VIDEO| 'ಚುನಾವಣಾ ಪೂರ್ವದಲ್ಲೇ ಸರ್ಕಾರ ಪತನ'; ಶ್ರೀರಾಮುಲು ಹೇಳಿಕೆಗೆ ಎಚ್.ಕೆ ಪಾಟೀಲ್ ಕೊಟ್ಟ ತಿರುಗೇಟು ಹೀಗಿದೆ

Untitled design - 2023-11-20T195825.646
Published on

ಬಾಗಲಕೋಟೆ: ಲೋಕಸಭಾ ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿದ್ದ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ಇದೀಗ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ್ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಐಹೊಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​.ಕೆ. ಪಾಟೀಲ್, "ಕನಸ್ಸು ಕಾಣುತ್ತಿದ್ದರೆ, ಏನು ಮಾಡಲು ಆಗಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ‌. ಕರ್ನಾಟಕದ ಕಾಂಗ್ರೆಸ್ ನಾಲ್ಕು ಗ್ಯಾರಂಟಿಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಅಗಿರುವುದಕ್ಕೆ ಬಿಜೆಪಿಯವರು ಅಧೈರ್ಯಗೊಂಡಿದ್ದಾರೆ" ಎಂದರು.

"ಒಂದು ಯೋಜನೆ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದೇವೆ ನಾವು‌. ಇಂತಹ ಕ್ರಾಂತಿಕಾರಿ ಬದಲಾವಣೆ ಸಾಮಾಜಿಕ, ಆರ್ಥಿಕವಾಗಿ ಬಹು ದೊಡ್ಡ ಬದಲಾವಣೆಯಾಗಿದೆ. ಇದರಿಂದ ಹತಾಶರಾಗಿರುವ ಬಿಜೆಪಿಯವರು ಏನೇನೋ ಮಾತಾಡುತ್ತಿದ್ದಾರೆ, ಅದಕ್ಕೆ ಮಹತ್ವವಿಲ್ಲ" ಎಂದು ಹೇಳಿದರು.

"ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ ಜೋಡೆತ್ತುಗಳು. ಅವುಗಳ ಜತೆ ಕಳ್ಳೆತ್ತುಗಳಿವೆ" ಎಂದು ಶ್ರೀರಾಮುಲು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಯನ್ನು ಮುನ್ನೆಲೆಗೆ ತಂದ ಎಚ್​.ಕೆ. ಪಾಟೀಲ್​ ಇದೀಗ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net