ಸ್ತನ ಕ್ಯಾನ್ಸರ್​​ ವಿರುದ್ಧ ಹೀನಾ ಖಾನ್​ ಹೋರಾಟ: ಕೆಲ ದಿನಗಳಿಂದ ಚಿಕಿತ್ಸೆ ಕಠಿಣವಾಗಿದೆ ಆದ್ರೂ ಬದುಕುವೇ ಎಂದ ನಟಿ! | Breast cancer

breast camcer
Published on

ಮುಂಬೈ: ಕೆಲ ತಿಂಗಳುಗಳಿಂದ ಸ್ತನ ಕ್ಯಾನ್ಸರ್(Breast cancer)​ ವಿರುದ್ಧ ಹೊರಾಡುತ್ತಿರುವ ಬಾಲಿವುಡ್​ ನಟಿ ಹೀನಾ ಖಾನ್​ ತಮ್ಮ ದೈನಂದಿನ ಚಟುವಟಿಕೆ ಮತ್ತು ಆರೋಗ್ಯವಾದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮೂರನೇ ಹಂತದ ಸ್ತನ ಕ್ಯಾನ್ಸರ್​ ಇದೆ ಎಂದು ಕೆಲ ದಿನಗಳಿಂದೆ ನಟಿ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಕ್ಯಾನ್ಸರ್​ಗೆ ಸಂಬಂಧಪಟ್ಟಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಬಗ್ಗೆ ಮತ್ತು ಅವರು ದಿನಚರಿ ಬಗ್ಗೆ ಅಗಾಗ್ಗೆ ತನ್ನ ಇನ್​ಸ್ಟಾಗ್ರಾಮ್​ ಪೇಜ್​​ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಕೂಡ ತಮ್ಮ ಚಿಕಿತ್ಸೆ ಬಗ್ಗೆ ಮತ್ತು ರೋಗದಿಂದ ಗುಣಮುಖರಾಗುವ ಭರವಸೆ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ವೊಂದನ್ನು ಹರಿಬಿಟ್ಟಿದ್ದಾರೆ.

''ಕಳೆದ 15-20 ದಿನಗಳಿಂದ ಚಿಕಿತ್ಸೆ ಸಂಬಂಧಪಟ್ಟಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ಕಠಿಣವಾಗಿದೆ. ನೋವುಗಳು ವೀಪರಿತವಾಗಿದೆ. ನಾನು ಅನುಭವಿಸಬೇಕಾದ ದೈಹಿಕ ಮಿತಿಯನ್ನು ದಾಟಿರುವೆ. ಆದರೆ, ಕುಗ್ಗದೆ ಭಯಪಡದೆ ನಾನು ಚಿಕಿತ್ಸೆಗೆ ಸ್ಪಂದಿಸಿದ್ದೇನೆ. ನಾನು ಇನ್ನು ಬದುಕಿರುವೇ, ಜೀವ ಇರವವರೆಗೂ ಹೋರಾಡುವೆ'' ಎಂದಿದ್ದಾರೆ.

'' ಎಲ್ಲಾ ನೋವು ಮತ್ತು ಹೆಚ್ಚಿನದನ್ನು ಪಡೆಯಲು ನಿಜವಾದ ಸಂತೋಷದ ಆಶಯಗೊಂದಿಗೆ ನಾನು ಧನಾತ್ಮಕ ಜೀವನ ನಡೆಸಲು ಸಮತೋಲನಾ ಕಂಡುಕೊಳ್ಳಬೇಕು. ಇದನ್ನು ಉದ್ದೇಶ ಪೂರ್ವಕವಾಗಿ ಕಂಡುಕೊಳ್ಳಬೇಡಿ, ಸ್ವಾಭಿಕವಾಗಿ ಅನುಸರಿಸಿ, ಅದು ನನಗೂ ಮತ್ತು ನಿಮಗೂ ನನ್ನ ಸಂದೇಶವಾಗಿದೆ. ಜೀವನದಲ್ಲಿ ಎಲ್ಲರೂ ವಿಜಯಶಾಲಿಗಳಾಗೋಣ'' ಎಂದಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net