More

    ಟೊಮ್ಯಾಟೊ ಬೆಳೆ ಕಾಯುತ್ತಿದ್ದ ರೈತನ ಹತ್ಯೆ! ಒಂದೇ ವಾರದಲ್ಲಿ ಎರಡನೇ ಪ್ರಕರಣ

    ಆಂಧ್ರಪ್ರದೇಶ: ಇದೀಗ ದೇಶಾದ್ಯಂತ ಟೊಮ್ಯಾಟೊ ಬೆಲೆ ಏರಿಕೆ ಆಗಿದ್ದು ಇದರಿಂದಾಗಿ ಅನೇಕ ರೈತರು ಲಾಭ ಪಡೆದರೆ, ಇನ್ನೂ ಕೆಲವರು ಫಜೀತಿಗೂ ಒಳಗಾಗಿದ್ದಾರೆ. ಆದರೆ ಕೆಲವೆಡೆ ಕಳ್ಳತನ, ದರೋಡೆ, ಕೊಲೆಯಂತಹ ಘಟನೆಗೂ ಟೊಮ್ಯಾಟೊ ಬೆಳೆ ಸಾಕ್ಷಿಯಾಗಿದೆ.

    ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯನ್ನು ಕಾವಲು ಕಾಯುತ್ತಿದ್ದಾಗ ನಿದ್ರೆಗೆ ಜಾರಿದ್ದ ರೈತನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದು ಕಳೆದ ಏಳು ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ವರದಿಯಾದ ಎರಡನೇ ಪ್ರಕರಣವಾಗಿದೆ.

    ಇದನ್ನೂ ಓದಿ: ಗ್ರಾಹಕರಿಗೆ 1 ಕೆಜಿ ಟೊಮ್ಯಾಟೊ ಫ್ರೀ ಕೊಡುತ್ತಾರೆ ಈ ಟ್ಯಾಟೂ ಶಾಪ್ ಮಾಲೀಕ!; ಉಚಿತದ ಹಿಂದಿರುವ ಕಾರಣವೇನು ಗೊತ್ತಾ?

    ಮೂಲಗಳ ಪ್ರಕಾರ, ಭಾನುವಾರ ಮಧ್ಯರಾತ್ರಿ ಅನ್ನಮಯ ಜಿಲ್ಲೆಯ ಪೆದ್ದ ತಿಪ್ಪಾ ಸಮುದ್ರದ ಬಳಿ ಬೆಳೆಗಳನ್ನು ಕಾಯಲು ತನ್ನ ಜಮೀನಿನಲ್ಲಿ ಮಲಗಿದ್ದ ಮಧುಕರ್ ರೆಡ್ಡಿ ಎಂಬ ರೈತನನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಕೇಸಪ್ಪ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ ಪದವೀಧರ!

    ಡಿಎಸ್ಪಿ ಕೇಸಪ್ಪ ಮಾತನಾಡಿ, “ಮಾಹಿತಿ ಪಡೆದ ನಂತರ ನಾವು ಸ್ಥಳಕ್ಕೆ ತಲುಪಿದ್ದೇವೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಬೇಕಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಹೇಳಿದರು. ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ, ಜುಲೈ ಮೊದಲ ವಾರದಲ್ಲಿ ಟೊಮ್ಯಾಟೊ ಮಾರಾಟ ಮಾಡಿ 62 ಲಕ್ಷ ರೂ.ಗಳನ್ನು ಗಳಿಸಿದ್ದ 30 ವರ್ಷದ ವ್ಯಕ್ತಿಯನ್ನು ದರೋಡೆಕೋರರು ಹಣಕ್ಕಾಗಿ ಕೊಂದಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts