

ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಮೂಲಕ ಪೊಲೀಸರು ದೊಡ್ಡ ಭಯೋತ್ಪಾದಕ ಸಂಚನ್ನು ತಪ್ಪಿಸಿದ್ದು, ಸೈಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂಬುವವರನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೇಡ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
ಶಂಕಿತ ಉಗ್ರರ ಬಂಧನ ಪ್ರಕರಣದ ಬಗ್ಗೆಇದೀಗ ಗೃಹ ಸಚಿವ ಡಾ| ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ರಾಜ್ಯದ ಗುಪ್ತಚರ ಇಲಾಖೆಯಿಂದ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.
ಸ್ವಲ್ಪ ಯಾಮಾರಿದ್ದರೂ ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯ ಸಂದರ್ಭದಲ್ಲೇ ಏನಾದರು ಅನಾಹುತ ನಡೆದು ಹೋಗುತ್ತಿತ್ತು ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪೊಲೀಸರು ಸರಿಯಾದ ಮಾಹಿತಿ ಆಧರಿಸಿ ಸರಿಯಾದ ಸಮಯಕ್ಕೆ ಉಗ್ರರನ್ನ ಸೆರೆ ಹಿಡಿದಿದ್ದಾರೆ.
ಇಲ್ಲದಿದ್ದರೆ ಎರಡು ದಿನದಲ್ಲಿ ದೊಡ್ಡ ಮಟ್ಟದ ಸ್ಪೋಟಕ್ಕೆ ಸಿದ್ದತೆ ಮಾಡಿಕೊಂಡಿದ್ದರು ಎಂಬ ಮಾಹಿತಿಯನ್ನ ಸಿಎಂಗೆ ನೀಡಿದ ಡಾ.ಜಿ.ಪರಮೇಶ್ವರ್ ನೀಡಿದ್ದಾರೆ.
2008ರ ಜುಲೈ 25ರಂದು ಬೆಂಗಳೂರಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ನಡೆಸಲಾಗಿದ್ದು ಆ ಸಂದರ್ಭ ಭಯಾನಕವಾಗಿತ್ತು. ನಗರದ 9 ಕಡೆಗಳಲ್ಲಿ ಬಾಂಬ್ ಬ್ಲ್ಯಾಸ್ಟ್ ಎಲ್ಇಟಿಯ ನಸೀರ್ ನಡೆಸಿದ್ದ.
ಸ್ಫೋಟದಲ್ಲಿ ಮೂರು ಮಂದಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿದ್ದರು. ಈ ಉಗ್ರರು, ಮಡಿವಾಳದಿಂದ ನಾಯಂಡಹಳ್ಳಿಯವರಗೆ ಅಲ್ಲಲ್ಲಿ ಸ್ಫೋಟ ನಡೆಸಿದ್ದರು. ಆಗ ಬಾಂಬ್ ತಯಾರಿಕೆಗೆ ಜಿಲೆಟಿನ್ ಕಡ್ಡಿಗಳನ್ನು ಇಡೀ ಬೆಂಗಳೂರನ್ನೇ ನಡುಗಿಸಿ ಬಿಟ್ಟಿದ್ದರು ಈ ಪಾಪಿ ಉಗ್ರರು! ಟಿ ನಾಜಿರ್ ಮತ್ತು ಅಬ್ದುಲ್ ಸತ್ತಾರ್ ಜೊತೆ ಸೇರಿ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಈಗ ಸಿಕ್ಕಿ ಬಿದ್ದಿರುವ ಇಬ್ಬರೂ ಕೂಡ ಜೈಲಿನಲ್ಲಿರೋ ಅಬ್ದುಲ್ ನಸೀರ್ ಮದನಿ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.