More

    ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ ‘INDIA’ ಎಂದು ಹೆಸರಿಡಲು ಅಂತಿಮ ಹಂತದ ಚರ್ಚೆ

    – ಭಾರತದ ಮತದಾರರನ್ನು ಸೆಳೆಯುವ ಶಕ್ತಿ ಇದೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ರಾಜಕೀಯ ಪಕ್ಷಗಳು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಡೆಯುತ್ತಿರುವ ಈ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿದೆ. ಇದರಲ್ಲಿ ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ಹಲವರು ಅಭಿಪ್ರಾಯ ವ್ಯಕ್ತವಾಗಿದ್ದು, ಇದೀಗ ಈ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

    26 ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024ರ ಚನಾವಣೆಯಲ್ಲಿ ಮೋದಿ ಸೋಲಿಸಲು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಮಂತ್ರ, ಸಿದ್ಧಾಂತ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಇದೇ ಸಭೆಯಲ್ಲಿ ವಿಪಕ್ಷಗಳ ಒಕ್ಕೂಟಕ್ಕೆ ಹೊಸ ನಾಮಕರಣ ಮಾಡಲು ಚರ್ಚೆ ನಡೆದಿದೆ.

    ಇದನ್ನೂ ಓದಿ:  ಬೆಂಗಳೂರಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ; 48 ಗಂಟೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ..ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟದಾಗಿದೆ? ಎಂದ ಕಂಪನಿ ಸಿಇಒ

    ಮೈತ್ರಿಕೂಟಕ್ಕೆ ಹೊಸ ಹೆಸರು ಇಡಲು ಚಿಂತನೆ ನಡೆಸಿದ್ದು, ಮೈತ್ರಿ ನಾಮಕರಣ ಬಗ್ಗೆ ಚರ್ಚೆ 4 ಹೆಸರುಗಳು ಶಿಫಾರಸು ಮಾಡಲಾಗಿದೆ. 1. PDA- ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲಯನ್ಸ್, 2. NPA-ನ್ಯಾಷನಲ್ ಪ್ರೋಗ್ರೆಸ್ಸಿವ್ ಅಲಯನ್ಸ್, 3. IDA -ಇಂಡಿಯಾ ಡೆಮಾಕ್ರಟಿಕ್ ಅಲಯನ್ಸ್, 4. UPA-3 ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ – INDIA ಎಂದು ಇಡಲು ಸಲಹೆ ನೀಡಲಾಗಿದೆ. Indian National Democractic Inclusive Alliance ಎಂದು ನಾಮಕರಣ ಹೆಸರು ಫೈನಲ್‌ಗೆ ಎಲ್ಲರ ಅಭಿಮತ ವ್ಯಕ್ತ ಪಡಿಸಿದ್ದಾರೆ.

    ಇದನ್ನೂ ಓದಿ:  ನದಿಗೆ ಹಾರಿ ಪ್ರಾಣ ಬಿಟ್ಟ ಮಹಿಳೆ; ಯಜಮಾನಿಗಾಗಿ ಚಪ್ಪಲಿ ಬಳಿ ಕಾದು ಕುಳಿತಿ ಶ್ವಾನ

    ಹಲವು ನಾಯಕರು ವಿಪಕ್ಷ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ಚರ್ಚೆ ನಡೆಯುತ್ತಿದೆ. ವಿಪಕ್ಷಗಳ ಒಕ್ಕೂಟಕ್ಕೆ ಹಲವು ಪಕ್ಷದ ನಾಯಕರು ಇಂಡಿಯಾ ಎಂದು ಹೆಸರಿಡಲು ಸೂಚಿಸಿದ್ದಾರೆ. ಇಂಡಿಯಾ ಅಂದರೆ ಇಂಡಿಯನ್ ನ್ಯಾಶನಲ್ ಡೆಮಾಕ್ರಟಿಕ್ ಇನ್‌ಕ್ಲೂಸೀವ್ ಅಲಯನ್ಸ್ ಒಕ್ಕೂಟ.
    I: Indian
    N: National
    D: Democractic
    I: Inclusive
    A: Alliance

    ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲು ಬಹುತೇಕ ಸದಸ್ಯ ಪಕ್ಷಗಳು ಒಪ್ಪಿಗೆ ಸೂಚಿಸಿದೆ. ಹೆಸರಿನಲ್ಲೇ ಭಾರತದ ಮತದಾರರನ್ನು ಸೆಳೆಯುವ ಶಕ್ತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲೇ ನಾಮಕರಣದ ಘೋಷಣೆ ಹೊರಬೀಳಲಿದೆ.

    ಬೈಕ್​​ನಲ್ಲಿ ಹಿಂಬಾಲಿಸಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋ ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts