ಅತಿ ಔಷಧೋಪಚಾರ ರೇಷ್ಮೆಗೆ ಸಂಚಕಾರ!; ಹಿಪ್ಪುನೇರಳೆಗೆ ಶಿಫಾರಸು ಇಲ್ಲದ ಔಷಧ ಸಿಂಪಡಣೆ

Silk worm
Published on
‘ಅತಿಯಾದರೆ ಅಮೃತ ಕೂಡ ವಿಷ’ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳೆ ಉಳಿಸಿಕೊಳ್ಳಲು ರೈತರು ಸಿಂಪಡಣೆ ಮಾಡುವ ಔಷಧವೇ ಬೆಳೆ ಹಾನಿ ಮಾಡುತ್ತಿದ್ದು, ಅನ್ನದಾತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಕಳೆನಾಶಕ ಹಾಗೂ ಇತರ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧ ಹಿಪ್ಪುನೇರಳೆ ಸೊಪ್ಪನ್ನೇ ವಿಷವಾಗಿಸುತ್ತಿದ್ದು, ಈ ಸೊಪ್ಪು ತಿನ್ನುವ ರೇಷ್ಮೆ ಹುಳುಗಳು ಗೂಡು ಕಟ್ಟದೆ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

| ಕಿರುವಾರ ಎಸ್. ಸುದರ್ಶನ್, ಕೋಲಾರ 
ದಿನಗಳು ಕಳೆದು ರೇಷ್ಮೆ ಹುಳು ಮಾಗಿ ಚಂದ್ರಿಕೆಗೆ ಹಾಕಿದರೂ ಗೂಡು ಕಟ್ಟದ ಕಾರಣಕ್ಕೆ ಕೋಲಾರ ತಾಲೂಕು ಚಂದ್ರಗಾನಹಳ್ಳಿ ಗ್ರಾಮದ ರೈತ ಮಂಜುನಾಥ್ 400 ಮಟ್ಟಿ ಹುಳುಗಳನ್ನು ತಿಪ್ಪೆಗೆ ಎಸೆದರು. ಇದು ಇವರೊಬ್ಬರ ಕತೆಯಲ್ಲ. ಇದೇ ರೀತಿ ಹಲವು ರೈತರ ರೇಷ್ಮೆ ಹುಳುಗಳು ಗೂಡು ಕಟ್ಟದೆ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಕಾರಣ ಹುಡುಕಿ ಹೊರಟ ರೈತರಿಗೆ ಸಿಕ್ಕ ಉತ್ತರ, ತಾವೇ ಸಿಂಡಿಸುವ ಕ್ರಿಮಿನಾಶಕ ಔಷಧ ಹಾಗೂ ಹುಳುಸಾಕಣೆ ಮನೆಗಳ ನಿರ್ವಹಣೆಯಲ್ಲಿನ ವ್ಯತ್ಯಾಸ ಎಂಬುದು. ನಾಲ್ಕನೇ ಜ್ವರ ಎದ್ದು 10 ದಿನ ಕಳೆದ ಬಳಿಕ ರೇಷ್ಮೆ ಹುಳುಗಳು ಮಾಗುತ್ತವೆ. ಗೂಡು ಕಟ್ಟಲು ಚಂದ್ರಿಕೆಗೆ ಹುಳುಗಳನ್ನು ಹಾಕಲಾಗುತ್ತದೆ. ಆದರೆ ಹುಳುಗಳು ಗೂಡು ಕಟ್ಟದಿರುವುದನ್ನು ಕಂಡ ರೈತರು ರೇಷ್ಮೆ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿದ್ದಾರೆ. ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ರೇಷ್ಮೆ ಹುಳು ಹಾಗೂ ಸೊಪ್ಪಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದಾಗ ಹಿಪು್ಪನೇರಳೆ ತೋಟಗಳು, ಹುಳುಸಾಕಣೆ ಮನೆಗಳ ನಿರ್ವಹಣೆಯಲ್ಲಿ ಆದ ವ್ಯತ್ಯಾಸಗಳು ಸೇರಿ ಹಲವು ಸಮಸ್ಯೆ ಕಾರಣಗಳು ಎಂದು ಗೊತ್ತಾಗಿವೆ.

ಹಿಪ್ಪುನೇರಳೆಗೆ ರೋಗಬಾಧೆ: ಕೋಲಾರ ಜಿಲ್ಲೆಯಲ್ಲಿ 19,904.98 ಹೆಕ್ಟೇರ್ ಪ್ರದೇಶದಲ್ಲಿ ಹಿಪು್ಪ ನೇರಳೆ ಬೆಳೆದಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೆಲ ತೋಟಗಳ ಪಕ್ಕದಲ್ಲಿ ಟೊಮ್ಯಾಟೊ, ದ್ರಾಕ್ಷಿ, ಹೂವು ಸೇರಿ ವಿವಿಧ ತರಕಾರಿ ಬೆಳೆದಿರುತ್ತಾರೆ. ಆ ಬೆಳೆಗಳಿಗೆ ಸಿಂಪಡಣೆ ಮಾಡುವ ಔಷಧವು ಗಾಳಿಗೆ ಹಿಪು್ಪನೇರಳೆ ತೋಟದ ಮೇಲೆ ಬೀಳುತ್ತದೆ. ಹಿಪು್ಪನೇರಳೆಗೆ ನುಸಿ ಪೀಡೆ, ಎಲೆ ಮುದುಡು ರೋಗ, ಕೆಂಪು ಚುಕ್ಕಿ ರೋಗಗಳು ಹರಡುತ್ತವೆ. ತೋಟದಲ್ಲಿ ಬೆಳೆಯುವ ಕಳೆಯನ್ನು ಹಿಂದೆ ಕೂಲಿ ಕಾರ್ವಿುಕರಿಂದ ತೆರವು ಮಾಡಿಸಲಾಗುತ್ತಿತ್ತು. ಬದಲಾದ ತಂತ್ರಜ್ಞಾನದಿಂದ ರೈತರು ಯಂತ್ರಗಳಿಗೆ ಮಾರು ಹೋಗಿದ್ದು, ಕಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಕಳೆ ನಿಯಂತ್ರಣವಾದರೂ ಔಷಧದ ಅಂಶ ಸೊಪ್ಪಿಗೆ ಸೇರುತ್ತದೆ. ಈ ರೀತಿ ಕೀಟನಾಶಕ, ಕಳೆನಾಶಕ, ಸಪ್ಪೆ ರೋಗ, ವಿಷಪೂರಿತ ಸೊಪು್ಪ ತಿಂದ ಹುಳುಗಳು ಗೂಡು ಕಟ್ಟುತ್ತಿಲ್ಲ. ಹಾಗಾಗಿ ಇಲಾಖೆಯಿಂದ ಶಿಫಾರಸು ಮಾಡದ ಔಷಧಗಳನ್ನು ಯಾವುದೇ ಕಾರಣಕ್ಕೂ ಸಿಂಪಡಿಸಬಾರದು ಎಂದು ರೇಷ್ಮೆ ಕೃಷಿ ಇಲಾಖಾಧಿಕಾರಿಗಳು ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ರೇಷ್ಮೆ ಕೃಷಿಯು ಪ್ರಮುಖ ಬೆಳೆಯಾಗಿದೆ. ಸುಮಾರು 19,209 ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಮಿಶ್ರ ತಳಿ ಹಾಗೂ ದ್ವಿ ತಳಿ (ಬೈವೋಲ್ಟೈನ್) ಗೂಡನ್ನು ಉತ್ಪಾದನೆ ಮಾಡುತ್ತಾರೆ. ಕೋಲಾರ, ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು, ಮಾಲೂರು, ಕೆಜಿಎಫ್ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೇಷ್ಮೆಕೃಷಿಯನ್ನೇ ಅವಲಂಬಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿ ಬೆಳೆಗಾರರು ಅನೇಕ ಸಮಸ್ಯೆ ಎದುರಿಸು ತ್ತಿದ್ದಾರೆ. ಕೀಟನಾಶಕ, ಕಳೆನಾಶಕ, ಸಪ್ಪೆ ರೋಗ, ವಿಷಪೂರಿತ ಸೊಪ್ಪು ತಿಂದ ಹುಳುಗಳು ಗೂಡು ಕಟ್ಟದೆ ಇರುವ ಬಗ್ಗೆ ದೂರು ಬಂದಿವೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ತರಬೇತಿ ನೀಡಲಾಗುತ್ತಿದೆ. | ಎಸ್.ಎನ್. ಶ್ರೀನಿವಾಸ್, ಜಿಲ್ಲಾ ಉಪ ನಿರ್ದೇಶಕ, ರೇಷ್ಮೆ ಇಲಾಖೆ, ಕೋಲಾರ ಡಿಎಪಿ ರಸ ಗೊಬ್ಬರವನ್ನು ಮೀತಿಮೀರಿ ನೀಡುತ್ತಿರು ವುದರಿಂದ ನಿಧಾನವಾಗಿ ಬೆಳೆಗೆ ವಿಷ ಸೇರುತ್ತಿದೆ. ಸೊಪು್ಪ, ಹುಳುಗಳನ್ನು ತಲಘಟ್ಟಪುರ ರೇಷ್ಮೆ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇಲಾಖೆ ಯವರು ಸೂಚಿಸಿದ ಮಾರ್ಗಗಳನ್ನು ಅನುರಿಸಿದಾಗ ರೈತರು ಸಮಸ್ಯೆಗಳಿಂದ ದೂರವಾಗಬಹುದು. | ಮಂಜುನಾಥ್, ರೇಷ್ಮೆ ಬೆಳೆಗಾರ ತೋರಗನದೊಡ್ಡಿ, ಕೋಲಾರ

ಶಿಫಾರಸು ಪಾಲನೆ ಮಾಡಿ: ವೈಜ್ಞಾನಿಕವಾಗಿ ಹಿಪು್ಪನೇರಳೆ ತೋಟ ನಿರ್ವಹಣೆ ಮಾಡಬೇಕು. ರೋಗಗಳು ಕಂಡು ಬಂದಾಗ ತಜ್ಞರು ಶಿಫಾರಸು ಮಾಡಿದ ಔಷಧ ಸಿಂಪಡಿಸಬೇಕು. ಆಗ ಮಾತ್ರ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಗುಣಮಟ್ಟದ ಗೂಡು ಉತ್ಪಾದನೆ ಮಾಡಬಹುದು ಎಂದು ಚಿಂತಾಮಣಿ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಡಾ.ರಾಜಣ್ಣ ತಿಳಿಸಿದ್ದಾರೆ.

ಕೆ.ಸಿ.ವ್ಯಾಲಿ ನೀರಿನ ಆತಂಕ: ಕೆ.ಸಿ.ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ತ್ಯಾಜ್ಯ ನೀರನ್ನು 2 ಹಂತ ದಲ್ಲಿ ಶುದ್ಧೀಕರಣ ಮಾಡಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಈ ನೀರು ತರಕಾರಿ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದ್ದು, ಅದೇ ರೀತಿ ಹಿಪು್ಪನೇರಳೆ ಬೆಳೆಯ ಮೇಲೂ ಪರಿಣಾಮ ಬೀರುತ್ತಿರಬಹುದು ಎಂಬ ಆತಂಕ ಎದುರಾಗಿದೆ. ಕ್ಯಾಲನೂರು, ವೇಮಗಲ್ ಭಾಗದಲ್ಲಿ ಈ ಸಮಸ್ಯೆ ಕಂಡು ಬಂದಿದೆ.

ಹಲವೆಡೆ ಇದೇ ಸಮಸ್ಯೆ: ರಾಮನಗರ ಜಿಲ್ಲೆಯ ಹಲವು ಕಡೆ ದುಷ್ಪರಿಣಾಮ ಎದುರಾಗಿದ್ದು, ರೇಷ್ಮೆ ಹುಳುಗಳು ಸತ್ತಿವೆ. ಕೆಲವು ಕಡೆಗಳಲ್ಲಿ ನಾಲ್ಕನೇ ಜ್ವರದಲ್ಲಿ ರೇಷ್ಮೆ ಬೆಳೆಗಾರರು ಹುಳುಗಳನ್ನು ತಿಪ್ಪೆಗೆ ಎಸೆದಿದ್ದಾರೆ. ಇದಕ್ಕೆ ನಿಖರ ಕಾರಣ ಪತ್ತೆಯಾಗಿಲ್ಲ ಎನ್ನಲಾಗಿದೆ. ಸೊಪ್ಪಿಗೆ ನುಸಿ ಕಾಣಿಸಿಕೊಂಡ ಕಾರಣ, ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಿದ್ದೆ ಇದಕ್ಕೆ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಇಂಥ ಪರಿಸ್ಥಿತಿ ಕಂಡುಬಂದಿದೆ. ಅಕ್ಕಪಕ್ಕದ ತೋಟಗಾರಿಕೆ ಬೆಳೆಗಳಿಗೆ ಬಳಸುವ ಕ್ರಿಮಿನಾಶಕ ಹಾಗೂ ಕಳೆನಾಶಕಗಳ ಸಿಂಪಡಣೆಯಿಂದ ರೇಷ್ಮೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜತೆಗೆ ಕೆಲವು ರೈತರು ಎಲೆಸುಳಿ ರೋಗ ಮತ್ತಿತರ ರೋಗ ನಿಯಂತ್ರಣಕ್ಕೆ ಅತಿಯಾದ ಕ್ರಿಮಿನಾಶಕ ಬಳಸುವುದರಿಂದ ಇಂಥ ಪರಿಸ್ಥಿತಿ ಎದುರಾಗಿದೆ ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಪ್ರಭಾಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net