More

    ದೆಹಲಿ ವಾಯುಮಾಲಿನ್ಯಕ್ಕೆ ತಾತ್ಕಾಲಿಕ ಪರಿಹಾರ ಒದಗಿಸಿತು ತುಂತುರು ಮಳೆ!

    ನವದೆಹಲಿ: ರಾಷ್ಟ್ರರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ರಾತ್ರಿ ತುಂತುರು ಮಳೆಯಾಗಿದ್ದು ವಾಯುಮಾಲಿನ್ಯಕ್ಕೆ ಸ್ವಲ್ಪ ಪಟ್ಟಿಗೆ ಪರಿಹಾರವನ್ನು ತಂದಿದೆ.

    ಇದನ್ನೂ ಓದಿ: ಈ ದೀಪಾವಳಿಯನ್ನು ಭಾರತೀಯರ ಪರಿಶ್ರಮದ ಹಬ್ಬವನ್ನಾಗಿ ಆಚರಿಸೋಣ: ಪ್ರಧಾನಿ ಮೋದಿ ಕರೆ

    ಈ ಮಳೆಯಿಂದ ಮಂಜು ಮಿಶ್ರಿತ ಕಲುಷಿತ ವಾಯು ಬಹುತೇಕ ತೆರವುಗೊಂಡಿದೆ ಮತ್ತು ಗಾಳಿಯ ಗುಣಮಟ್ಟವು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ದೀಪಾವಳಿಗೆ ಮುನ್ನ ಭಾನುವಾರದಂದು ಹೊಗೆಯ ಮಂಜು ಸರಾಗವಾಗಿ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಹವಾಮಾನ ಸಂಸ್ಥೆ ನಿರೀಕ್ಷಿಸಿದೆ.

    ಕಲುಷಿತ ಗಾಳಿಯನ್ನು ಕಡಿಮೆ ಮಾಡಲು ಮಳೆಯಾಗದಿದ್ದರೆ ಕೃತಕ ಮಳೆ ತರಿಸಬೇಕೆಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ ಸರ್ಕಾರಕ್ಕೆ ತಿಳಿಸಿತ್ತು ಈ ಚರ್ಚೆ ಮಧ್ಯೆ ಮಳೆ ಬಂದಿದೆ.

    ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಮಟ್ಟಕ್ಕಿಂತ 100 ಪಟ್ಟು ಹೆಚ್ಚು ಹಾನಿಕಾರಕ ಕಣಗಳ ಸಾಂದ್ರತೆಯನ್ನು ದೆಹಲಿ ಸುತ್ತಲಿನ ವಾಯು ಕಂಡಿತ್ತು. ಕಳೆದ ವಾರ ಮಾಲಿನ್ಯ ತೀವ್ರ ಹದಗೆಟ್ಟಿದ್ದು ಜನ ಶೀತ ಸಂಬಂಧಿ ಕಾಯಿಲೆಗಳಿಂದ ತತ್ತರಿಸಿದ್ದರು. ಗುರುವಾರದವರೆಗೆ ಇದು ವಿಶ್ವದ ಅತ್ಯಂತ ಕಲುಷಿತ ನಗರವಾಗಿತ್ತು.

    ಶುಕ್ರವಾರ ಬೆಳಗ್ಗೆ 7 ಗಂಟೆಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ 407 ಎಕ್ಯೂಐ ಇದೆ. ಎಂದು ಸರ್ಕಾರದ ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆ ಎಸ್ಎಎಫ್​ಎಆರ್​ನ ಅಂಕಿಅಂಶಗಳು ತಿಳಿಸಿವೆ. ಕಳೆದ ಭಾನುವಾರ ಎಕ್ಯೂಐ – 483 ಅಂಕಗಳೊಂದಿಗೆ ವಿಶ್ವದಲ್ಲೇ ಅಗ್ರಸ್ಥಾನದಲ್ಲಿತ್ತು.

    ಏಪ್ರಿಲ್​ವರೆಗೆ ಎಲ್ ನಿನೋ ಹಾವಳಿ: ವಿಶ್ವ ಹವಾಮಾನಶಾಸ್ತ್ರ ಸಂಸ್ಥೆ ವರದಿ ಉಲ್ಲೇಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts