

, trains cancelled, schools shut in 2 regions
ಚೆನ್ನೈ: ತಮಿಳು ನಾಡಿನ ಹಿಂಗಾರು ಮಳೆ ಚುರುಕುಗೊಂಡಿದ್ದು, ಹಲವೆಡೆ ಭಾರಿ ಮಳೆಯಾಗಿದೆ. ಇದೇ ಸಂದರ್ಭದಲ್ಲಿ ನಾನಾಕಡೆ ಭೂಕುಸಿತ ಸಂಭವಿಸಿದ್ದು, ಕೆಲವು ಕಡೆ ಪ್ರವಾಹಕ್ಕೆ ಕಾರಣವಾಗಿದೆ. ಪುದುಚೇರಿಯ ತಿರುವರೂರ್ ಮತ್ತು ಕಾರೈಕ್ಕಲ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ನೀಲಗಿರಿ ಮೌಂಟೇನ್ ರೈಲು ಸೇವೆ ರದ್ದುಗೊಳಿಸಲಾಗಿದೆ.
ಈಶಾನ್ಯ ಮಾನ್ಸೂನ್ ಈ ಪ್ರದೇಶದಲ್ಲಿ ತೀವ್ರಗೊಂಡಿದ್ದರಿಂದ ಭಾರಿ ಮಳೆಯಾಗುತ್ತಿದೆ. ಕನಿಷ್ಠ 12 ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಿರುವರೂರ್ ಜಿಲ್ಲೆ ಮತ್ತು ಪುದುಚೇರಿಯ ಕಾರೈಕ್ಕಲ್‌ನಲ್ಲಿ ಎರಡು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಂಜಾವೂರು, ತಿರುವಾರೂರ್, ನಾಗಪಟ್ಟಣಂ, ಮೈಲಾಡುತುರೈ, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ವಿರುಧುನಗರ, ತೂತುಕುಡಿ, ತೆಂಕಾಸಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಚೆನ್ನೈನ ಐಎಂಡಿ ಮುನ್ಸೂಚನೆ ನೀಡಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ನೀಲಗಿರಿ ಮೌಂಟೇನ್ ರೈಲ್ವೆಯ ಕಲ್ಲಾರ್ ಮತ್ತು ಕುನ್ನೂರ್ ವಿಭಾಗದ ನಡುವಿನ ಹಳಿಯಲ್ಲಿ ಭೂಕುಸಿತ ಮತ್ತು ಮರಗಳು ಬಿದ್ದ ಕಾರಣ ರೈಲನ್ನು ನವೆಂಬರ್ 16 ರವರೆಗೆ ಸೇವೆಯನ್ನು ರದ್ದುಗೊಳಿಸಿದೆ. ಮೆಟ್ಟುಪಾಳ್ಯಂನಿಂದ ಉದಗಮಂಡಲಕ್ಕೆ ಸಂಚರಿಸುವ 2 ಪ್ಯಾಸೆಂಜರ್ ರೈಲುಗಳನ್ನು ನವೆಂಬರ್ 10 ರಿಂದ ನವೆಂಬರ್ 16 ರವರೆಗೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧುರೈ, ಕೊಯಮತ್ತೂರು ಮತ್ತು ತೂತುಕುಡಿ ಸೇರಿದಂತೆ ಹಲವು ನಗರಗಳಲ್ಲಿ ಗುರುವಾರ ತೀವ್ರ ಜಲಾವೃತವಾಗಿತ್ತು. ಕೊಯಮತ್ತೂರಿನ ಕುಂಜಪ್ಪ-ಪನೈ ಬಳಿಯ ರಸ್ತೆ ಮತ್ತು ಕೋಟಗಿರಿ ಮೆಟ್ಟುಪಾಳ್ಯಂ ಪ್ರದೇಶದ ಮೆಟ್ಟುಪಾಳ್ಯಂ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ಕೊಮೊರಿನ್ ಪ್ರದೇಶದ ಮೇಲೆ ಚಂಡಮಾರುತದ ಪರಿಚಲನೆ ಮತ್ತು ಬಲವಾದ ಪೂರ್ವ/ಈಶಾನ್ಯ ಮಾರುತಗಳು, ಜೊತೆಗೆ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಯಾಯು ಭಾರವು ರಾಜ್ಯದಲ್ಲಿ ತೀವ್ರ ಮಳೆಗೆ ಕಾರಣವಾಗಿದೆ.