More

    ನಮ್ಮ ಮೈತ್ರಿಕೂಟಕ್ಕೆ ‘INDIA’ ಅಂತ ನಾಮಕರಣ ಮಾಡಿದ್ದೇವೆ: ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಡೆಯುತ್ತಿರುವ ಈ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿದೆ. ಇದರಲ್ಲಿ ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಲಾಗಿದೆ.

    ಸುದ್ದಿಗೊಷ್ಠಿಯಲ್ಲಿ ಭಾಗಿಯಾದ ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎಲ್ಲ 26 ಪಕ್ಷದ ನಾಯಕರ ಸಭೆ ಮಾಡಿದ್ದೇವೆ. ಸೋನಿಯಾ ಗಾಂಧಿ ಹಾಗೂ 26 ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದು, ಬಹಳ ಮಹತ್ವದ ಸಭೆ ಮಾಡಿದ್ದೇವೆ. ಪ್ರಜಾಪ್ರಭುತ್ವ ಉಳಿವಿಗಾಗಿ ಸಭೆ ಮಾಡಿದ್ದೇವೆ. ಒಟ್ಟಾಗಿ ಸೇರಿ ಒಂದೇ ಧ್ವನಿ ಎತ್ತಲಿದ್ದೇವೆ ಎಂದಿದ್ದಾರೆ.

    ನಮ್ಮ ಮೈತ್ರಿಕೂಟಕ್ಕೆ ಒಂದು ಹೆಸರು ಇಟ್ಟಿದ್ದೇವೆ. ಹಿಂದೆ ಯುಪಿಎ ಅಂತ ಹೆಸರು ಇತ್ತು. ಈಗ india ಅಂತ ನಾಮಕರಣ ಮಾಡಿದ್ದೇವೆ. ಎಲ್ಲರೂ ಈ ಹೆಸರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.  ಇಂಡಿಯಾ ಅಂದರೆ ಇಂಡಿಯನ್ ನ್ಯಾಶನಲ್ ಡೆಮಾಕ್ರಟಿಕ್ ಇನ್‌ಕ್ಲೂಸೀವ್ ಅಲಯನ್ಸ್ .
    I: Indian
    N: National
    D: Democractic
    I: Inclusive
    A: Alliance

    ಮುಂದಿನ ಸಭೆಯನ್ನು ಮುಂಬೈನಲ್ಲಿ ನಡೆಸಲಾಗುತ್ತದೆ. ಬಿಜೆಪಿಯು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಸರ್ಕಾರದ ಸಂಸ್ಥೆಗಳಾದ ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷವನ್ನು ಹೆಣೆಯುತ್ತಿದೆ. ನಮಗೆ ದೇಶ ಮುಖ್ಯ. ರಾಜಕೀಯವಾಗಿ ನಮಗೆ ರಾಜ್ಯವಾರು ವಿಭಿನ್ನತೆ ಬೇರೆ ಇರಬಹುದು‌. ಆದರೆ ದೇಶದ ಉದ್ದೇಶಕ್ಕೆ ಎಲ್ಲರೂ ಒಗ್ಗಟ್ಟಾಗಿ ಹೋಗಲು ನಿರ್ಣಯಿಸಲಾಗಿದೆ. ಪಾಟ್ನಾ ಸಭೆಯಲ್ಲಿ 16 ಪಕ್ಷಗಳು ಇದ್ದವು, ಈ ಸಭೆಗೆ 26 ಪಕ್ಷಗಳು ಬಂದಿವೆ‌. ಮೋದಿ ಕರೆದ ಸಭೆಗೆ ಮೂವತ್ತು ಪಕ್ಷಗಳ ಸಭೆ ನಡೆಸಿದ್ದಾರೆ. ಆ ಪಕ್ಷಗಳು‌ ನೋಂದಣಿಯಾಗಿವೆಯೇ? ಅವುಗಳನ್ನು ಇಲ್ಲೆಲ್ಲೂ ನೋಡಿಲ್ಲ ಎಂದು  ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    26 ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024ರ ಚನಾವಣೆಯಲ್ಲಿ ಮೋದಿ ಸೋಲಿಸಲು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಮಂತ್ರ, ಸಿದ್ಧಾಂತ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಇದೇ ಸಭೆಯಲ್ಲಿ ವಿಪಕ್ಷಗಳ ಒಕ್ಕೂಟಕ್ಕೆ ಹೊಸ ನಾಮಕರಣ ಮಾಡಲು ಚರ್ಚೆ ನಡೆದಿದೆ.

    ಸುದ್ದಿಗೊಷ್ಠಿಯಲ್ಲಿ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿ, ಶರದ್ ಪವಾರ್, ಸೀತಾರಾಮ ಯಚೂರಿ,ಅರವಿಂದ್ ಕೆಜ್ರಿವಾಲ್, ಉದ್ದವ್ ಠಾಕ್ರೆ, ಸಿದ್ದರಾಮಯ್ಯ, ಭಗವಂತ್ ಮಾನ್, ವೇಣುಗೋಪಾಲ, ಡಿ ಕೆ ಶಿವಕುಮಾರ್ ಭಾಗಿಯಾಗಿದ್ದಾರೆ.

    ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ ‘INDIA’ ಎಂದು ಹೆಸರಿಡಲು ಅಂತಿಮ ಹಂತದ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts