ಸಾಮಾಜಿಕ ಕಲ್ಯಾಣ ಯೋಜನೆಯಲ್ಲಿ 1.20 ಕೋಟಿ ಕಾರ್ಮಿಕರ ಸೇರ್ಪಡೆ ಗುರಿ: ಕಾರ್ಮಿಕ ಸಚಿವ ಸಂತೋಷ್​ ಲಾಡ್​

udp-20-santhosh
Published on

ಉಡುಪಿ: ರಾಜ್ಯದಲ್ಲಿ 1.80 ಕೋಟಿ ಕಾರ್ಮಿಕರು ಅಸಂಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ವಿವಿಧ ಮಂಡಳಿಗಳನ್ನು ರಚಿಸಲಾಗುತ್ತಿದ್ದು, ಈ ಮೂಲಕ 1.20 ಕೋಟಿ ಮಂದಿ ಸಾಮಾಜಿಕ ಕಲ್ಯಾಣ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಹೇಳಿದರು.

ಜಿಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್​ ಚಾಲಕರು, ಟೆಂಪೋ ಚಾಲಕರು, ಲಾರಿ, ರಿಾ, ಕಾರು ಸೇರಿ ರಾಜ್ಯದಲ್ಲಿ 35 ಲಕ್ಷ ಮಂದಿ ಕಮರ್ಷಿಯಲ್​ ಲೈಸೆನ್ಸ್​ ಪಡೆದವರಿದ್ದಾರೆ. ಕ್ಲೀನರ್ಗಳು, ಗ್ಯಾರೇಜ್​ ಮೆಕಾನಿಕ್​, ಟೈಯರ್​ ಅಂಗಡಿವರು ಸೇರಿ 50 ರಿಂದ 55 ಲಕ್ಷ ಮಂದಿ ಇದ್ದಾರೆ. ಟ್ರನ್ಸ್​ೋರ್ಟ್​ ಬೋರ್ಡ್​ನಿಂದ ನೇರವಾಗಿ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅದೇರೀತಿ ಸಿನಿಬಿಲ್​ ಮೂಲಕ ಸಿನೆಮಾ ಕ್ಷೇತ್ರದಲ್ಲಿರು ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ವಿವಿಧ ಸವಲತ್ತು ಲಭಿಸಲಿದೆ. ಮನೆಕೆಲಸ ವೃತ್ತಿಯಲ್ಲಿ 20 ಲಕ್ಷ ಮಂದಿ ಇದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 45 ಲಕ್ಷ ಸದಸ್ಯರಿದ್ದಾರೆ. ಇವರೆಲ್ಲರಿಗೂ ಯುನಿವರ್ಸಲ್​ ಕಾರ್ಡ್​ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ವಿವಿಧ ಬೇಡಿಕೆ ಸಲ್ಲಿಕೆ
ಜಿಲ್ಲೆಯ ವಿವಿಧ ಕಾರ್ಮಿಕ ಸಂಟನೆಗಳು ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ. ಕಟ್ಟಡ ಕಾರ್ಮಿಕ ಪೆನ್ಶನ್​ ವಯಸ್ಸು ಹೆಚ್ಚಳ, ನಕಲಿ ಗುರುತು ಪತ್ರ ತೆಗೆಯಲು ಹಾಗೂ ಟೈಲರ್ಸ್​ ವೆಲ್ಫೇರ್​ ಂಡ್​ ರಚಿಸಲು ಮನವಿ ನೀಡಿದ್ದಾರೆ ಎಂದರು.

9 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಹಿಂದಿನ ಸರ್ಕಾರ 13 ಸಾವಿರ ಕೋಟಿ ರೂ. ಇದ್ದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣವನ್ನು 6.5 ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಿದೆ. 39 ಲಕ್ಷ ಕಾರ್ಡ್​ಗಳಿಗೆ ಬೇಕಾಬಿಟ್ಟಿ ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ನಮ್ಮ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ನಕಲಿ ಕಾರ್ಡಗಳನ್ನು ತೆಗೆದುಹಾಕಲಾಗುವುದು. ಈ ವರ್ಷ ವಿದ್ಯಾರ್ಥಿ ವೇತನಕ್ಕೆ 13 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 9 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಯಾಗಿದೆ ಎಂದರು.

ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್​ ಮೊಹ್ಸಿನ್​, ಕಾರ್ಮಿಕ ಆಯುಕ್ತ ಜಿ.ಮಂಜುನಾಥ್​, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ಭಾರತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net