More

    ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ ಪದವೀಧರ!

    ಚಿಕ್ಕೋಡಿ: ಈಗೇನಿದ್ದರೂ ಟೊಮ್ಯಾಟೊದ್ದೇ ಕಾಲ. ಟೊಮ್ಯಾಟೊ ಬೆಳೆದವ ಅನೇಕರು ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ. ಇದೀಗ ಆ ಪಟ್ಟಿಗೆ ಪದವೀಧರ ಯುವಕನೊಬ್ಬ ಸೇರಿದ್ದಾನೆ. ಈತ ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ್ದಾನೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವರೈತ ಮಹೇಶ ಹಿರೇಮಠ ಈಗ ಟೊಮ್ಯಾಟೊದಿಂದಾಗಿ ಭರ್ಜರಿ ಲಾಭ ಗಳಿಸಿದ ಕೃಷಿಕ. ಬಿಎ ಪದವೀಧರ ಆಗಿರುವ ಈತ ಟೊಮ್ಯಾಟೊ ಬೆಳೆದು ಭರ್ಜರಿ ಲಾಭ ಗಳಿಸಿದ ಸಂಭ್ರಮದಲ್ಲಿದ್ದಾನೆ.

    ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ಎರಡು ಲಕ್ಷ ರೂ. ಖರ್ಚು ಮಾಡಿ 20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದ ಮಹೇಶ್, 45 ದಿನಗಳಲ್ಲಿ ಟೊಮ್ಯಾಟೊ ಇಳುವರಿ ಮಾಡಿ ಒಟ್ಟು 11 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಮಾರ್ಚ್​ನಲ್ಲಿ 20 ಗುಂಟೆಯಲ್ಲಿ 3700 ಟೊಮ್ಯಾಟೊ ಸಸಿ ನಾಟಿ ಮಾಡಿದ್ದ ಮಹೇಶ್, ವೈಜ್ಞಾನಿಕ ಕೃಷಿ, ಹನಿ ನೀರಾವರಿ ಮೂಲಕ ಅದನ್ನು ಆರೈಕೆ ಮಾಡಿದ್ದರು.

    ಫಸಲು ಬರುತ್ತಿದ್ದಂತೆ ಟೊಮ್ಯಾಟೊಗೆ ಒಂಥರಾ ಬಂಗಾರದ ಬೆಲೆ ಬಂದಿದ್ದು, ಕಳೆದ 45 ದಿನಗಳಲ್ಲಿ 20 ಟನ್​ಗೂ ಅಧಿಕ ಟೊಮ್ಯಾಟೊ ಇಳುವರಿ ತೆಗೆದು, ಅದನ್ನು ಸಂಕೇಶ್ವರ ಎಪಿಎಂಸಿಗೆ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಎಣಿಸಿದ್ದಾರೆ.

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts