More

    ಬಿಎಂಟಿಸಿಯ ಎಸಿ ಬಸ್‍ನಲ್ಲಿ ಸೊಳ್ಳೆ ಕಾಟ? ಪ್ರಯಾಣಿಕನ ಟ್ವೀಟ್‍ ವೈರಲ್!

    ಬೆಂಗಳೂರು: ಎಸಿ ಬಸ್‍ನಲ್ಲಿ ಹೊರಗಿನ ಗಾಳಿ ಒಳ ಬಂದರೂ ಅದು ನಿಯಂತ್ರಿತವಾಗಿರುತ್ತದೆ. ನೇರವಾಗಿ ಕಿಟಕಿ ತೆಗೆಯುವ ಆಯ್ಕೆ ಸಾಧಾರಣವಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಒಳಗೆ ಸೊಳ್ಳೆಗಳಿದ್ದರೆ ಹೇಗೆನಿಸಬಹುದು?

    ಇದನ್ನೂ ಓದಿ: ಸೊಳ್ಳೆ ಕಡಿತದಿಂದ ರಕ್ಷಣೆ ಹೊಂದಿ ಅರಿವು ಕಾರ್ಯಾಗಾರದಲ್ಲಿ ಡಾ. ಕೆ. ಶಶಿಧರ್ ಸಲಹೆ

    ಅಂತಹದೇ ಪ್ರಕರಣ ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ @SocialCop ಎನ್ನುವ ಟ್ವಿಟರ್‍ ಖಾತೆಯಿಂದ ಟಿಕೆಟ್‍ನ ಫೋಟೊ ಸಮೇತ “ಸೊಳ್ಳೆಗಳಿಂದ ಮುಕ್ತಿ ಕೊಡಿಸಿ” ಎಂದು BMTCಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.

    ಈ ಫೋಟೊದಲ್ಲಿ ತನ್ನ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್​ ಫೋಟೋವನ್ನೂ ಪ್ರಯಾಣಿಕ ಟ್ವೀಟರ್​ನಲ್ಲಿ ಜುಲೈ 7ರಂದು ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲು ಡಿಎಚ್‌ಒ ಸುರೇಂದ್ರಬಾಬು ಸಲಹೆ

    ಇದೇ ಸಂದರ್ಭ ಟ್ವೀಟ್‍ನಲ್ಲಿ, ಕಾಂಗ್ರೆಸ್​ ಸರ್ಕಾರ ಬಿಎಂಟಿಸಿ ಎಸಿ ಬಸ್​ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ? ಎಂದು ಪ್ರಶ್ನಿಸಲಾಗಿದೆ.

    ಬಿಲದಲ್ಲಿ ಇದ್ದ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿರಬಹುದು: ಆರಗ ಜ್ಞಾನೇಂದ್ರ

    ಪಾಕಿಸ್ತಾನದ ವೈರಲ್ ಚಾಯ್‍ವಾಲಾ ಈಗ ಲಂಡನ್‍ನಲ್ಲಿ ಮಾಡೋ ಕೆಲಸ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts