ಆಂಧ್ರಪ್ರದೇಶ: ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯರ ಪೈಕಿ ತಮ್ಮ ನಟನೆ, ವಿಶೇಷ ಛಾಪು ಮೂಡಿಸುವ ಮೂಲಕ ಸಿನಿಪ್ರೇಕ್ಷಕರನ್ನು ಮನರಂಜಿಸುತ್ತಿರುವ ಬಹುಭಾಷಾ ತಾರೆ ನಟಿ ತ್ರಿಶಾ ಕೃಷ್ಣನ್ ಇದೀಗ ತಮಗೆ ಸಂಬಂಧಿಸಿದ ವಿವಾದವೊಂದಕ್ಕೆ ಸಿಲುಕಿದ್ದಾರೆ. ತ್ರಿಶಾ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಮಾಡಿದ ಲೈಂಗಿಕ ಟೀಕೆ ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಕಾಡಾನೆ ದಾಳಿ, ಗ್ರಾಮಾಂತರ ಶಾಸಕಿಯಿಂದ ಬೆಳೆ ಹಾನಿ ಪರಿಶೀಲನೆ
ಇತ್ತೀಚೆಗೆ ನಟ ಮನ್ಸೂರ್ ಅಲಿ ಖಾನ್ ನಟಿ ವಿರುದ್ಧ ಮಾಡಿದ ಲೈಂಗಿಕ ಟೀಕೆ ಕುರಿತು ಇದೀಗ ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯದಲ್ಲಿ ಸ್ವಯಂಪ್ರೇರಿತ ನಿಲುವನ್ನು ತೆಗೆದುಕೊಂಡಿದೆ. ಈ ಸಂಬಂಧಿತ ಸೆಕ್ಷನ್‌ಗಳಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸೂಚಿಸಿದೆ. ಸದ್ಯ ಈ ವಿಚಾರ ತೀವ್ರ ಚರ್ಚೆಯಾದ ಹಿನ್ನೆಲೆ ‘ಲಿಯೋ’ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್, ಕಾರ್ತಿಕ್ ಸುಬ್ಬರಾಜ್ ಸೇರಿದಂತೆ ಅನೇಕ ಕಲಾವಿದರು ನಟಿಗೆ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಡಿದ ಪೋಸ್ಟ್ ಹೀಗಿದೆ, “ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಶಾ ಕೃಷ್ಣ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ ಐಪಿಸಿ ಸೆಕ್ಷನ್ 509 ಬಿ ಮತ್ತು ಇತರ ಸಂಬಂಧಿತ ಕಾನೂನುಗಳನ್ನು ಜಾರಿಗೊಳಿಸಲು ಡಿಜಿಪಿಗೆ ನಿರ್ದೇಶನ ನೀಡುತ್ತಿದ್ದೇವೆ. ಇಂತಹ ಹೇಳಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯಗೊಳಿಸುತ್ತವೆ ಮತ್ತು ಅದನ್ನು ಖಂಡಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಮುರುಘಾಶ್ರೀ ಬಂಧನಕ್ಕೆ ಹೈಕೋರ್ಟ್ ತಡೆ; ಕಾರಣ ಏನು?
ವಿವಾದಕ್ಕೆ ಕಾರಣವೇನು?: ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಮನ್ಸೂರ್ ಅಲಿಖಾನ್ ಮಾತನಾಡಿ, ‘ಲಿಯೋ’ ಚಿತ್ರದಲ್ಲಿ ತ್ರಿಶಾ ಜತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ. ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ. ನನ್ನ ಹಿಂದಿನ ಚಿತ್ರಗಳಲ್ಲಿ ಬೇರೆ ನಾಯಕಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ಅಂದುಕೊಂಡಿದ್ದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದೇನಲ್ಲ. ಆದ್ರೆ, ಲಿಯೋ ಸಿನಿಮಾದಲ್ಲಿ ತ್ರಿಷಾ ಅವರ ಮುಖವನ್ನು ಕೂಡ ನನಗೆ ತೋರಿಸಲಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).