More

    I.N.D.I.A ಆಗಿ ಬದಲಾದ UPA; ಕಾನೂನು ಪ್ರಕಾರ ಸರಿಯೇ? ಮಾಜಿ ಕಾನೂನು ಸಚಿವರು ಹೇಳಿದ್ದಿಷ್ಟು…

    ಬೆಂಗಳೂರು: ಇದೀಗ UPA ಹೆಸರನ್ನು INDIA ಆಗಿ ಬದಲಾಯಿಸಲಾಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಮಾಜಿ ಕಾನೂನು ಸಚಿವರಾಗಿದ್ದ ಬಿಜೆಪಿಯ ಸುರೇಶ್ ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದುಇದರಿಂದಾಗಿ ಸಮಸ್ಯೆ ಎದುರಾಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. 

    ಇದನ್ನೂ ಓದಿ: Uddhav Thackeray Slams BJP | INDIA ನಾವು ನಿಮ್ಮ ಜೊತೆ ಇದೀವಿ! BJP ವಿರುದ್ಧ ಉದ್ಧವ್​ ಠಾಕ್ರೆ ವಾಗ್ದಾಳಿ!

    ತಮ್ಮ ಪೋಸ್ಟ್‍ನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, “ಯು ಪಿ ಎ ಈಗ I N D I A ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಚಿಂತನೆ. ನಮ್ಮ ದೇಶದಲ್ಲಿ The Emblems & Names (Prevention of Improper Use) 1950 ಎಂಬ ಕಾಯಿದೆ ಇದೆ. ಈ ರೀತಿ I N D I A ಎಂದು ಕರೆದುಕೊಳ್ಳುವುದು ಈ ಕಾಯ್ದೆಯ ಸೆಕ್ಷನ್ 2(c) ಮತ್ತು ಶೆಡ್ಯೂಲ್ 1(4) & (7) ಗಳ ಉಲ್ಲಂಘನೆ ಎಂಬುದು ನನ್ನ ಅನಿಸಿಕೆ” ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ನಮ್ಮ ಮೈತ್ರಿಕೂಟಕ್ಕೆ ‘INDIA’ ಅಂತ ನಾಮಕರಣ ಮಾಡಿದ್ದೇವೆ: ಮಲ್ಲಿಕಾರ್ಜುನ ಖರ್ಗೆ

    ಮಾಜಿ ಕಾನೂನು ಸಚಿವರೇ ಹೇಳಿರುವುದರಿಂದ ಈ ಮಾತಿಗೆ ಹೆಚ್ಚಿನ ತೂಕ ಲಭಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಮಾಜಿ‌ ಸಚಿವರ ‌ಪೋಸ್ಟ್ ನಿಂದ ಹಲವು ಪ್ರಶ್ನೆಗಳು ಹುಟ್ಟಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts