More

    ಏಪ್ರಿಲ್​ವರೆಗೆ ಎಲ್ ನಿನೋ ಹಾವಳಿ: ವಿಶ್ವ ಹವಾಮಾನಶಾಸ್ತ್ರ ಸಂಸ್ಥೆ ವರದಿ ಉಲ್ಲೇಖ

    ವಾಷಿಂಗ್ಟನ್: ಪ್ರಸಕ್ತ ಎಲ್ ನಿನೋ ಹವಾಮಾನ ಮಾದರಿ 2024ರ ಏಪ್ರಿಲ್​ವರೆಗೆ ಮುಂದುವರಿಯಲಿದೆ ಎಂದು ವಿಶ್ವ ಹವಾಮಾನಶಾಸ್ತ್ರ ಸಂಸ್ಥೆ (ಡಬ್ಲ್ಯುಎಂಒ) ಬುಧವಾರ ಹೇಳಿದೆ. ನೈಸರ್ಗಿಕವಾಗಿ ಉಂಟಾಗುವ ಈ ವಿದ್ಯಮಾನವು ಉತ್ತರ ಗೋಳಾರ್ಧದ ಚಳಿಗಾಲದ ವರೆಗೆ ಮುಂದುವರಿಯುವ ಸಾಧ್ಯತೆ ಶೇ.90ರಷ್ಟಿದೆ ಎಂದು ಡಬ್ಲ್ಯುಎಂಒ ತಿಳಿಸಿದೆ. ಅಮೆರಿಕ ಸರ್ಕಾರದ ಹವಾಮಾನ ಮುನ್ಸೂಚನೆ ಸಂಸ್ಥೆ ಕೂಡ ಕಳೆದ ತಿಂಗಳು ಇದೇ ರೀತಿಯ ಭವಿಷ್ಯ ನುಡಿದಿತ್ತು.

    ಏನಿದು ಎಲ್ ನಿನೋ?: ಎಲ್ ನಿನೋ ಹವಾಮಾನದ ಮೇಲೆ ಪರಿಣಾಮ ಬೀರುವ ಒಂದು ‘ವಾಯುಗುಣ ಚಕ್ರ’ವಾಗಿದೆ. ಪೆಸಿಫಿಕ್ ಮಹಾಸಾಗರದ ಉಷ್ಣವಲಯದ ಪಶ್ಚಿಮ ಭಾಗದಲ್ಲಿನ ಬಿಸಿ ನೀರು ಭೂ ಮಧ್ಯ ರೇಖೆಯ ಉದ್ದಕ್ಕೂ ಸಾಗಿ ದಕ್ಷಿಣ ಅಮೆರಿಕ ಕರಾವಳಿಯತ್ತ ಪೂರ್ವಾಭಿಮುಖವಾಗಿ ಸಾಗುತ್ತದೆ. ಈ ಮೂಲಕ ಎಲ್ ನಿನೋ ಹವಾಗುಣ ಚಕ್ರ ಆರಂಭವಾಗುತ್ತದೆ. ಸಾಗರದ ಬಿಸಿ ನೀರು ಸಾಮಾನ್ಯವಾಗಿ ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ ಬಳಿ ಸಾಗಿ ಬರುತ್ತದೆ. ಆಗ ಏಷ್ಯಾಖಂಡ ಮತ್ತು ಭಾರತದ ಮೇಲೆ ಅದರ ಪರಿಣಾಮ ತಟ್ಟುತ್ತದೆ. ಭಾರತ ಮಾತ್ರವಲ್ಲದೆ ದಕ್ಷಿಣ ಅಮೆರಿಕ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕೂಡ ಎಲ್ ನಿನೋ ಪರಿಣಾಮ ಇರುತ್ತದೆ. ಕಾಡ್ಗಿಚ್ಚು, ಚಂಡಮಾರುತ ಮತ್ತು ಸುದೀರ್ಘ ಬರಗಾಲಗಳಿಗೆ ಕೂಡ ಅದು ಕಾರಣವಾಗುತ್ತದೆ. ಈ ಹವಾಮಾನ ವೈಪರೀತ್ಯ ಈಗಾಗಲೇ ಜಗತ್ತಿನ ಬಹುತೇಕ ಭಾಗದಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದೆ.

    2023 ಅತ್ಯಂತ ಬಿಸಿ ವರ್ಷ?
    ದಾಖಲಿತ ಮಾಹಿತಿ ಪ್ರಕಾರ 2023 ಅತ್ಯಂತ ಬಿಸಿ ವರ್ಷವಾಗುವ ಹಾದಿಯಲ್ಲಿದೆ ಎಂದು ಡಬ್ಲ್ಯುಎಂಒ ಹೇಳಿದೆ. ಎಲ್ ನಿನೋ ಪರಿಣಾಮ ಭಾರತದಲ್ಲೂ ಸಾಕಷ್ಟು ಗೋಚರವಾಗಿದೆ. ಕರ್ನಾಟಕ ಸಹಿತ ದೇಶದ ಅನೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ಭೀಕರ ಬರ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಈಗಲೇ ಹಲವು ಪ್ರದೇಶದಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಜತೆಗೆ ತಾಪಮಾನದಲ್ಲೂ ಏರಿಕೆ ಕಂಡುಬಂದಿದೆ. ಜಾಗತಿಕ ಹವಾಮಾನ ವೈಪರೀತ್ಯದ ಜತೆಗೆ ಎಲ್ ನಿನೋ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.

    kmf ನಿಂದ ಈ ಬಾರಿ ದಾಖಲೆಯ ಸಿಹಿ ಮಾರಾಟ

    kmf ನಿಂದ ಈ ಬಾರಿ ದಾಖಲೆಯ ಸಿಹಿ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts