ಭಾರತೀಯ ಮಹಿಳೆಯರು ಹೆಚ್ಚು ದಪ್ಪ ಯಾಕೆ?

    ವಿದೇಶಿ ಜನರೊಂದಿಗೆ ಭಾರತೀಯ ಜನರನ್ನ ಹೋಲಿಸಿದಾಗ ಇಬ್ಬರಲ್ಲೂ ಒಂದೇ BMI ಇದ್ರೂ ಸಹ ಭಾರತೀಯರು ಚಯಾಪಚಯ ರೋಗಗಳನ್ನ ಹೊಂದಿದ್ದಾರೆ. ಇದರಿಂದಾಗಿ ಭಾರತೀಯರಲ್ಲಿ ಹೆಚ್ಚು ಬ್ಲಡ್​​ ಪ್ರೆಶರ್​, ಕೊಲೆಸ್ಟ್ರಾಲ್​ ಕಂಡು ಬರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಕಿಬ್ಬೊಟ್ಟೆ ಸುತ್ತಲಿನ ಬೊಜ್ಜು ಕಂಡು ಬರುತ್ತೆ. ಅದಕ್ಕೆ ಕಾರಣ ಹೈಪೋಥೈರಾಡಿಸಮ್​, ಈ ಕಾಯಿಲೆ ಇದ್ದಲ್ಲಿ ದೇಹದ ಕ್ಯಾಲರಿ ಬರ್ನ್​ ಸುಲಭವಾಗಿ ಆಗೋದಿಲ್ಲ. ಭಾರತದಲ್ಲಿ ಶೇ11 ರಷ್ಟು ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯುನೈಟೆಡ್​​ ಕಿಂಗ್​ಡಮ್​​ನಲ್ಲಿ ಶೇ. 2 ರಷ್ಟು ಮತ್ತು ಯುಎಸ್​​ಎ ನಲ್ಲಿ ಶೇ. 4 ರಷ್ಟುಬ ಜನ ಈ ಕಾಯಿಲೆಯಿಂದ ಬಳಲುತ್ತಾರೆ. ಇದರಲ್ಲಿ ಭಾರತೀಯ ಮಹಿಳೆಯರೇ ಮುಂಚೂಣಿಯಲ್ಲಿದ್ದು, ಭಾರತೀಯ ಮಹಿಳೆಯರೇ ವಿದೇಶಿ ಮಹಿಳೆಯರಿಗಿಂದ ದಪ್ಪವಾಗಿದ್ದಾರೆ.

    ಇನ್ನು ಭಾರತದಲ್ಲಿ ಪಿಸಿಒಎಸ್​​ನ ಮರಳುವಿಕೆ 2 ಪಟ್ಟು ಹೆಚ್ಚಾಗಿದೆ. ಇದರಿಂದ ಜೆನೆಟಿಕಲಿ ಭಾರತೀಯರು ಸೊಂಟದ ಸುತ್ತ ಕೊಬ್ಬನ್ನ ಪಡೆಯೋದು ಸುಲಭವಾಗಿದೆ. ಶೇ. 73 ರಷ್ಟು ಮಹಿಳೆಯರು ಪ್ರೋಟಿನ್​ ಕೊರತೆಯನ್ನ ಹೊಂದಿದ್ದಾರೆ. ಕೇವಲ ಕಾರ್ಬೋಹೈಡ್ರೇಟ್​​ ಸೇವಿಸಿ ದಪ್ಪವಾಗುತ್ತಿದ್ದಾರೆ ವಿನಹ ಪ್ರೋಟಿನ್​ ಸಢೇವಿಸುತ್ತಿಲ್ಲ. ಇದರಿಂದ ಹಾರ್ಮೋನ್​ ಬದಲಾವಣೆಯೂ ಅಗುತ್ತೆ. ದೇಶದಲ್ಲಿ ಕೇವಲ ಶೇ.3 ರಷ್ಟು ಮಹಿಳೆಯರು ಮಾತ್ರ ವ್ಯಾಯಾಮ ಮಾಡುತ್ತಾರೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸ್ಥೂಲಕಾಯತೆಯೂ ಹೆಚ್ಚಾಗಿದೆ.

    ಜತೆಗೆ ಪುರಷರಿಗೆ ಸುಂದರವಾಗಿ ಕಾಣಿಸಬೇಕೆಂದರೆ ಸಣ್ನಗಿರಬೇಕು ಅನ್ನೋ ವಿಚಾರವೂ ಭಾರತೀಯ ಮಹಿಳೆಯರ ಮೇಲೆ ಒತ್ತಡ ಬೀರುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ಮೇಲಿನ ಎಲ್ಲಾ ಕಾರಣದಿಂದಾಗ ಭಾರತೀಯ ಮಹಿಳೆಯರು ಹೆಚ್ಚು ತೂಕವನ್ನ ಹೊಂದಿದ್ದಾರೆ ಎನ್ನಲಾಗುತ್ತೆ. ಉತ್ತಮ ಆಹಾರ, ದಿನಕ್ಕೆ 2 ಗಂಟೆ ವ್ಯಾಯಾಮ ಮತ್ತು ಜೀವನ ಶೈಲಿಯ ಬದಲಾವಣೆಯಿಂದ ಈ ಎಲ್ಲಾ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬಹುದೆಂದು ಹೇಳಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts