ಪುಷ್ಪ-2 ಚಿತ್ರದ 'ಗಂಗಮ್ಮ ತಲ್ಲಿ' ವೇಷ ಧರಿಸಿ ಕುಣಿದ ವ್ಯಕ್ತಿ.. ಭಾರೀ ಸದ್ದು ಮಾಡುತ್ತಿದೆ ಈ ವೈರಲ್​ ವಿಡಿಯೋ | Pushpa-2

video (2)
Published on

ಕೇರಳ: ಇದೇ ಡಿ.05ರಂದು ವಿಶ್ವಾದ್ಯಂತ ಬಿಡುಗಡೆಯಾಗಿರುವ ಪುಷ್ಪ-2(Pushpa-2) ಸಿನಿಮಾ ಭಾರೀ ಹಿಟ್​ ಆಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸಿದೆ.

ಚಿತ್ರದ ತುಣುಕುಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತೀವೆ. ಅಲ್ಲದೇ ದೇವಿಯ ಸಾಂಗ್​ವೊಂದರಲ್ಲಿ ನಟ ಅಲ್ಲು ಅರ್ಜುನ್​ ಗಂಗಮ್ಮ ತಲ್ಲಿ(ಗಂಗಮ್ಮ ಜಾತ್ರೆ) ವೇಷ ಧರಿಸಿದ್ದ ಪಾತ್ರ ಸಖತ್​ ವೈರಲ್​ ಆಗಿದೆ. ಇದೇ ತರ ಅಲ್ಲು ಫ್ಯಾನ್ಸ್​ ಕೂಡ ವೇಷ ಧರಿಸಿ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ತುಣುಕುಗಳು ಸಹ ಎಲ್ಲಡೆ ಹರಿದಾಡುತ್ತಿವೆ.

ಕೇರಳದಲ್ಲಿ ಇದೀಗ ಅಭಿಮಾನಿಯೊಬ್ಬರು ಗಂಗಮ್ಮ ತಲ್ಲಿ ವೇಷ ಹಾಕಿ ಕುಣಿಯುತ್ತಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಹೌದು, ಕೇರಳ ಮೂಲದ ಮುಕೇಶ್​ ಮೋಹನ್​ ಎಂಬುವವರು ತಮ್ಮ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈವರೆಗೂ ಈ ಕ್ಲಿಪ್​ 5 ಮೀಲಿಯನ್​ ವಿಕ್ಷಣೆಯನ್ನು ಪಡೆದಿದೆ.

ಇನ್ನು ಈ ವಿಡಿಯೋದಲ್ಲಿ, 'ಇಲ್ಲಿನ ತ್ರಿಶೂರ್​ ಚಿತ್ರಮಂದಿರದ ಹೊರಗೆ ಅಭಿಮಾನಿಯೊಬ್ಬ ತನ್ನ ದೇಹದ ತುಂಬಾ ನೀಲಿ ಬಣ್ಣ ಲೇಪನ ಮಾಡಿಕೊಂಡಿದ್ದು, ಮುಖಕ್ಕೆ ಕೆಂಪು ಬಣ್ಣ ಹಾಕಿಕೊಂಡು ಪುಷ್ಪ-2ರ ಗಂಗಮ್ಮ ತಲ್ಲಿ ಅವತಾರ ತಾಳಿ ಡ್ರಮ್ಸ್​ಬೀಟ್​ಗಳಿಗೆ ಸಾವಿರಾರು ಜನರ ಮಧ್ಯ ಡ್ಯಾನ್ಸ್​ ಮಾಡುತ್ತಿದ್ದಾನೆ. ಅಲ್ಲದೆ, ಅವರ ಹೊಟ್ಟೆಯ ಮೇಲೆ ಅಲ್ಲು ಅರ್ಜುನ್​ ಅವರ ಪೋಟೋವನ್ನು ಚಿತ್ರಿಕರಿಸಿದ್ದು, ನೋಡುಗರನ್ನು ಆಶ್ಚರ್ಯಪಡಿಸುತ್ತಿದ್ದಾರೆ. ಇದೀಗ ಪುಷ್ಪ-2 ಸಿನಿಮಾದ ಜತೆ ಈ ಡ್ಯಾನ್ಸ್​ನ ಕ್ಲಿಪ್​ ಕೂಡ ಧೂಳ್​ ಎಬ್ಬಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ಈ ವ್ಯಕ್ತಿ ದಾಸನ್ ಎಂದು ಹೇಳಲಾಗಿದೆ. ಅಲ್ಲದೆ, ಇತ ಹುಲಿವೇಷಗಳನ್ನು ಹಾಕಿ ಬೀದಿಗಳಲ್ಲಿ ಕುಣಿವುದಕ್ಕೆ ಪ್ರಸಿದ್ಧಿ ಪಡಿದ್ದಾನೆ ಎಂದು ಹೇಳಲಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net