ಖಲಿಸ್ತಾನ್ ಭಯೋತ್ಪಾದಕರಿಂದ ಏರ್ ಇಂಡಿಯಾ ಪ್ರಯಾಣ ಬಹಿಷ್ಕಾರ: ಗಂಭೀರವಾಗಿ ಪರಿಗಣಿಸ್ತೇವೆ ಎಂದ ಕೆನಡಾ!

Canada
Published on

ಒಟ್ಟಾವಾ: ಏರ್ ಇಂಡಿಯಾ ವಿಮಾನಗಳಲ್ಲಿ ನವೆಂಬರ್ 19 ರಿಂದ ಪ್ರಯಾಣ ನಡೆಸದಂತೆ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳಲ್ಲಿನ ಎಚ್ಚರಿಕೆಯನ್ನು ಫೆಡರಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವು ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ವಿಶೇಷವಾಗಿ ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮುಂಜಾಗ್ರತೆ ಮತ್ತು ಕ್ರಮಗಳನ್ನು ವಹಿಸುತ್ತೇವೆ ಎಂದು ಎಂದು ಕೆನಡಾದ ಸಾರಿಗೆ ಸಚಿವ ಪಾಬ್ಲೊ ರೊಡ್ರಿಗಸ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವಾರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳಲ್ಲಿ "ನವೆಂಬರ್ 19 ರ ನಂತರ ಏರ್ ಇಂಡಿಯಾವನ್ನು ಪ್ರಯಾಣ ಮಾಡಬಾರದು, ಒಂದು ವೇಳೆ ಮಾಡಿದರೆ ನಿಮ್ಮ ಜೀವಕ್ಕೆ ಅಪಾಯವಿದೆ" ಎಂದು ಖಲಿಸ್ತಾನಿ ಸಜ್ಜು, ಸಿಖ್ಸ್ ಫಾರ್ ಜಸ್ಟಿಸ್‌ನ ಸಾಮಾನ್ಯ ಸಲಹೆಗಾರ ಗುರುಪತ್‌ವಂತ್ ಸಿಂಗ್ ಪನ್ನುನ್ ಗೆ ಸಂಬಂಧಿಸಿದ ವೀಡಿಯೊದಲ್ಲಿ ಸಿಖ್​ರಿಗೆ ಎಚ್ಚರಿಕೆ ನೀಡಡಲಾಗಿತ್ತು.

ಇದು ಬೆದರಿಕೆಯಲ್ಲ, ಬದಲಿಗೆ ಭಾರತೀಯ ವ್ಯವಹಾರಗಳನ್ನು ಬಹಿಷ್ಕರಿಸುವ ಕರೆಯಾಗಿದೆ. ಕೆನಡಾವು ಸುಮಾರು 770,000 ಸಿಖ್​ರಿಗೆ ನೆಲೆಯಾಗಿದೆ, ಅವರು ಒಟ್ಟಾರೆ ಜನಸಂಖ್ಯೆಯ ಸುಮಾರು ಎರಡು ಪ್ರತಿಶತವನ್ನು ಹೊಂದಿದ್ದಾರೆ ಎಂದು ಪಾಬ್ಲೊ ರೊಡ್ರಿಗಸ್ ಹೇಳಿದರು.

ಕಳೆದ ಜೂನ್​ನಲ್ಲಿ ವ್ಯಾಂಕೋವರ್ ಬಳಿ ಕೆನಡಾದ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಯಲ್ಲಿ ಭಾರತೀಯ ಏಜೆಂಟರು ಪಾತ್ರ ವಹಿಸಿದ್ದಾರೆ ಎಂಬ ಆರೋಪಗಳನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಎತ್ತಿದ್ದರು. ಅಷ್ಟೇ ಅಲ್ಲ, ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ್ದರು. ಆದರೆ ಭಾರತವು ಕೆನಡಾ ಆರೋಪವನ್ನು "ಅಸಂಬದ್ಧ" ಎಂದು ತಳ್ಳಿಹಾಕಿತ್ತು. ಕೆನಡಾ ನಡೆ ಖಂಡಿಸಿ ಆ ದೇಶದ ರಾಜತಾಂತ್ರಿಕರನ್ನು ಭಾರತದಿಂದ ವಾಪಸ್​ ಕರೆಸಿಕೊಳ್ಳುವಂತೆ ಒತ್ತಾಯಿಸಿತ್ತು. ಅಲ್ಲಿಂದ ಮುಂದೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net