Himani Narwal Murder | ಮೊಬೈಲ್ ಚಾರ್ಜರ್​​​​ ವೈರ್​​​ನಿಂದ ಕತ್ತು ಹಿಸುಕಿ ಕೊಲೆ; ಆರೋಪಿ ಬಂಧನ.. ಹತ್ಯೆ ಹಿಂದಿನ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪೊಲೀಸರು

Untitled design (75)
Published on

ಚಂಡೀಗಢ: ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಹತ್ಯೆಗೆ(Himani Narwal Murder) ಸಂಬಂಧಿಸಿದಂತೆ ಹರಿಯಾಣ ಪೊಲೀಸರು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆಕೆಯನ್ನು ಕೊಲ್ಲಲು ಆರೋಪಿ ಮೊಬೈಲ್ ಚಾರ್ಜರ್ ಬಳಸಿದ್ದಾನೆ ಎಂದು ಹರಿಯಾಣ ಪೊಲೀಸರು ಸೋಮವಾರ(ಮಾರ್ಚ್​​ 3) ತಿಳಿಸಿದ್ದಾರೆ.

ಆರೋಪಿ ಶರಣಾಗಿಲ್ಲ ಆದರೆ ರೋಹ್ಟಕ್ ಪೊಲೀಸರಿಗೆ ಕೆಲವು ಮಾಹಿತಿ ಇದೆ ಎಂದು ಎಡಿಜಿಪಿ ಕೃಷ್ಣ ಕುಮಾರ್ ರಾವ್ ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಆರೋಪಿಯನ್ನು ದೆಹಲಿಯಿಂದ ಬಂಧಿಸಲಾಯಿತು. ಆತನ ಬಳಿಯಿದ್ದ ಮೃತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲು ಎಂಟು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಕೆ.ಕೆ. ರಾವ್ ಹೇಳಿದರು.

ಆರೋಪಿಯು ಜಜ್ಜರ್ ಜಿಲ್ಲೆಯ ಕನೌಂಡಾದಲ್ಲಿ ಮೊಬೈಲ್ ರಿಪೇರಿ ಅಂಗಡಿಯನ್ನು ಹೊಂದಿದ್ದಾನೆ. 30 ವರ್ಷದ ಆರೋಪಿ ಸಚಿನ್ ಅಲಿಯಾಸ್ ಟಿಲ್ಲು ವಿವಾಹಿತ. ಆತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈ ವಿಷಯದ ಬಗ್ಗೆ ಮಾಹಿತಿಯನ್ನು ದೆಹಲಿ ಪೊಲೀಸರೊಂದಿಗೆ ಹಂಚಿಕೊಳ್ಳಲಾ ಗಿದೆ. ಮಾರ್ಚ್ 2ರಂದು ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದರು, ನಂತರ ರೋಹ್ಟಕ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಪೊಲೀಸರ ಪ್ರಕಾರ, ಹಿಮಾನಿ ನರ್ವಾಲ್ ತನ್ನ ರೋಹ್ಟಕ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹಿಮಾನಿ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಆರೋಪಿ ಸಚಿನ್ ಸುಮಾರು ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮೃತರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಆರೋಪಿ ಫೆಬ್ರವರಿ 27ರಂದು ಹಿಮಾನಿ ಮನೆಗೆ ತಲುಪಿ ರಾತ್ರಿ ಅಲ್ಲಿಯೇ ತಂಗಿದ್ದ. ಫೆಬ್ರವರಿ 28ರಂದು ಇಬ್ಬರ ನಡುವೆ ಜಗಳ ನಡೆದಿದೆ. ಇದಾದ ನಂತರ ಸಚಿನ್ ಹಿಮಾನಿಯನ್ನು ಆಕೆಯ ಸ್ಕಾರ್ಫ್ ಮತ್ತು ಮೊಬೈಲ್ ಚಾರ್ಜರ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಹಿಮಾನಿಯ ಮನೆಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಇರಿಸಿ ಎಸೆಯಲಾಗಿದೆ.

ಜಗಳದಲ್ಲಿ ಆರೋಪಿಯ ಕೈಗಳಿಗೆ ಗಾಯಗಳಾಗಿವೆ. ಇದರಿಂದಾಗಿ ಹೊದಿಕೆಯ ಮೇಲೆ ರಕ್ತ ಕಲೆಯಾಯಿತು. ಆರೋಪಿಗಳು ಹಿಮಾನಿಯ ಉಂಗುರಗಳು, ಚಿನ್ನದ ಸರ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಆಭರಣಗಳನ್ನು ಚೀಲದಲ್ಲಿ ಇರಿಸಿ ಹಿಮಾನಿಯ ಸ್ಕೂಟರ್ ಅನ್ನು ಕನೌಂಡಾ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾರೆ. ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಆರೋಪಿ ಮತ್ತೆ ಹಿಮಾನಿ ಮನೆಗೆ ಹಿಂತಿರುಗಿದ್ದನು. ಇದಾದ ನಂತರ ಅವನು ಒಂದು ಆಟೋವನ್ನು ಬಾಡಿಗೆಗೆ ಪಡೆದು ಶವವನ್ನು ಸಂಪ್ಲಾ ಬಸ್ ನಿಲ್ದಾಣದಲ್ಲಿ ಎಸೆದಿದ್ದಾನೆ. ಇಷ್ಟು ಮಾತ್ರವಲ್ಲದೆ ಅವನು ಸ್ಕೂಟರ್ ಅನ್ನು ಮನೆಯಲ್ಲಿ ನಿಲ್ಲಿಸಿದ್ದನು ಎಂದು ಹೇಳಿದರು.

ಹಿಮಾನಿ ನರ್ವಾಲ್, ರೋಹ್ಟಕ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ನಾಯಕಿಯಾಗಿದ್ದರು. ಮಾರ್ಚ್ 1ರಂದು ರೋಹ್ಟಕ್ ಬಸ್ ನಿಲ್ದಾಣದಲ್ಲಿ ಹಿಮಾನಿಯ ಶವವು ವಾರಸುದಾರರಿಲ್ಲದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಕೊಲೆಗೂ ಮುನ್ನ ಹಿಮಾನಿ ಕೈಯಲ್ಲಿ ಮೆಹಂದಿ ಇತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆರೋಪಿ ಸಚಿನ್‌ನನ್ನು ಬಂಧಿಸಿದ ನಂತರ ಮೊಬೈಲ್ ಚಾರ್ಜರ್‌ನ ವೈರ್‌ನಿಂದ ಆಕೆಯನ್ನು ಕತ್ತು ಹಿಸುಕಿ ಸಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net