More

    ಬಿಲದಲ್ಲಿ ಇದ್ದ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿರಬಹುದು: ಆರಗ ಜ್ಞಾನೇಂದ್ರ

    ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

    ಈ ಮೂಲಕ ಪೊಲೀಸರು ದೊಡ್ಡ ಭಯೋತ್ಪಾದಕ ಸಂಚನ್ನು ತಪ್ಪಿಸಿದ್ದು, ಸೈಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂಬುವವರನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್​​ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

    Five Terrorist
    ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರಿಂದ ಸಂಚು: ಪೊಲೀಸ್​ ಆಯುಕ್ತರಿಂದ ಸ್ಫೋಟಕ ಮಾಹಿತಿ ಬಹಿರಂಗ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ಹೇಳಿಕೆ ನಿಡಿದ್ದು, “ನಾನು ಸಿಸಿಬಿ ಪೋಲಿಸರನ್ನ ಅಭಿನಂಧಿಸ್ತೇನೆ. ಒಳ್ಳೆ ಕೆಲಸ ಮಾಡಿದ್ದಾರೆ, ಮುಂದೆಯೂ ಒಳ್ಳೆ ಕೆಲಸ ಮಾಡಬೇಕು. ಸಿಕ್ಕಿರುವ ಶಂಕಿತ ಉಗ್ರರನ್ನ ನೋಡಿದಾಗ, ಅವರ ಬಳಿ ಸಿಕ್ಕಿರುವ ವೆಪನ್ ನೋಡಿದಾಗ. ಬಹಳ ದೊಡ್ಡ ಶಾಂತಿ ಸುವ್ಯವಸ್ಥಿತಯನ್ನು ಹಾಳು ಮಾಡುವ ಕೆಲಸ ಮಾಡಲು ಸಜ್ಜಾಗಿದ್ರು ಅಂತ ಕಾಣಿಸುತ್ತದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ

    ನಾವು ಅಪಾಯಕಾರಿ ಸನ್ನಿವೇಶದಲ್ಲಿ ಇದ್ದೇವೆ. ಕಳೆದ 2 ತಿಂಗಳಲ್ಲಿ ಬಿಲದಲ್ಲಿ ಇದ್ದ ಇಂತ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿದೆ ಅಂತ ಕಾಣುತ್ತೆ. ಇಡೀ ರಾಜ್ಯದಲ್ಲಿ ಬಿಲದಲ್ಲಿ ಇದ್ದವರು ಹೊರಗೆ ಬರ್ತಿದ್ದಾರೆ. ಇದನ್ನ ಬಿಗಿ ಮಾಡುವಂತಹ ಕಲಸ ಮಾಡಬೇಕಾಗಿದೆ.

    ಇದನ್ನೂ ಓದಿ: ಯಾವ ರಾಜ್ಯದಲ್ಲಿ ‌ಕಾಂಗ್ರೆಸ್ ಸರ್ಕಾರವಿದೆ ಅಲ್ಲಿ ಉಗ್ರರು ಹುಲ್ಲು ‌ಮೇಯುವ ರೀತಿ ಆಗಿದೆ: ಮಾಜಿ ಸಚಿವ ಆರ್​. ಅಶೋಕ್​​

    ನಮ್ಮ ಸರ್ಕಾರದಲ್ಲೂ ಇಂತ ಘಟನೆಗಳು ನಡೆದಿದ್ದವು. ನಾವು ಇವನ್ನು ಅಷ್ಟು ಸುಲಭವಾಗಿ ಬಿಡಲಿಲ್ಲ. ಮಂಗಳೂರು ಬಾಂಬ್ ಬ್ಲಾಸ್ಟ್ ನಲ್ಲಿ ಸಿಕ್ಕ ವ್ಯಕ್ತಿಯನ್ನು ಬಂಧಿಸಿ ಅವನಿಗೆ ಚಿಕಿತ್ಸೆ ಕೊಡಿಸಿ ಅವನಿಗೆ ಹೊರಗೆ ಎಷ್ಟು ಲಿಂಕ್‍ ಇತ್ತು ಅನ್ನೋದು NIAಗೆ ಗೊತ್ತಾಗಿದೆ. ಹಾಗಾಗಿ ಇದನ್ನು FIR ಹಾಕಿ ಬಿಡೋದಲ್ಲ, ಮೂಲವನ್ನು ಕೆದಕಬೇಕು. 

    ಇದನ್ನೂ ಓದಿ: ತನ್ನನ್ನು ತಾನು ಹಿಂದು ಎಂದು ಗುರುತಿಸಿಕೊಂಡ ಉಗ್ರ ಸಂಘಟನೆಯ ಸದಸ್ಯನ ಬಂಧನ!

    ಸೆಂಟ್ರಲ್ ಏಜನ್ಸಿಗಳಿಗೆ ಈ ಪ್ರಕರಣವನ್ನು ತನಿಖೆಗೆ ಕೊಡಬೇಕು. ಅಮೂಲಾಗ್ರವಾಗಿ ತನಿಖೆ ನಡೆಯದಿದ್ರೆ ದೇಶದ ಏಕತೆ, ಸಮಗ್ರತೆಗೆ ಭಂಗ ಬರುತ್ತದೆ. ಜನರಿಗೆ ತಾವು ಸುರಕ್ಷಿತವಾಗಿದ್ದೇವೆ ಅನ್ನುವ ಸಂದೇಶ ಕೊಡುವ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts