More

    ಸರ್ವರೋಗಕ್ಕೂ ಮದ್ದು ಹಾವಿನ ರಕ್ತ; ಈ ಜನ ಗಟಗಟನೆ ರಕ್ತ ಕುಡಿಯುತ್ತಾರೆ….!

    ಚೀನಾ: ಹಾವು ಎಂದಾಕ್ಷಣ ಎದ್ದು ಬಿದ್ದು ಓಡುವವರೆ ಹೆಚ್ಚು. ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವೂ ಕೂಡಾ ಒಂದಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಜನರು ಹಾವುಗಳ ಜತೆ ವಾಸಮಾಡುತ್ತಾರೆ, ಅವುಗಳ ರಕ್ತವನ್ನು ಕುಡಿಯುತ್ತಾರೆ. ಎಲ್ಲಿ? ಯಾಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ…

    ಹಾವುಗಳು ತುಂಬಾ ವಿಷಕಾರಿ.. ಅವುಗಳಿಗೆ ತೊಂದರೆಯಾದರೆ ಕಚ್ಚಿ ಮನುಷ್ಯನನ್ನು ಕೊಲ್ಲುತ್ತವೆ. ಆದರೆ ಇಂತಹ ಅಪಾಯಕಾರಿ ಹಾವಿನ ವಿಷ ಕುಡಿಯುತ್ತಾರೆ ಎನ್ನುವುದು ಚಿತ್ರವೆಂದೇ ಹೇಳಬೇಕು. ಆದರೆ ಇದು ನಂಬಲು ಸಾಧ್ಯವಿಲ್ಲದಿದ್ದರು ಇದು ನಿಜವಾದ ಸಂಗತಿಯಾಗಿದೆ.

    ಚೀನಿದಲ್ಲಿ ವಾಸಿಸುವ ಕೆಲವಷ್ಟು ಜನರು ಹಾವಿನ  ರಕ್ತವನ್ನು ಸೇವನೆ ಮಾಡುತ್ತಾರೆ. ಕೆಲವು ರೋಗಗಳಿಗೆ ಮದ್ದಾಗಿ ಹಾವಿನ ರಕ್ತ ಕೆಲಸ ಮಾಡುತ್ತದೆ.  ಹಾಗೂ  ರೋಗ ನಿರೋಧ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ಇಲ್ಲಿಯ ಜನರು ನಂಬುತ್ತಾರೆ. ಹೀಗಾಗಿ  ಚೀನಾ ಮಂದಿ ಹಾವಿನ ರಕ್ತವನ್ನು ಕುಡಿಯುತ್ತಾರೆ ಎನ್ನಲಾಗಿದೆ. ಚೀನಾ, ಇಂಡೋನೇಷ್ಯಾ, ಹಾಂಗ್ ಕಾಂಗ್ ಮತ್ತು ವಿಯೆಟ್ನಾಂನಲ್ಲಿ ವಾಸಿಸುವ ಜನರು ಈ ವಿಧಾನವನ್ನು ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ ಎನ್ನುವ ವರದಿಯನ್ನು ಖಾಸಗಿವಾಹಿನಿ ಮಾಡಿದೆ.

    ಹಾವಿನ ರಕ್ತವು ಅನೇಕ ಗುಣಗಳನ್ನು ಹೊಂದಿದೆ ಎಂದು ಚೀನಿಯರು ನಂಬುತ್ತಾರೆ. ಕೆಲವು ಪ್ರಭೇದಗಳು ಹೆಚ್ಚಿನ ಶಕ್ತಿಗಾಗಿ ಅದರ ವಿಷವನ್ನು ಕುಡಿಯುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಹಾವಿನ ರಕ್ತವು ಮಾನವನ ಚರ್ಮಕ್ಕೆ ಒಳ್ಳೆಯದು ಎಂದು ಅನೇಕ ಜನರು ನಂಬುತ್ತಾರೆ. ಹಾವಿನ ವಿಷವು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಚೀನಿಯರು ನಂಬುತ್ತಾರೆ. ಅದಕ್ಕಾಗಿಯೇ ಕೆಲವರು ಹಾವಿನ ರಕ್ತವನ್ನು ಕುಡಿಯುತ್ತಾರೆ ಎನ್ನಲಾಗಿದೆ.

    ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ?  ವಿಯೆಟ್ನಾಮೀಸ್ ಸಂಸ್ಕೃತಿಯಲ್ಲಿ ಸ್ನೇಕ್ ವೈನ್ ಆರೋಗ್ಯ ಮತ್ತು ಪುರುಷತ್ವವನ್ನು ಸುಧಾರಿಸುತ್ತದೆ ಎಂದು ಕೆಲವು ವ್ಯಕ್ತಿಗಳು ನಂಬುತ್ತಾರೆ . ಇದೇ ರೀತಿಯ ಪಾನೀಯವನ್ನು ಸ್ನೇಕ್ ವೈನ್ ಸಾಂಪ್ರದಾಯಿಕವಾಗಿ ಶಾಟ್ ಗ್ಲಾಸ್‌ಗಳಲ್ಲಿ ಕುಡಿಯಲಾಗುತ್ತದೆ ಎನ್ನಲಾಗಿದೆ.

    ಹಾವಿನ ಮಾಂಸವನ್ನು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಬಳಸಲಾಗುತ್ತದೆ, ಆದರೆ ಪಿತ್ತ, ಮೂಳೆಗಳು ಮತ್ತು ಹಾವಿನ ಚರ್ಮವನ್ನು ಮೈಗ್ರೇನ್ ಮತ್ತು ಕೀಲು ನೋವಿನಂತಹ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಚೀನಾದಲ್ಲಿ ‘ದೈವಿಕ ಔಷಧ’ ಎಂದು ಕರೆಯಲ್ಪಡುವ ಹಾವಿನ ವಿಷವು ಕುಷ್ಠರೋಗ, ಕಡಿಮೆ ದೃಷ್ಟಿ, ಕೂದಲು ಉದುರುವಿಕೆ ಚಿಕಿತ್ಸೆಗೆ ಸಂಬಂಧಿಸಿದೆ ಮತ್ತು ಕಾಮೋತ್ತೇಜಕ ಎಂದು ಹೇಳಲಾಗುತ್ತದೆ.

    ವಿಯೆಟ್ನಾಂನ ರಾಜಧಾನಿ ಹನೋಯ್‌  ಹಾವಿನ ಹಳ್ಳಿಗೆ ಹೆಸರುವಾಸಿಯಾಗಿದೆ, ಅಲ್ಲಿ ನೀವು ಹಾವುಗಳಿಂದ ತಯಾರಿಸಿದ ವಿಲಕ್ಷಣ ಭಕ್ಷ್ಯಗಳನ್ನು ನೀಡುವ ರೆಸ್ಟೋರೆಂಟ್‌ಗಳಿಂದ ಕೂಡಿದ ಬೀದಿಗಳನ್ನು ಕಾಣಬಹುದು.  ಹಾವಿನ ರಕ್ತ ಮಾತ್ರವಲ್ಲ ವಿಷಕ್ಕೂ ತನ್ನದೆ ಆಗಿರುವ ಬೇಡಿಕೆ ಇದೆ. ಹಾವಿನಿಂದ ತಯಾರಿಸಿದ ಬೇರೆ ಬೇರೆ ಖಾದ್ಯಗಳಿಗೂ ಇಲ್ಲಿ ಬೇಡಿಕೆ ಹೆಚ್ಚಾಗಿದೆ.

    ಹಾವು ಮನುಷ್ಯನಿಗೆ ಕಚ್ಚಿದರೆ ವಿಷ, ಮನುಷ್ಯ ಸಾಯುತ್ತಾನೆ. ಆದರೆ ಇವರು ಹಾವಿನ ಕೆಲವು ಪ್ರಭೆಧಗಳನ್ನು ಬಳಕೆ ಮಾಡಿ ಖಾದ್ಯ ಮತ್ತು, ಪಾನೀಯವಾಗಿ ಸೇವನೆ ಮಾಡುವುದರ ಜತೆ ನೇರೆವಾಗಿ ಹಾವಿನ ರಕ್ತವನ್ನೆ ಕುಡಿದು ಅನೇಕ ಕಾಯಿಲೆಗೆ ಮದ್ದಾಗಿ ಹೇಗೆ ಪರಿವರ್ತಿಸಿ ಕೊಂಡಿದ್ದಾರೆ? ಇದು ಹೇಗೆ ಸಾಧ್ಯ? ಇವರು ಮೊದಲಿನಿಂದಲೂ ರೂಢಿ ಆಗಿರುವುದರಿಂದ ಏನು ಅಪಘಾತ ಸಂಭಿಸಲ್ವಾ ಎನ್ನುವ ಪ್ರಶ್ನೆ ನಿಗೂಢವಾಗಿದೆ.

    ( ಈ ಸುದ್ದಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಈ ರೀತಿಯ ಪ್ರಯತ್ನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಱರು ಹೇಳುತ್ತಾರೆ?

    VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts